ಮನೆ ತಂತ್ರಜ್ಞಾನ ನಿಮ್ಮ ಫೋನ್ ನಲ್ಲಿ ಈ ಆ್ಯಪ್ಸ್’ಗಳಿದ್ದರೆ ಇಂದೇ ಡಿಲೀಟ್ ಮಾಡಿ!

ನಿಮ್ಮ ಫೋನ್ ನಲ್ಲಿ ಈ ಆ್ಯಪ್ಸ್’ಗಳಿದ್ದರೆ ಇಂದೇ ಡಿಲೀಟ್ ಮಾಡಿ!

0

ಕೇವಲ ಸ್ಮಾರ್ಟ್ ಫೋನ್ ಇದ್ದರೆ ಏನೂ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಇದರ ಬದಲಿಗೆ ಮೊಬೈಲ್ ಅಪ್ಲಿಕೇಶನ್ ಗಳು  ಸಹ ಮುಖ್ಯವಾಗಿರುತ್ತದೆ. ಸ್ಮಾರ್ಟ್ ಫೋನ್ ಗಳಲ್ಲಿ ಮೆಸೇಜ್, ಬ್ಯಾಂಕ್ ವಹಿವಾಟು, ಡೀಟೇಲ್ಸ್ ಗಳನ್ನು ಪಡೆಯಬೇಕಾದರೆ ಅದರದೇ ಆದಂತಹ ಕೆಲವೊಂದು ಅಪ್ಲಿಕೇಶನ್ ಗಳಿರುತ್ತದೆ. ಆದರೆ ಇದನ್ನು ಡೌನ್ ಲೋಡ್ ಮಾಡಿಕೊಳ್ಳಬೇಕಾದರೆ ಆಂಡ್ರಾಯ್ಡ್ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್ ಮೂಲಕ ಮತ್ತು ಆ್ಯಪಲ್ ಬಳಕೆದಾರರು ಆ್ಯಪಲ್ ಸ್ಟೋರ್  ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು. ಆದರೆ ಇತ್ತೀಚೆಗೆ ಕೆಲವೊಂದು ಅಪ್ಲಿಕೇಶನ್ಗಳಿಂದ ಮೊಬೈಲ್ ಬಳಕೆದಾರರು ಮೋಸ ಹೋಗುತ್ತಿದ್ದಾರೆ. ಬಳಕೆದಾರರ ಡೇಟಾವನ್ನು ಹ್ಯಾಕ್ ಮಾಡುವ ಉದ್ದೇಶದಿಂದ ಈ ಆ್ಯಪ್ಗಳು ರಚನೆಯಾಗಿದೆ. ಆದರೆ ಇದಕ್ಕೀಗ ಸರ್ಕಾರ ಹೊಸ ನಿಯಮವನ್ನು ಜಾರಿ ಮಾಡಿದೆ.

ನಮ್ಮ ಮೊಬೈಲ್ ಗಳಲ್ಲಿ ಕೆಲವೊಂದು ಬಾರಿ ತನ್ನಷ್ಟಕ್ಕೇ ಕೆಲವೊಂದು ಆ್ಯಪ್ ಗಳು ಸೇರಿರುತ್ತದೆ. ಇನ್ನೂ ಕೆಲವರು ಟೈಮ್ ಪಾಸ್ ಮಾಡುವ ಉದ್ದೇಶದಿಂದ ಗೇಮಿಂಗ್ ಅಪ್ಲಿಕೇಶನ್ ಗಳನ್ನು ಡೌನ್ ಲೋಡ್ ಮಾಡಿಟ್ಟುಕೊಳ್ಳುತ್ತಾರೆ. ಆದರೆ ಇತ್ತೀಚೆಗೆ ಕೆಲವೊಂದು ಆ್ಯಪ್ ಗಳು ಬಳಕೆದಾರರ ಡೇಟಾವನ್ನು ಬಳಸಿ ವಂಚನೆ ಮಾಡುತ್ತಿದೆ.

