ಪುದೀನದಿಂದ ಪಡೆದ ‘ಪೆಷಲ್ ಮಿಂಟ್” ಎಂಬ ಪರಾರ್ಥವನ್ನು ರಕ ಕೈಗಾರಿಕೆ ಮತ್ತು ವೈದ್ಯಕೀಯ ರಾಸಾಯನಿಕಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. ನೋವು ನಿವಾರಕೆ ಔಷಧಿಗಳಲ್ಲಿ ಪೆಪ್ಪರ್ ಮಿಂಟ್ ಆಯಿಲ್ ಬಳಸಲಾಗುತ್ತದೆ. ಗಂಟಲುನೋವು ನಿವಾರಣೆಯು ಚಪ್ಪರಿಸುವ (ಲೊಜೆಂಜನ್) ಮಾತ್ರೆಗಳಲ್ಲಿ ಮತ್ತು ಹಲ್ಲುಜ್ಜುವ ಪೆಸ್ಟ್‌ಗಳಲ್ಲಿ ಇದು ಬಳಕೆಯಾಗುತ್ತದೆ. ಮೆದುಳು ಮತ್ತು ಹೃದಯದ ರಕ್ತನಾಳಗಳು ವಿಕಸಿಸಲು ಪೆಪರ್ ಮಿಂಟ್ ತೈಲ ಪ್ರಯೋಜನಕಾರಿ ಎಂಬುದು ವೈಜ್ಞಾನಿಕ ಪ್ರಯೋಗಗಳಿಂದ ತಿಳಿಯಲ್ಪಟ್ಟಿದೆ.
ರಷ್ಯಾದಲ್ಲಿ ಬಹಳ ಹಿಂದಿನಿಂದಲೂ ಪುದೀನವನ್ನು ಬಳಸಲಾಗುತ್ತದೆ. ಪುದೀನ ಕನಾಯವನ್ನು ನೆಗಡಿ, ಹೊಟ್ಟೆನೋವು ಶಮನಗೊಳಿಸಲು ಬಳಸುತ್ತಿದ್ದರು. ಪುದಿನ ತೈಲವನ್ನು ನೋವು ನಿವಾರಕ ತೈಲವಾಗಿಯೂ ಬಳಸುತ್ತಿದ್ದರು. ಚಹಕ್ಕೆ ರುಚಿ ಹೆಚ್ಚಿಸಲು ಪುದೀನ ಎಲೆಯನ್ನು ಬಳಸುತ್ತಿದ್ದರು. ಪುದೀನ ಎಲೆಯನ್ನು ಆಘ್ರಾಣಿಸುವುದರಿಂದ ಮನುಷ್ಯನ ಮನಸ್ಸಿನ ಸ್ಥಿತಿ ಉತ್ತಮವಾಗಿರುತ್ತದೆಂದು ಅವರ ಅನಿಸಿಕೆ. ಇದರ ವಾಸನೆಯು ಮಾನಸಿಕ ಶೋಭೆ ಕಡಿಮೆ ಮಾಡುತ್ತದೆಂದು ಎಲೆಗಳನ್ನು ತಲೆಗೆ ಕಟ್ಟುತ್ತಿದ್ದರು. ಕುರ್ಚಿ, ಮೇಜುಗಳನ್ನು ಎಲೆಗಳಿಂದ ಸ್ವಚ್ಛಗೊಳಿಸುತ್ತಿದ್ದರು. ಕೋಣೆಗಳಿಗೆ ಪುದೀನ ಹಾಕಿದ ನೀರನ್ನು ಸಿಂಪಡಿಸುತ್ತಿದ್ದರು.
ಅಡುಗೆ
ಪುದೀನ ರುಚಿಯಲ್ಲಿ ಖಾರವಾಗಿದ್ದು ಬಾಯಿಯಲ್ಲಿಟ್ಟು ಆಗಿದಾಗ ನಾಲಿಗೆಯ ರುಚಿಗ್ರಹಣ ಹೆಚ್ಚಿಸಿ ಜೊಲ್ಲು ಸುರಿಯುವಂತೆ ಮಾಡುತ್ತದೆ. ಪುದೀನದಿಂದ ಚಟ್ಟಿ, ವಡೆ, ಪಕೋಡಾ ಸೂಪ್, ಸಾಸ್‌ಗಳನ್ನು ತಯಾರಿಸಲಾಗುತ್ತದೆ. ಆಹಾರದಲ್ಲಿ ಪರಿಮಳ ಹೆಚ್ಚಿಸಲು ಪುದೀನವನ್ನು ಹೆಚ್ಚು ಬಳಸಲಾಗುತ್ತದೆ.
ಪುದೀನ ಚಟ್ಟಿ : ಪುದೀನ 1 ಭಾಗ, ಕೊತ್ತಂಬರಿ ಸೊಪ್ಪು | ಭಾಗ, ಮೆಣಸಿನಕಾಯಿ 3 ಇಲ್ಲವೇ 4, ಜೀರಿಗೆ 1 ಚಮಚೆ, ಹುಣಸೆಹಣ್ಣು ಸ್ವಲ್ಪ
ಎಲ್ಲವನ್ನು ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ರುಬ್ಬಿ ಚಟ್ಟಿ ತಯಾರಿಸಿಟ್ಟುಕೊಳ್ಳಬೇಕು. ಪರೋಟ, ಸಮೋಸ, ಬ್ರೆಡ್, ಚಪಾತಿಯೊಂದಿಗೆ ತಿನ್ನಲು ರುಚಿಯಾಗಿರುತ್ತದೆ.
ಅಲ್ಲದೇ ಬೇರೆ ಯಾವುದೇ ಚಟ್ಟಿ ತಯಾರಿಸುವಾಗಲೂ ಪುದೀನ ಬೆರೆಸಿ ಮಾಡುವುದರಿಂದ ರುಚಿಕರವಾಗಿರುತ್ತದಲ್ಲದೇ ಜೀರ್ಣಕಾರಿಯೂ ಹೌದು.
ಸಲಾಡ್ : ಸೌತೆಕಾಯಿ, ಕ್ಯಾರಟ್, ಟೊಮ್ಯಾಟೋ, ಈರುಳ್ಳಿ ಮುಂತಾದವನ್ನು ಸಣ್ಣಗೆ ಹೆಚ್ಚಿಪುದೀನವನ್ನು ಬೆರೆಸಿ ಸಲಾಡ್ ತಯಾರಿಸಬಹುದು. ಇದು ಅತ್ಯಂತ ರುಚಿಕರ.
ಪಲಾವ್ :ಪಲಾವ್ ತಯಾರಿಸುವಾಗ ಪುದೀನ ಬಳಸುವುದರಿಂದ ಪಲಾವ್‌ಗೆ ಉತ್ತಮ ಪರಿಮಳ ಬರುವುದಲ್ಲದೇ ರುಚಿ ಹೆಚ್ಚುತ್ತದೆ.
ಪುದೀನ ಆಲೂ ಡಮ್ : ಪುದೀಶ ಸೊಪ್ಪು, ಕಪ್ಪು, ಬೇಬಿ ಆಲೂಗಡ್ಡೆ 14 ಕೆ.ಜಿ., ಎಣ್ಣೆ •4 ಚಮಚ, ಜೀರಿಗೆ ಚಮಚ, ನಿಂಬೆರನ ಅರ್ಧ ಹೋಳು, ಈರುಳ್ಳಿ 1, ಹಸಿಮೆಣಸಿನಕಾಯಿ 4.ಆಲೂಗಡ್ಡೆಯನ್ನು ಬೇಯಿಸಿ ಸಿಪ್ಪೆ ತೆಗೆಯಬೇಕು. ನಂತರ ಆಲೂಗಡ್ಡೆಯನ್ನು ಅರಿಶಿನ. ಸ್ವಲ್ಪ ಉಪ್ಪು ಸೇರಿಸಿ ಎಣ್ಣೆಯಲ್ಲಿ ಹುರಿದುಕೊಳ್ಳಬೇಕು. ಮೇಲ್ಪದರ ಗಟ್ಟಿಯಾಗುವ ತಾನೇ ನಕ ಹುರಿಯಬೇಕು. ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ, ಪುದೀನವನ್ನು ನುಣ್ಣಗೆ ರುಬ್ಬಿಕೊಳ್ಳಬೇಕು. ಒಂದು ಪಾತ್ರೆಯಲ್ಲಿ ಒಗ್ಗರಣೆ ಹಾಕಿ ಅದಕ್ಕೆ ರುಬ್ಬಿದ ಮಸಾಲೆ ಹಾಕಿ ಚೆನ್ನಾಗಿ ಕುದಿಸಬೇಕು. ನಂತರ ಹುರಿದ ಆಲೂಗಡ್ಡೆ ಹಾಕಿ ಸ್ವಲ್ಪ ಸಮಯದ ಬಿಟ್ಟು ಇಳಿಸಬೇಕು. ಆನಂತರ ನಿಂಬೆರಸ ಬೆರೆಸಬೇಕು.
ತರಕಾರಿ ಪುದೀನ ಪಲ್ಯ : ದೊಣ್ಣೆ ಮೆಣಸಿನಕಾಯಿ (ಕ್ಯಾಪ್ತಿಕಮ್) 2. ಕ್ಯಾರಟ್ 2,
ಕಾಲಿಫ್ಲವರ್ ಅರ್ಧ, ಆಲೂಗಡ್ಡೆ 2. ಪುದೀನ ಸೊಪ್ಪು 1 ಕಟ್ಟು, ಟೊಮಾಟೊ 2, ಕೊತ್ತಂಬರಿ ಸೊಪ್ಪು ಸ್ವಲ್ಪ, ಈರುಳ್ಳಿ 2. ಒಣಮೆಣಸಿನಕಾಯಿ ಪುಡಿ 1 ಚಮಚ, ಜೀರಿಗೆ 1 ಚಮಚೆ, ಗರಂ ಮಸಾಲ | ಚಮಚೆ, ಉಪ್ಪು ರುಚಿಗೆ ತಕ್ಕಷ್ಟು.
ಒಂದು ಪಾತ್ರೆಯಲ್ಲಿ ಒಗ್ಗರಣೆ ಹಾಕಿ ಹೆಚ್ಚಿದ ಈರುಳ್ಳಿ, ದೊಣ್ಣೆ ಮೆಣಸಿನಕಾಯಿ, ಕ್ಯಾರಟ್, ಕಾಲಿಫ್ಲವರ್, ಆಲೂಗಡ್ಡೆ ಹಾಕಿ ಬೇಯಿಸಿಕೊಳ್ಳಬೇಕು. ಬೆಂದ ನಂತರ ಒಣಮೆಣಸಿನಪುಡಿ, ಉಪ್ಪು, ಗರಂ ಮಸಾಲ ಹಾಕಬೇಕು. ಕೊನೆಯಲ್ಲಿ ಪುದೀನ, ಕೊತ್ತಂಬರಿ ಸೊಪ್ಪು ಹಾಕಿ ತಟ್ಟಿ ಮುಚ್ಚಿಡಬೇಕು.
