Saval TV on YouTube
ಮೈಸೂರು(Mysuru): ಜಿಲ್ಲೆಯ ಪಿರಿಯಾಪಟ್ಟಣದ ಗೋಣಿಕೊಪ್ಪ ರಸ್ತೆಯಲ್ಲಿರುವ ಸೇಂಟ್ ಮೇರಿ ಚರ್ಚ್ ಮೇಲೆ ಕಿಡಿಗೇಡಿಗಳು ದಾಳಿ ಮಾಡಿದ್ದು, ಅಲ್ಲಿದ್ದ ಪೀಠೋಪಕರಣ, ಬಾಲಯೇಸು ಮೂರ್ತಿಯನ್ನು ಒಡೆದು ಹಾಕಿದ್ದಾರೆ.
ಮಂಗಳವಾರ ರಾತ್ರಿ ಚರ್ಚ್’ಗೆ ನುಗ್ಗಿರುವ ದುಷ್ಕರ್ಮಿಗಳು ಅಲ್ಲಿದ್ದ ಹೂಕುಂಡ, ಅಲಂಕಾರಿಕ ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿ ಬಿಸಾಡಿದ್ದಾರೆ. ಅಲ್ಲದೇ, ಮೈಕ್ ಮತ್ತು ಹುಂಡಿಯನ್ನೂ ಕಳವು ಮಾಡಿದ್ದಾರೆ. ಪೀಠೋಪಕರಣಗಳನ್ನೂ ಧ್ವಂಸ ಮಾಡಲಾಗಿದೆ.
ಚರ್ಚಿನ ಫಾದರ್ ಮೈಸೂರಿಗೆ ಹೋದಾಗ ಈ ಕೃತ್ಯ ನಡೆಸಲಾಗಿದೆ. ಚರ್ಚ್ನ ಫಾದರ್ ಜಾನ್’ಪೌಲ್ ಪಿರಿಯಾಪಟ್ಟಣ ಪೊಲೀಸ್ ಠಾಣೆ ದೂರು ನೀಡಿದ್ದಾರೆ. ಸ್ಥಳಕ್ಕೆ ಪಿರಿಯಾಪಟ್ಟಣ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿ, ಕಿಡಿಗೇಡಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.