ಮಾಲ್ ವೇರ್ ಅಟ್ಯಾಕ್ ಗಳಾಗುತ್ತಿದೆ

ಸಾಮಾನ್ಯವಾಗಿ ಕೆಲವು ಗೇಮಿಂಗ್ ಹಾಗೂ ಫೋಟೋ ಎಡಿಟಿಂಗ್ ಅಪ್ಲಿಕೇಶನ್ ಗಳು ಮಾಲ್ ವೇರ್ ಮೂಲಕ ಬಳಕೆದಾರರ ಮೊಬೈಲ್ ಮೇಲೆ ದಾಳಿ ಮಾಡಿ, ಅವರ ಖಾಸಗಿ ವಿವರ ಹಾಗೂ ಹಣಕಾಸಿಗೆ ಸಂಬಂಧಿತ ವಿವರವನ್ನು ಕದ್ದು ಹ್ಯಾಕರ್ಸ್ ಗಳಿಗೆ ನೀಡುತ್ತದೆ. ಇದರಿಂದ ಮೊಬೈಲ್ ಬಳಕೆದಾರರು ವಂಚಕರಿಗೆ ಸುಲಭದಲ್ಲಿ ಸಿಗುತ್ತಿದ್ದಾರೆ. ಇದಕ್ಕಾಗಿ ಗೂಗಲ್ ಪ್ಲೇ ಸ್ಟೋರ್ ನಿರಂತರವಾಗಿ ಕ್ರಮ ಕೈಗೊಳ್ಳುತ್ತಲೇ ಇದೆ.

ವಂಚನೆಯ ಆ್ಯಪ್ ಗಳನ್ನು ಪತ್ತೆ ಮಾಡಿದವರು ಯಾರು?

ಥಾಯ್ಲೆಂಡ್ ನ ಡಿಜಿಟಲ್ ಎಕಾನಮಿ ಮತ್ತು ಸೊಸೈಟಿ ಸಚಿವಾಲಯ ಹಾಗೂ ರಾಷ್ಟ್ರೀಯ ಸೈಬರ್ ಭದ್ರತಾ ಸಂಸ್ಥೆ ಈ 203 ಆಪ್ ಗಳನ್ನು ಪತ್ತೆ ಮಾಡಿದ್ದು, ಗೂಗಲ್ ಗೆ ಮಾಹಿತಿ ನೀಡಿದೆ.

ಈ ಆ್ಯಪ್ ಗಳಿಂದಾದ ತೊಂದರೆಗಳೇನು?

ಯಾವುದೇ ಆ್ಯಪ್ ಗಳಾದರು ಸಹ ಯಾವ ಉದ್ದೇಶಕ್ಕೆ ರಚನೆ ಆಗಿವೆಯೋ ಆ ಕೆಲಸ ಮಾಡಿದರೆ ಯಾರಿಗೂ ಸಮಸ್ಯೆ ಇರುವುದಿಲ್ಲ. ಆದರೆ, ಒಂದು ಉದ್ದೇಶದಿಂದ ಗೂಗಲ್ ಪ್ಲೇ ಸ್ಟೋರ್ಗೆ ಬಂದು ಸೇರುವ ಆ್ಯಪ್ ಗಳು ತದನಂತರದಲ್ಲಿ ಬಳಕೆದಾರರ ಡೇಟಾ ಕದಿಯಲು ಹಾಗೂ ಅವರ ಹಣಕಾಸಿನ ವಿಚಾರಕ್ಕೆ ಕೈ ಹಾಕಲು ಮುಂದಾಗುತ್ತದೆ. ಅದೇ ಕೆಲಸವನ್ನು ಈ 203 ಆ್ಯಪ್ಗಳು ಮಾಡಿದ್ದು, ಇದರಿಂದಾಗಿ ಪ್ಲೇ ಸ್ಟೋರ್ನಿಂದ ಹೊರಬಿದ್ದಿವೆ.

ಯಾವೆಲ್ಲಾ ಆ್ಯಪ್ ಗಳ ವಿರುದ್ಧ ಕ್ರಮ?

