ಮನೆ ಯೋಗಾಸನ ಸೂರ್ಯ ನಮಸ್ಕಾರ ಅಭ್ಯಾಸ ಮಾಡುವ ಮೊದಲು ನೀವು ಮಾಡಬೇಕಾದ 5 ವ್ಯಾಯಾಮಗಳು

ಸೂರ್ಯ ನಮಸ್ಕಾರ ಅಭ್ಯಾಸ ಮಾಡುವ ಮೊದಲು ನೀವು ಮಾಡಬೇಕಾದ 5 ವ್ಯಾಯಾಮಗಳು

0

ಸೂರ್ಯ ನಮಸ್ಕಾರ ಒಂದು ವ್ಯಾಯಾಮ. ಇದು 12 ಯೋಗ ಭಂಗಿಗಳನ್ನು ಒಳಗೊಂಡಿರುವ ಸಂಪೂರ್ಣ ತಾಲೀಮು ಅನುಕ್ರಮವಾಗಿದೆ. ಇದು ದೇಹ ಮತ್ತು ಮೆದುಳಿನ ನಡುವಿನ ಸಮನ್ವಯದ ಅಭ್ಯಾಸವಾಗಿದೆ. ಇದು ನಿಮ್ಮ ಬೆನ್ನು ಮತ್ತು ಸ್ನಾಯುಗಳನ್ನು ಬಲಪಡಿಸುವುದು ಮಾತ್ರವಲ್ಲದೆ, ಸಂಪೂರ್ಣ ದೇಹದ ತಾಲೀಮು ಆಗಿದೆ. ಇದನ್ನು ಯಾವುದೇ ಸಲಕರಣೆ ಇಲ್ಲದೆ ಎಲ್ಲಿಯಾದರೂ, ಯಾವಾಗ ಬೇಕಾದರೂ ಮಾಡಬಹುದು. ವಿಶೇಷವೆಂದರೆ ಸೂರ್ಯ ನಮಸ್ಕಾರವನ್ನು ಸರಿಯಾದ ರೀತಿಯಲ್ಲಿ ಮಾಡಿದರೆ, ಇದು ಪ್ರಯೋಜನಗಳ ದೀರ್ಘ ಪಟ್ಟಿಯನ್ನೇ ಹೊಂದಿದೆ.

ಸೂರ್ಯ ನಮಸ್ಕಾರದ ಪ್ರತಿಯೊಂದು ಹೆಜ್ಜೆಯೂ ವಿಶಿಷ್ಟ ಪ್ರಯೋಜನವನ್ನು ಹೊಂದಿದೆ. ಈ ಭಂಗಿಗಳನ್ನು ನಿರ್ದಿಷ್ಟ ಕ್ರಮದಲ್ಲಿ ಅಭ್ಯಾಸ ಮಾಡಿದರೆ, ದೇಹವು ಶಕ್ತಿಯುತವಾಗುತ್ತದೆ. ದೇಹದ ಒಳಗೆ ಮತ್ತು ಹೊರಗೆ ಉಲ್ಲಾಸ ಉಂಟಾಗುತ್ತದೆ. ಪ್ರತಿದಿನ ಕೇವಲ 10 ನಿಮಿಷಗಳ ಕಾಲ ಸೂರ್ಯ ನಮಸ್ಕಾರ ಮಾಡುವುದರಿಂದ ಸಿಗುವ ಪ್ರಯೋಜನಗಳನ್ನು ಇಲ್ಲಿ ಇಂದು ನಿಮಗೆ ತಿಳಿಸಲಾಗಿದೆ.

ಸೂರ್ಯೋದಯದ ಸಮಯದಲ್ಲಿ ಸೂಕ್ತ

ದಿನದ ಯಾವುದೇ ಸಮಯದಲ್ಲಿ ಇದನ್ನು ಮಾಡಬಹುದಾದರೂ, ನೀವು ಫ್ರೆಶ್ ಇರುವಾಗ ಅಂದರೆ ಸೂರ್ಯೋದಯದ ಸಮಯದಲ್ಲಿ ಮಾಡುವುದು ಅತ್ಯಂತ ಸೂಕ್ತ. ಸೂರ್ಯ ನಮಸ್ಕಾರವನ್ನು ಸರಿಯಾದ ಮಾರ್ಗದಲ್ಲಿ ಮಾಡುವ ಬಗ್ಗೆ ಸಾಕಷ್ಟು ಮಾಹಿತಿ ಲಭ್ಯವಿದ್ದರೂ, ಅದರ ಪ್ರಯೋಜನಗಳು ಮತ್ತು ಮಾಡುವ ಮುನ್ನ ಏನು ಮಾಡಬೇಕು ಮತ್ತು ಮಾಡಬಾರದು ಎಂಬುದನ್ನು ತಿಳಿಯುವುದು ಮುಖ್ಯವಾಗಿದೆ.

