ಮನೆ ಭಾಷೆ ಎನ್’ಇಪಿಯಲ್ಲಿ ಕನ್ನಡ ಕಲಿಕೆ ಕುರಿತು ತಪ್ಪು ಮಾಹಿತಿ: ಕಸಾಪ ಅಧ್ಯಕ್ಷ ಮಹೇಶ ಜೋಶಿ

ಎನ್’ಇಪಿಯಲ್ಲಿ ಕನ್ನಡ ಕಲಿಕೆ ಕುರಿತು ತಪ್ಪು ಮಾಹಿತಿ: ಕಸಾಪ ಅಧ್ಯಕ್ಷ ಮಹೇಶ ಜೋಶಿ

0

ಬೆಂಗಳೂರು: ರಾಷ್ಟೀಯ ಶಿಕ್ಷಣ ನೀತಿ ಇಲಾಖೆಯು ಹೊರ ತಂದಿರುವ ಮೂರರಿಂದ ಎಂಟನೆಯ ವಯಸ್ಸಿನ ಕನ್ನಡ ಮಕ್ಕಳು ಕಲಿಯುವ ಕನ್ನಡ ಪಠ್ಯ ಕ್ರಮ ಚೌಕಟ್ಟು ಬುನಾದಿ ಹಂತದಲ್ಲಿ ಕನ್ನಡದ ಲಿಪಿ ದೇವನಾಗರಿ ಹಾಗೂ ಇಂಗ್ಲಿಷ್​ಗಿಂತಲೂ ಹೆಚ್ಚು ಸಂಕೀರ್ಣ ಎಂದು ಹೇಳಿರುವುದನ್ನು ಕನ್ನಡ ಸಾಹಿತ್ಯ ಪರಿಷತ್ತು ತೀವ್ರವಾಗಿ ಖಂಡಿಸುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ (ಕಸಾಪ) ಅಧ್ಯಕ್ಷ ಮಹೇಶ ಜೋಶಿ ತಿಳಿಸಿದ್ದಾರೆ.

Join Our Whatsapp Group

ಇದು ಎಳೆಯ ಮನಸ್ಸುಗಳ ಮೇಲೆ ಭಾಷೆಯ ಕುರಿತು ತಪ್ಪಾದ ಅಭಿಪ್ರಾಯ ಬೆಳೆಯಲು ಕಾರಣವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಎನ್‌’ಸಿಆರ್‌’ಟಿ ