ಬೆಂಗಳೂರು(Bengaluru): ಮಹಾಲಕ್ಷ್ಮಿ ಲೇ ಔಟ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೃಷ್ಣಾನಂದ ನಗರದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ಸ್ಥಳೀಯ ಶಾಸಕರೂ ಆದ ಅಬಕಾರಿ ಸಚಿವ ಕೆ.ಗೋಪಾಲಯ್ಯ ವೀಕ್ಷಿಸಿದರು.
ಬುಧವಾರ ಮಧ್ಯಾಹ್ನ ಶಾಲೆಗೆ ದೀಢೀರ್ ಭೇಟಿ ನೀಡಿದ ಸಚಿವರು ತರಗತಿಗಳಲ್ಲಿ ಪಾಠ ಆಲಿಸುತ್ತಿದ್ದ ಮಕ್ಕಳನ್ನು ಭೇಟಿ ಮಾಡಿ ಪಾಠ ಪ್ರವಚನಗು ಹೇಗೆ ನಡೆಯುತ್ತಿವೆ ಎಂದು ವಿಚಾರಿಸಿದರು.
ಮಕ್ಕಳ ಹಾಜರಾತಿ, ಶಿಕ್ಷಣದ ಗುಣಮಟ್ಟ, ಶೈಕ್ಷಣಿಕ ಪ್ರಗತಿ ಕುರಿತು ಶಾಲಾ ಶಿಕ್ಷಕರ ಜೊತೆ ಮಾತುಕತೆ ನಡೆಸಿ ಉತ್ತಮ ಪ್ರಜೆಗಳನ್ನು ನಿರ್ಮಾಣ ಮಾಡುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಬಿಬಿಎಂಪಿ ಮಾಜಿ ಸದಸ್ಯ ಮಹದೇವ್ ,ಪುಟ್ಟಣ್ಣ, ಸಹಾಯಕ ಇಂಜಿನಿಯರ್ ರಂಗನಾಥ್ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.