ಪುದೀನ ಶರಬತ್ : ಒಂದು ಕಟ್ಟು ಪುದೀನಾವನ್ನು ಬಿಡಿಸಿ ಸ್ವಚ್ಛವಾಗಿ ತೊಳೆದು ಮಿಕ್ಸಿಯಲ್ಲಿ ರುಬ್ಬಿಕೊಳ್ಳಬೇಕು. ಅದಕ್ಕೆ ಸಾಕಷ್ಟು ನೀರು ಹಾಕಿ ಬೆಲ್ಲ ಅಥವಾ ಸಕ್ಕರೆ ಬೆರೆಸಬೇಕು. ಏಲಕ್ಕಿ ಪುಡಿಯನ್ನು ಬೆರೆಸಬಹುದು. ಬೆಳಗ್ಗೆ ಖಾಲಿಹೊಟ್ಟಿಗೆ ಈ ಪಾನೀಯವನ್ನು ಸೇವಿಸಿದರೆ. ಅಜೀರ್ಣ, ಎದೆಯುರಿ ಬಾಧಿಸಲಾರವು.
ಪುದೀನ ಪರೋಟ : ಪುದೀನ 2 ಕಟ್ಟು, ಹಸಿಮೆಣಸಿನಕಾಯಿ 2. ತೆಂಗಿನ ತುರಿ, ಉಪ್ಪು ರುಚಿಗೆ ತಕ್ಕಷ್ಟು, ಗೋಧಿಹಿಟ್ಟು 4 ಕಪ್, ಎಣ್ಣೆ
1. ಪುದೀನ ಸೊಪ್ಪನ್ನು ತೊಳೆದು ಸಣ್ಣಗೆ ಹೆಚ್ಚಿಕೊಳ್ಳಬೇಕು. ಹಸಿಮೆಣಸಿನಕಾಯಿ, ತೆಂಗಿನ ತುರಿ ರುಬ್ಬಿಕೊಂಡು ಗೋಧಿಹಿಟ್ಟಿಗೆ ಉಪ್ಪು, ಎಣ್ಣೆ, ಸೊಪ್ಪು ಎಲ್ಲ ಸೇರಿಸಿ ಹಿಟ್ಟು ಕಲೆಸಿಟ್ಟುಕೊಳ್ಳಬೇಕು. ಚಪಾತಿಯಂತೆ ಲಟ್ಟಿಸಿ ಕಾವಲಿಯ ಮೇಲೆ ಬೇಯಿಸಬೇಕು.
2. ಪುದೀನ ಸೊಪ್ಪು, ಹಸಿಮೆಣಸಿನಕಾಯಿ, ತೆಂಗಿನ ತುರಿ ಸೇರಿಸಿ ರುಬ್ಬಿಕೊಂಡು ಚಟ್ನ ತಯಾರಿಸಿಕೊಂಡು, ಚಪಾತಿ ಹಿಟ್ಟಿನಲ್ಲಿ ಮಧ್ಯೆ ಒಂದು ಚಿಕ್ಕ ಚಟ್ನಿ ಉಂಡೆ ಇಟ್ಟು ಪರೋಟದಂತೆ ಲಟ್ಟಿಸಿ ಬೇಯಿಸಬಹುದು.
ಪುದೀನ ಚಟ್ಟಿಪುಡಿ : ಪುದೀನ 2 ಕಟ್ಟು, ಕಡಲೆಬೇಳೆ 100 ಗ್ರಾಂ, ಉದ್ದಿನಬೇಳೆ 100 ಗ್ರಾಂ, ಒಣಮೆಣಸಿನಕಾಯಿ 75 ಗ್ರಾಂ, ಒಣಕೊಬ್ಬರಿ ತುರಿ 1 ಕಪ್, ಬೆಲ್ಲ 50 ಗ್ರಾಂ. ಹುಣಸೆಹಣ್ಣು ಸ್ವಲ್ಪ, ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ ಎರಡು ಚಮಚೆ.
ಪುದೀನ ಎಲೆ ಬಿಡಿಸಿ ಚೆನ್ನಾಗಿ ತೊಳೆದು ಜರಡಿಯಲ್ಲಿ ತೇವ ಹೋಗುವಂತೆ ಒಣಗಿಸಬೇಕು. ನಂತರ ಕಾದ ಬಾಣಲೆಗೆ ಸ್ವಲ್ಪ ತುಪ್ಪ ಹಾಕಿ ಹುರಿಯಬೇಕು. ಉಳಿದೆಲ್ಲ.