ಹೌದು, ಸೂರ್ಯ ನಮಸ್ಕಾರವನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲು ಮೊದಲು ಏನು ಮಾಡಬೇಕು ಎಂಬುದರ ಬಗ್ಗೆ ಹೆಚ್ಚಿನ ಜನರಿಗೆ ತಿಳಿದಿಲ್ಲ. ಆದ್ದರಿಂದ ಸೂರ್ಯ ನಮಸ್ಕಾರದ ಹೆಚ್ಚಿನ ಪ್ರಯೋಜನಗಳನ್ನು ಪಡೆಯಲು ಸೂರ್ಯ ನಮಸ್ಕಾರ ಮಾಡುವ ಮೊದಲು ನೀವು ಮಾಡಬೇಕಾದ ಕೆಲಸಗಳೇನೆಂದು ಇಲ್ಲಿ ನಾವು ನಿಮಗೆ ಹೇಳುತ್ತೇವೆ. ಸೂರ್ಯ ನಮಸ್ಕಾರವು ದೇಹದ ಪೂರ್ಣ ತಾಲೀಮು ಆಗಿರುವುದರಿಂದ, ಇದನ್ನು ಮಾಡುವ ಮೊದಲು ಕೆಲವು ಸಣ್ಣ ವ್ಯಾಯಾಮಗಳನ್ನು ಮಾಡುವುದು ಬಹಳ ಮುಖ್ಯ. ಸೂರ್ಯ ನಮಸ್ಕಾರ ಮಾಡುವ ಮೊದಲು ನಿಮ್ಮ ದೇಹವನ್ನು ತಯಾರಿಸಲು ನೀವು ಮಾಡಬಹುದಾದ ಕೆಲವು ಸುಲಭವಾದ ವ್ಯಾಯಾಮಗಳ ಪಟ್ಟಿ ಇಲ್ಲಿದೆ.

ವಾಕಿಂಗ್

ವಾರ್ಮ್ ಅಪ್ ಶ್ರಮದಾಯಕವಾಗಿರಬಾರದು. ಆದ್ದರಿಂದ ಸೂರ್ಯ ನಮಸ್ಕಾರ ಮಾಡುವ ಮೊದಲು ವಾಕಿಂಗ್ ಮಾಡುವುದು ಸುಲಭ ಮತ್ತು ಅತ್ಯುತ್ತಮವಾದ ವ್ಯಾಯಾಮವಾಗಿದೆ. ತುಂಬಾ ನಿಧಾನವಾಗಿ ನಡೆಯಬೇಡಿ, ನೀವು ವಾಕಿಂಗ್ ಮಾಡಿದ ನಂತರ ನಿಮ್ಮ ಹೃದಯ ಬಡಿತ ಹೆಚ್ಚಾಗುವುದನ್ನು ಖಚಿತಪಡಿಸಿಕೊಳ್ಳಿ.

ಮೆಟ್ಟಿಲುಗಳನ್ನು ಹತ್ತುವುದು

ಮೆಟ್ಟಿಲುಗಳನ್ನು ಹತ್ತುವುದು ಸರಳವಾದ ಹಾಗೂ ಪರಿಣಾಮಕಾರಿ ವಾರ್ಮ್ ಅಪ್ ವ್ಯಾಯಾಮವಾಗಿದೆ. ಸೂರ್ಯ ನಮಸ್ಕಾರ ಮಾಡುವ ಮೊದಲು ನೀವು ನಾಲ್ಕು-ಐದು ಮೆಟ್ಟಿಲುಗಳನ್ನು ಹತ್ತಬಹುದು.

ಸರಳವಾದ ಸ್ಟ್ರೆಚಸ್

ನಿಮಗೆ ವಾಕಿಂಗ್ ಮಾಡುವುದು ಮತ್ತು ಮೆಟ್ಟಿಲುಗಳ ಮೇಲೆ ಹತ್ತುವುದು ಬಹಳ ಕಷ್ಟ ಅನಿಸಿದರೆ, ಕೆಲವು ಸರಳವಾದ ಸ್ಟ್ರೆಚಸ್ ಮಾಡಬಹುದು. ತೋಳು ಚಾಚುವುದು, ಕಾಲನ್ನು ಮೇಲೆರಿಸುವುದು ಹೀಗೆ ನಿಮ್ಮ ದೇಹವು ಸಿದ್ಧವಾಗಿದೆ ಎಂದು ನೀವು ಭಾವಿಸುವವರೆಗೆ ನೀವು ಏನು ಬೇಕಾದರೂ ಮಾಡಬಹುದು.

ನಾವಿರುವ ಸ್ಥಳದಲ್ಲೇ ಜಾಗಿಂಗ್ ಮಾಡುವುದು

ನೀವಿರುವ ಸ್ಥಳದಲ್ಲೇ ಜಾಗಿಂಗ್ ಮಾಡುವುದು ಇನ್ನೊಂದು ಸರಳವಾದ, ಪರಿಣಾಮಕಾರಿ ವ್ಯಾಯಾಮವಾಗಿದ್ದು, ಇದು ನಿಮ್ಮ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ ಮತ್ತು ಉತ್ತಮ ತಾಲೀಮು ಅವಧಿಗೆ ನಿಮ್ಮ ದೇಹವನ್ನು ವಾರ್ಮ್ ಅಪ್ ಮಾಡುತ್ತದೆ.

ನಿಮ್ಮ ದೇಹವನ್ನು ಸಂಪೂರ್ಣವಾಗಿ ತಿರುಗಿಸಿ ನೀವು ಯೋಗಾಭ್ಯಾಸವನ್ನು ಪ್ರಾರಂಭಿಸುವ ಮೊದಲು ನಿಮ್ಮ ದೇಹಕ್ಕೆ ಅತ್ಯುತ್ತಮವಾಗಿ ವಾರ್ಮ್ ಅಪ್ ನೀಡಲು ತಲೆ, ಭುಜ, ಮೊಣಕಾಲು ಮತ್ತು ಸೊಂಟವನ್ನು ತಿರುಗಿಸಬಹುದು.

ಸೂರ್ಯ ನಮಸ್ಕಾರ ಮಾಡುವುದರಿಂದ ಸಿಗುವ ಪ್ರಯೋಜನಗಳು

*ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.

*ಹೊಳೆಯುವ ಚರ್ಮ ನಿಮ್ಮದಾಗುತ್ತದೆ.

*ನಿಮ್ಮ ಕೂದಲಿನ ಆರೋಗ್ಯಕ್ಕೆ ಒಳ್ಳೆಯದು.

*ಥೈರಾಯ್ಡ್ ಗ್ರಂಥಿಯನ್ನು ಉತ್ತೇಜಿಸುತ್ತದೆ ಮತ್ತು ಹಾರ್ಮೋನ್ ಸ್ರವಿಸುವಿಕೆಯನ್ನು ಹೆಚ್ಚಿಸುತ್ತದೆ.

*ಋತುಚಕ್ರವನ್ನು ನಿಯಂತ್ರಿಸುತ್ತದೆ.

*ಸ್ನಾಯುಗಳು ಮತ್ತು ಕೀಲುಗಳನ್ನು ಬಲಪಡಿಸುತ್ತದೆ.

*ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ.

*ನಿಮಗೆ ಚೆನ್ನಾಗಿ ನಿದ್ರೆ ಬರಲು ಸಹಾಯ ಮಾಡುತ್ತದೆ.

*ಆತಂಕವನ್ನು ಕಡಿಮೆ ಮಾಡುತ್ತದೆ.

*ದೇಹದ ನಿರ್ವಿಶೀಕರಣಕ್ಕೆ ಸಹಾಯ ಮಾಡುತ್ತದೆ.

*ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿರಿಸುತ್ತದೆ.

ಹಿಂದಿನ ಲೇಖನಎಲ್ಲಾನು ಬಲ್ಲೆನೆಂಬುವಿರಲ್ಲ
ಮುಂದಿನ ಲೇಖನಈ ನಾಲ್ಕು ರಾಶಿಯವರು ತುಂಬಾ ಸೆಂಟಿಮೆಂಟಲ್