ಮನೆ ಸುದ್ದಿ ಜಾಲ ಸಾರಿಗೆ ವಾಹನ ಚಾಲಕರಿಗೆ ಬಿಸಿ ತುಪ್ಪವಾದ ರೆಟ್ರೋ ರಿಫ್ಲೆಕೇಟಿವ್ ಟೇಪ್ ಮತ್ತು ರೇರ್ ಮಾರ್ಕಿಂಗ್ ಫ್ಲೇಟ್...

ಸಾರಿಗೆ ವಾಹನ ಚಾಲಕರಿಗೆ ಬಿಸಿ ತುಪ್ಪವಾದ ರೆಟ್ರೋ ರಿಫ್ಲೆಕೇಟಿವ್ ಟೇಪ್ ಮತ್ತು ರೇರ್ ಮಾರ್ಕಿಂಗ್ ಫ್ಲೇಟ್ ಅಳವಡಿಕೆ

0
ರೆಟ್ರೋ ರಿಫ್ಲೆಕೇಟಿವ್ ಟೇಪ್ ಮತ್ತು ರೇರ್ ಮಾರ್ಕಿಂಗ್ ಫ್ಲೇಟ್ ಅಳವಡಿಸಲು ಸಾಲುಗಟ್ಟಿನಿಂತ ವಾಹನಗಳು

ಮೈಸೂರು(Mysuru): ಕೇಂದ್ರ ಮೋಟಾರು ವಾಹನಗಳ  ನಿಯಮಗಳು 1989ರ ನಿಯಮದ ಪ್ರಕಾರ ಆಗಸ್ಟ್ 24 ರಿಂದ ಸಾರಿಗೆ ವರ್ಗದ ವಾಹನಗಳಿಗೆ ವಾಹನದ ಅರ್ಹತಾ ಪತ್ರ ನೀಡಿಕೆ/ ನವೀಕರಣ ಸಮಯದಲ್ಲಿ ರೆಟ್ರೋ ರಿಫ್ಲೆಕೇಟಿವ್ ಟೇಪ್ ಮತ್ತು ರೇರ್ ಮಾರ್ಕಿಂಗ್ ಫ್ಲೇಟ್ ಅಳವಡಿಸಿರುವುದನ್ನು ಕಡ್ಡಾಯಗೊಳಿಸಲಾಗಿದ್ದು, ಇದು ಆಟೋ ಹಾಗೂ ಲಾರಿ ಚಾಲಕರಿಗೆ ಸಾಕಷ್ಟು ತೊಂದರೆ ಉಂಟಾಗಿದೆ.

ಕೇಂದ್ರ ಮೋಟಾರು ವಾಹನಗಳ  ನಿಯಮಗಳು 1989ರ ನಿಯಮ 104ರ ಅಡಿ AIS: 089, AIS: 090 ಮತ್ತು AIS: 057 ಪುಕಾರ ರಾಜ್ಯದ ಎಲ್ಲಾ ಸಾರಿಗೆ ವಾಹನಗಳಿಗೆ ರೆಟ್ರೋ ರಿಫ್ಲೆಕೇಟಿವ್ ಟೇಪ್ ಮತ್ತು ರೇರ್ ಮಾರ್ಕಿಂಗ್ ಫ್ಲೇಟ್ ಅಳವಡಿಸುವಂತೆ ಸೂಚಿಸಲಾಗಿದೆ.

ಸಾರಿಗೆ ವರ್ಗದ ವಾಹನಗಳಿಗೆ ಅರ್ಹತಾ ಪತ್ರ ನೀಡಿಕೆ/ ನವೀಕರಣ ಸಮಯದಲ್ಲಿ ರೆಟ್ರೋ ರಿಫ್ಲೆಕೇಟಿವ್ ಟೇಪ್ ಮತ್ತು ರೇರ್ ಮಾರ್ಕಿಂಗ್ ಫ್ಲೇಟ್ ಅಳವಡಿಸಿರುವುದನ್ನು ವೆಬ್ ಬೇಸ್ಡ್ ಸಾಫ್ಟ್’ವೇರ್  ಮೂಲಕ ಪರೀಕ್ಷಿಸಲು ಕ್ರಮ ವಹಿಸುವಂತೆ ಸೂಚಿಸಲಾಗಿದೆ. ಹಾಗೂ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿರುವ ಬಗ್ಗೆ ಪರಿಶೀಲನೆ ನಡೆಸುವಂತೆ ಹಾಗೂ ಈ ಬಗ್ಗೆ ಯಾವುದೇ ದೂರುಗಳಿಗೆ ಅವಕಾಶ ನೀಡದಂತೆ ಕುಮವಹಿಸಲೂ ಸಹ ಆದೇಶಿಸಿದೆ.