ಪದಾರ್ಥಗಳನ್ನು ಹದವಾಗಿ ಹುರಿಯಬೇಕು. ಒಣಕೊಬ್ಬರಿ ತುರಿ, ಹುಣಸೆಹಣ್ಣು ಬೆಚ್ಚಗೆ ಮಾಡಿ, ಎಲ್ಲ ಪದಾರ್ಥಗಳನ್ನು ಒಟ್ಟಿಗೇ ಮಿಕ್ಸಿಗೆ ಹಾಕಿ ತರಿತರಿಯಾಗಿ ಪುಡಿ ಮಾಡಿ. ಈ ಚಟ್ನಿಪುಡಿ ದೋಸ, ಚಪಾತಿ, ರೊಟ್ಟಿಗಳ ಜೊತೆಗೆ ತಿನ್ನಲು ರುಚಿಕರ, ವಿಶೇಷವಾಗಿ ಬಿ ಅನ್ನದೊಡನೆ ತುಪ್ಪ ಹಾಕಿ ತಿಂದಲ್ಲಿ ಹೆಚ್ಚು ರುಚಿ.
ಪುದೀನ ಬ್ರೆಡ್ ಪಲಾವ್ : ಅಕ್ಕಿ 2 ಕಪ್, ಬ್ರೆಡ್ ಅರ್ಧ ಪೌಂಡ್, ಪುದೀನ ಸೊಪ್ಪು 2, ಕಟ್ಟು, ತುಪ್ಪ 5 ಚಮಚ, ಎಣ್ಣೆ ಅಗತ್ಯಕ್ಕೆ ತಕ್ಕಷ್ಟು, ಹಸಿಮೆಣಸಿನಕಾಯಿ 5, ಉಪ್ಪು ರುಚಿಗೆ ತಕ್ಕಷ್ಟು, ಸಾಸುವೆ 1 ಚಮಚ.
‘ಪುದೀನ ಮತ್ತು ಹಸಿಮೆಣಸಿನಕಾಯಿಯನ್ನು ತೊಳೆದು ಸ್ವಚ್ಛಗೊಳಿಸಿ ಸಣ್ಣಗೆ ಹೆಚ್ಚಿಕೊಳ್ಳಬೇಕು. ಅಕ್ಕಿಯನ್ನು ತೊಳೆದಿಟ್ಟುಕೊಳ್ಳಬೇಕು. ಕುಕ್ಕರಿನಲ್ಲಿ ಎಣ್ಣೆ ಹಾಕಿ ಸಾಸುವೆ ಸಿಡಿಸಿ, ಆ ಒಗ್ಗರಣೆಯಲ್ಲಿ ತೊಳೆದಿಟ್ಟಿರುವ ಅಕ್ಕಿ, ಹೆಚ್ಚಿದ ಪುದೀನ ಮತ್ತು ಹಸಿಮೆಣಸಿನಕಾಯಿ ಹಾಕಿ ಐದು ನಿಮಿಷ ಹುರಿಯಿರಿ. ಆನಂತರ ನಾಲ್ಕು ಕಪ್ ನೀರು ಹಾಕಿ, ಉಪ್ಪು ಹಾಕಿ ಕುಕ್ಕರ್ ಮುಚ್ಚಳ ಮುಚ್ಚಿ ಬೇಯಲು ಬಿಡಿ. ಅನ್ನ ಬೆಂದಿದೆಯೆಂದಾಗ ಕುಕ್ಕರ್ ಕೆಳಗಿಳಿಸಿ.