ಇನ್ನು ಒಟ್ಟಾರೆ 203 ಆ್ಯಪ್ ಗಳ ವಿರುದ್ಧ ಕ್ರಮ ಜರುಗಿಸಲಾಗಿದ್ದು, ಇದರಲ್ಲಿ ಪ್ರಮುಖ ಆ್ಯಪ್ ಗಳ ಲೀಸ್ಟ್ ಮಾತ್ರ ನೀಡಲಾಗಿದೆ. ಅದರಲ್ಲಿ ಅಡ್ವಾನ್ಸಡ್ ಎಸ್ ಎಮ್ಎಸ್, ಮ್ಯಾಜಿಕ್ ಫೋಟೋ ಎಡಿಟರ್, ಆಲ್ ಗುಡ್ ಪಿಡಿಎಫ್ ಸ್ಕ್ಯಾನರ್, ಆಲ್ ಗುಡ್ ಲಾಂಗ್ವೇಜ್ ಟ್ರಾನ್ಸ್ಲೇಟರ್, ಆರ್ಟ್ ಫಿಲ್ಟರ್, ಆಟೋ ಸ್ಟಿಕ್ಕರ್ ಮೇಕರ್ ಸ್ಟುಡಿಯೋ, ಬೇಸ್ ಬೂಸ್ಟರ್ ವಾಲ್ಯೂಮ್ ಪವರ್, ಬ್ಯಾಟರಿ ಚಾರ್ಜಿಂಗ್ ಆನಿಮೇಶನ್ ಬಬ್ಬಲ್, ಬೀಟ್ ಮೇಕರ್ ಪ್ರೊ, ಬ್ಯೂಟಿ ಫಿಲ್ಟರ್, ಬ್ಲಡ್ ಪ್ರೆಸರ್ ಡೈರಿ, ಕಾಲರ್ ಥೀಮ್, ಕ್ಯಾಮೆರಾ ಟ್ರಾನ್ಸ್ಲೇಟ್, ಕ್ಯಾಶ್ ಕ್ಲೀನರ್, ಚಾಟ್ ಟೆಕ್ಸ್ಟ್ ಮೆಸೇಜ್ ಸೇರಿವೆ.

ಅನ್ ಇನ್ಸ್ಟಾಲ್ ಮಾಡಬೇಕಾದ ಅಪ್ಲಿಕೇಶನ್’ಗಳು

ಹಾಗೆಯೇ, ಕಾಂಟ್ಯಾಕ್ಟ್ ಬ್ಯಾಗ್ರೌಂಡ್, ಡಝಲ್ ಇನ್ ಸ್ಟಾ ಸ್ಟೋರಿಸ್ ಎಡಿಟರ್, ಡಿಸೈನ್ ಮೇಕರ್, ಈಸಿ ಪಿಡಿಎಫ್ ಸ್ಕ್ಯಾನರ್, ಎಡ್ಜಿಂಗ್ ಪ್ರೊ, ಫೇಸ್ಲ್ಯಾಬ್, ಫೇಸ್ಮಿ, ಫನ್ನಿ ಕಾಲರ್, ಫನ್ನಿ ಕ್ಯಾಮೆರಾ, ಗಿಟಾರ್ ಪ್ಲೇ, ಹೈಪರ್ ಕ್ಲೀನರ್ ಕ್ಲೀನ್ ಫೋನ್,  ಐಮೆಸೆಜ್, ಕರೋಕೆ ಸಾಂಗ್, ನೌ ಕ್ಯೂ ಆರ್ ಕೋಡ್ ಸ್ಕ್ಯಾನ್, ಫೋಟೋ ಕೊಲೇಜ್, ಫೋಟೋ ಫಿಲ್ಟರ್ ಆಂಡ್ ಎಡಿಟ್, ಪ್ರೈವೇಟ್ ಮೆಸೆಜ್, ಡಿಂಗ್ ಟೂನ್ ಹೆಚ್ ಡಿ, ಸ್ಮಾರ್ಟ್ ಟಿವಿ ರಿಮೋಟ್, ಸ್ಟಿಕ್ಕರ್ ಮೇಕರ್, ಸೂಪರ್ ಹೀರೋ ಎಫೆಕ್ಟ್ ಸೇರಿದಂತೆ ಇನ್ನೂ ಹಲವು ಆಪ್ ಗಳನ್ನು ಗೂಗಲ್ ಪ್ಲೇ ಸ್ಟೋರ್ ನಿಂದ ತೆಗೆದುಹಾಕಲಾಗಿದ್ದು, ಈ ಆಪ್ ಗಳು ನಿಮ್ಮ ಮೊಬೈಲ್ ನಲ್ಲಿ ಏನಾದರೂ ಇದ್ದರೆ ತಕ್ಷಣವೇ ಅನ್ ಇನ್ ಸ್ಟಾಲ್ ಮಾಡಿ.

ಹಿಂದಿನ ಲೇಖನಕರ್ನಾಟಕ ಬಜೆಟ್ 2023-24: ರೈತರಿಗಾಗಿ ಭೂ ಸಿರಿ ಯೋಜನೆ ಘೋಷಣೆ
ಮುಂದಿನ ಲೇಖನಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ: ಸಿಎಂ ಬೊಮ್ಮಾಯಿ ಘೋಷಣೆ