ಆದರೆ ಈ ಕುರಿತು ಸಮರ್ಪಕ ಮಾಹಿತಿ ಇಲ್ಲದ ಕಾರಣ ಆಟೋ ಹಾಗೂ ಲಾರಿ ಚಾಲಕರು ಪರದಾಡುವಂತಾಗಿದೆ. ಅಲ್ಲದೇ ಆರ್’ಟಿಓ ಅಧಿಕಾರಿಗಳು ಕೂಡ ಸಮರ್ಪಕ ಮಾಹಿತಿ ನೀಡದ ಕಾರಣ ಯಾರಿಂದ  ಮಾಹಿತಿ ಪಡೆಯಬೇಕು, ರೆಟ್ರೋ ರಿಫ್ಲೆಕೇಟಿವ್ ಟೇಪ್ ಮತ್ತು ರೇರ್ ಮಾರ್ಕಿಂಗ್ ಫ್ಲೇಟ್ ಯಾರು ಅಳವಡಿಸುತ್ತಾರೆ ಎಂಬ ಮಾಹಿತಿ ಲಭ್ಯವಾಗದೇ ಪರಿತಪಿಸುವ ಸ್ಥಿತಿ ಚಾಲಕರದ್ಧಾಗಿದೆ.

ಅಲ್ಲದೇ ದಿನವಿಡೀ ಆರ್’ಟಿಓ ಕಚೇರಿಯಲ್ಲಿ ಕುಳಿತರೇ ಬಾಡಿಗೆ ಹೊಡೆಯಲು ಸಾಧ್ಯವಾಗುವುದಿಲ್ಲ. ಇದರಿಂದ ಚಾಲಕರು ಸಾಕಷ್ಟು ನಷ್ಟವನ್ನು ಅನುಭವಿಸುವಂತಾಗಿದೆ.

ರೆಟ್ರೋ ರಿಫ್ಲೆಕೇಟಿವ್ ಟೇಪ್ ಮತ್ತು ರೇರ್ ಮಾರ್ಕಿಂಗ್ ಫ್ಲೇಟ್ ಅಳವಡಿಸಲು ಆರ್’ಟಿಒ ಕಚೇರಿ ಅಧಿಕಾರಿಗಳು ಖಾಸಗಿ ಡ್ರೈವಿಂಗ್ ಸ್ಕೂಲ್ ಗೆ ತೆರಳುವಂತೆ ಸೂಚಿಸುತ್ತಿದ್ದು, ಖಾಸಗಿ ಡ್ರೈವಿಂಗ್ ಸ್ಕೂಲ್ ನಲ್ಲಿ ಮನಬಂದಂತೆ ದರ ವಿಧಿಸುತ್ತಿರುವುದು ಆಟೋ, ಲಾರಿ ಹಾಗೂ ಮುಂತಾದ ಸಾರಿಗೆ ವಾಹನಗಳ ಚಾಲಕರನ್ನು ಸಂಕಷ್ಟಕ್ಕೆ ದೂಡಿದೆ.

ಆದ್ದರಿಂದ ಸರ್ಕಾರ ಹಾಗೂ ಅಧಿಕಾರಿಗಳು ಇನ್ನು ಮುಂದಾದರು ಎಚ್ಚೆತ್ತುಕೊಂಡು ಚಾಲಕರ ಸಮಸ್ಯೆ ಪರಿಹರಿಸುವತ್ತ ಗಮನ ಹರಿಸಬೇಕಾಗಿದೆ.

ಹಿಂದಿನ ಲೇಖನಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರ ವಿಸಿಟಿಂಗ್ ಕಾರ್ಡ್’ನಲ್ಲಿ ಕರ್ನಾಟಕ ಸರ್ಕಾರದ ಲಾಂಛನ ಬಳಸುವಂತಿಲ್ಲ
ಮುಂದಿನ ಲೇಖನಮೈಸೂರು: ಮನೆ ಕುಸಿದು ಕೂಲಿ ಕಾರ್ಮಿಕ ಸಾವು