ಮಂಡ್ಯ(Mandya): ನಗರದ ಸರ್‌ಎಂ ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದ ಅಭಿವೃದ್ಧಿ ಸಂಬಂಧ ಮಂಗಳವಾರ ಜಿಲ್ಲಾ ಉಸ್ತುವಾರಿ ಮತ್ತು ಅಬಕಾರಿ ಸಚಿವ ಕೆ.ಗೋಪಾಲಯ್ಯ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಕೆ.ಗೋಪಾಲಯ್ಯ, ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣವನ್ನು.10.00 ಕೋಟಿಗಳ ವೆಚ್ಚದಲ್ಲಿ ಉನ್ನತೀಕರಿಸಿ ಅತ್ಯುತ್ತಮ ದರ್ಜೆಯ ಸವಲತ್ತುಗಳನ್ನು ಒದಗಿಸಲು ಸಾರ್ವಜನಿಕರಿಗೆ ಕ್ರಮವಹಿಸಲಾಗುವುದೆಂದು ಮುಖ್ಯಮಂತ್ರಿಗಳು ಘೋಷಿಸಿದ್ದ ಹಿನ್ನೆಲೆಯಲ್ಲಿ 997 ಲಕ್ಷ ರೂ ವೆಚ್ಚದಲ್ಲಿ 400 ಮೀಟರ್ ಸಿಂಥೆಟಿಕ್ ಅಥ್ಲೆಟಿಕ್ ಟ್ರ‍್ಯಾಕ್ ಅಳವಡಿಸುವುದು , ಪೇವರ್ಸ ಅಳವಡಿಸುವುದು ಹಾಗೂ ಇತರ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಸರ್ಕಾರದಿಂದ ಆಡಳಿತಾತ್ಮಕ ಅನುಮೋದನೆ ನೀಡಲಾಗಿತ್ತು.
ಆದರೆ ಮಂಡ್ಯ ನಗರದ ನಾಗರೀಕರು ಸಿಂಥೇಟಿಕ್ ಅಥ್ಲೆಟಿಕ್ ಟ್ರಾö್ಯಕ್ ವಿಚಾರವಾಗಿ ವಿರೋಧ ವ್ಯಕ್ತಪಡಿಸಿದ್ದು ಹಿನ್ನೆಲೆಯಲ್ಲಿ ಬಿಡ್ ಮರು ಟೆಂಡರ್ ಕರೆಯಲಾಗಿತ್ತು. ಇದೀಗ ಬೆಂಗಳೂರಿನ ಶ್ರೀ ಭುವನೇಶ್ವರಿ ಕನ್ಸಟ್ರಕ್ಷನ್ ಪ್ರೈ.ಲಿ ಇವರಿಗೆ ಟೆಂಡರ್ ಆಗಿದೆ ಎಂದರು.
ಟೆAಡರ್ ಅನ್ವಯ ಸರ್.ಎಂ.ವಿ. ಕ್ರೀಡಾಂಗಣದ ಸಂಪೂರ್ಣ ಪ್ರೇಕ್ಷಕರ ಗ್ಯಾಲರಿಗೆ ಮೇಲ್ಮಾವಣಿ ನಿರ್ಮಿಸುವುದು ಮತ್ತು ಬಣ್ಣ ಬಳಿಯುವುದು , ಹೊರಾಂಗಣ ಕ್ರೀಡಾಂಗಣದ ಸುತ್ತಲೂ ಒಳಚರಂಡಿ ವ್ಯವಸ್ಥೆ ಕಾಮಗಾರಿ ಕೈಗೊಳ್ಳುವುದು ,400 ಮೀಟರ್ ಮಡ್ ಟ್ರ‍್ಯಾಕ್ ನಿರ್ಮಿಸುವುದು,ಆಡಳಿತ ಕಛೇರಿ ಹಾಗೂ ಶೌಚಾಲಯಗಳನ್ನು ನವೀಕರಿಸುವುದು, ಹೊಡ್ಡು ಮಣ್ಣಿಗೆ ಪಿಟ್ಟಿಂಗ್ ಮಾಡುವುದು, ವಿವಿಧ ಕ್ರೀಡಾ ಅಂಕಣಗಳ ನವೀಕರಣ ಹಾಗೂ ಇನ್ನಿತರೆ ದುರಸ್ಥಿ ಕಾಮಗಾರಿಗಳನ್ನು ಕೈಗೊಳ್ಳುವ ಕುರಿತು ಸಚಿವರು ಸೂಕ್ತ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ರೇಷ್ಮೆ ಮತ್ತು ಯುವಜನ ಸಬಲೀಕರಣ ಖಾತೆ ಸಚಿವ ಡಾ.ಕೆ.ಸಿ.ನಾರಾಯಣ ಗೌಡ, ಶಾಸಕ ಶ್ರೀನಿವಾಸ್, ಜಿಲ್ಲಾಧಿಕಾರಿ ಎಸ್ ಅಶ್ವಥಿ, ಎಸ್‌ಪಿ ಯತೀಶ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.