ಮನೆ ರಾಷ್ಟ್ರೀಯ ಬಾಲಕಿ ಮೇಲೆ ಅತ್ಯಾಚಾರ, ಆ್ಯಸಿಡ್‌ ಕುಡಿಸಿ ಹತ್ಯೆಗೆ ಯತ್ನ

ಬಾಲಕಿ ಮೇಲೆ ಅತ್ಯಾಚಾರ, ಆ್ಯಸಿಡ್‌ ಕುಡಿಸಿ ಹತ್ಯೆಗೆ ಯತ್ನ

0

ನವದೆಹಲಿ (New Delhi): 15 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಆಕೆಗೆ ಆ್ಯಸಿಡ್‌ ಕುಡಿಸಿ ಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.

ಬಾಲಕಿ ಕೆಲಸ ಮಾಡುತ್ತಿದ್ದ ಕಾರ್ಖಾನೆಯ ಮ್ಯಾನೇಜರ್‌ ಜೈ ಪ್ರಕಾಶ್ (31) ಈ ಕೃತ್ಯ ಎಸಗಿದ್ದು, ಆತನನ್ನು ಬಂಧಿಸಲಾಗಿದೆ. ಅನಾರೋಗ್ಯಕ್ಕೀಡಾಗಿರುವ ತನ್ನ ಪತ್ನಿಯನ್ನು ಭೇಟಿ ಮಾಡಿಸುವ ನೆಪದಲ್ಲಿ ಜುಲೈ 2 ರಂದು ಜೈ ಪ್ರಕಾಶ್ ಸಂತ್ರಸ್ತೆಯನ್ನು ತನ್ನ ಮನೆಗೆ ಕರೆಸಿಕೊಂಡಿದ್ದ. ನಂತರ ಆತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಘಟನೆ ನಡೆದು ಕೆಲ ದಿನಗಳ ನಂತರ ಸಂತ್ರಸ್ತೆಯನ್ನು ಮತ್ತೆ ದಾರಿಯಲ್ಲಿ ಭೇಟಿಯಾಗಿದ್ದ ಜೈ ಪ್ರಕಾಶ್‌, ಆಕೆಗೆ ಆ್ಯಸಿಡ್‌ ಕುಡಿಸಿದ್ದಾನೆ. ಮನೆಗೆ ತೆರಳಿದ ಆಕೆ ಪ್ರಜ್ಞಾಹೀನಳಾಗಿದ್ದಾಳೆ. ಹೀಗಾಗಿ ಸಂತ್ರಸ್ತೆಯನ್ನು ದೆಹಲಿಯ ಏಮ್ಸ್‌ಗೆ ದಾಖಲಿಸಲಾಗಿದೆ. ಆಕೆಯ ಸ್ಥಿತಿ ಗಂಭೀರವಾಗಿದೆ ಎಂದು ಉಪ ಪೊಲೀಸ್ ಆಯುಕ್ತ ಸಮೀರ್ ಶರ್ಮಾ ತಿಳಿಸಿದ್ದಾರೆ.

ಶನಿವಾರ ಎನ್‌ಜಿಒ ಸದಸ್ಯರೊಬ್ಬರ ಸಮ್ಮುಖದಲ್ಲಿ ಸಂತ್ರಸ್ತೆಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು. ಈ ಮಧ್ಯೆ, ದೆಹಲಿ ಮಹಿಳಾ ಆಯೋಗವು (ಡಿಸಿಡಬ್ಲ್ಯು) ಈ ವಿಷಯಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ನೋಟಿಸ್ ನೀಡಿದೆ. ಸಂತ್ರಸ್ತೆಯ ಹೇಳಿಕೆಯನ್ನು ತಕ್ಷಣವೇ ದಾಖಲಿಸಿ ಅದನ್ನು ಮ್ಯಾಜಿಸ್ಟ್ರೇಟ್‌ಗೆ ಸಲ್ಲಿಸುವಂತೆ ಪೊಲೀಸರಿಗೆ ಆಯೋಗ ಸೂಚಿಸಿದೆ.

ಹಿಂದಿನ ಲೇಖನರಾಜ್ಯದ ವಿವಿಧೆಡೆ ಎರಡು ದಿನ ಭಾರಿ ಮಳೆ ಸಾಧ್ಯತೆ
ಮುಂದಿನ ಲೇಖನಪತ್ನಿಯ ಬಂಧನಕ್ಕೆ ಮುಂಚಿತವಾಗಿ ಜಾಮೀನಿಗೆ ಷರತ್ತಾಗಿ ಶರಣಾಗುವಂತೆ ನ್ಯಾಯಾಲಯವು ಪತಿಗೆ ನಿರ್ದೇಶಿಸಬಹುದೇ?