ಹುಣಸೂರು: ಅಪ್ರಾಪ್ತ ಬಾಲಕಿಯನ್ನು ಪ್ರೀತಿಸಿ, ಗರ್ಭಿಣಿಯನ್ನಾಗಿಸಿದ್ದ ಯುವಕನನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ ಘಟನೆ ನ.14ರ ಗುರುವಾರ ನಡೆದಿದೆ.
ತಾಲೂಕಿನ ಹನಗೋಡು ಹೋಬಳಿಯ ಗ್ರಾಮವೊಂದರ ಯುವಕ ಶಿವಮೂರ್ತಿ ಅಲಿಯಾಸ್ ದರ್ಶನ್ (20) ಬಂಧಿತ ಆರೋಪಿ.
ಈತ ಬಾಲಕಿಯನ್ನು ಪ್ರೀತಿಸಿ, ಗರ್ಭಿಣಿಯನ್ನಾಗಿಸಿದ್ದಲ್ಲದೆ, ಯುವತಿಯನ್ನು ಕರೆದೊಯ್ದಿದ್ದ. ಈ ಸಂಬಂಧ ಬಾಲಕಿಯ ತಾಯಿ ಗ್ರಾಮಾಂತರ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.
ಇವಬ್ಬರು ಬಸ್ ನಿಲ್ದಾಣದಲ್ಲಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ. ಬಾಲಕಿಯನ್ನು ಪೋಷಕರ ವಶಕ್ಕೊಪ್ಪಿಸಲಾಯಿತೆಂದು ಪೊಲೀಸರು ತಿಳಿಸಿದ್ದಾರೆ.
Saval TV on YouTube