ಬ್ರೆಡ್ಡನ್ನು ಸಣ್ಣಗೆ ಚೂರು ಮಾಡಿ, ಸಣ್ಣ ಉರಿಯ ಮೇಲೆ ತುಪ್ಪದಲ್ಲಿ ಬ್ರೆಡ್ ಚೂರುಗಳನ್ನು ಹುರಿಯಬೇಕು. ನಂತರ ಇದನ್ನು ಅದಾಗಲೇ ತಯಾರಿಸಿದ ಅನ್ನದೊಂದಿಗೆ ಬೆರೆಸಿ ಚೆನ್ನಾಗಿ ಕಲೆಸಬೇಕು. ಸ್ವಲ್ಪ ಬಿಸಿಯಾಗಿರುವಾಗಲೇ ತಿಂದಲ್ಲಿ ತುಂಬ ರುಚಿಕರ.
ಪುದೀನ ಶಂಕರಪೋಳೆ : ಮೈದಾ ಹಿಟ್ಟು 1 ಕಪ್, ಪುದೀನ ಸೊಪ್ಪು ಅರ್ಧ ಕಪ್, ಹಸಿಮೆಣಸಿನಕಾಯಿ 4. ತುಪ್ಪು 4 ಚಮಚೆ, ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ
ಸ್ವಚ್ಛವಾಗಿ ತೊಳೆದು ಹೆಚ್ಚಿದ ಪುದೀನ ಮತ್ತು ಹಸಿಮೆಣಸಿನಕಾಯಿಯನ್ನು ಮೈದಾಹಿಟ್ಟಿನಲ್ಲಿ ತುಪ್ಪ, ಉಪ್ಪು, ನೀರು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಬೇಕು. ಚಪಾತಿ ಹಾಳೆಯಂತೆ ದಪ್ಪವಾಗಿ ಲಟ್ಟಿಸಬೇಕು. ಅದನ್ನು ನಮಗೆ ಬೇಕಾದ ಚೌಕಾಕಾರ, ವಜ್ರಾಕೃತಿ, ತ್ರಿಕೋನಾಕಾರದಲ್ಲಿ ಕತ್ತರಿಸಿ ಎಣ್ಣೆಯಲ್ಲಿ ಕರಿಯಬೇಕು. ಆರಿದ ನಂತರ ಡಬ್ಬಿಯಲ್ಲಿ ತುಂಬಿಡಬಹುದು.
ಪುದೀನ ಹಪ್ಪಳ : ಒಂದು ಇಲ್ಲವೇ ಎರಡು ದಿನಗಳ ಕಾಲ ಅಕ್ಕಿಯನ್ನು ನೆನೆಸಿಡಬೇಕು. ನಂತರ ಅದನ್ನು ಕುಟ್ಟಿ ಪುಡಿ ಮಾಡಿಕೊಂಡು ಅದಕ್ಕೆ ಹೆಚ್ಚಿನ ಪುದೀನ ಸೊಪ್ಪು, ಉಪ್ಪು, ಒಣಮೆಣಸಿನಕಾಯಿ ಪುಡಿ, ಜೀರಿಗೆ, ಹಿಂಗು, ಹಪ್ಪಳಖಾರ ಎಲ್ಲವನ್ನೂ ಬೆರೆಸಿ ಒಲೆಯ ಮೇಲೆ ನೀರು ಹಾಕಿ ಕುದಿಸಬೇಕು. ಕುದಿದು ಮುದ್ದೆಯಂತಾದಾಗ ಇಳಿಸಿ ಉಂಡೆ ಮಾಡಿ ಲಟ್ಟಿಸಿ ಬಿಸಿಲಿನಲ್ಲಿ ಒಣಗಿಸಬೇಕು.
ಇತರ ಭಾಷೆಗಳಲ್ಲಿ
ಇಂಗ್ಲಿಷ್ _ ಗಾರ್ಡನ್ ಮಿಂಟ್
ಹಿಂದಿ _ ಪುದೀನ
ವೈಜ್ಞಾನಿಕ ಹೆಸರು —Mentha viridis L.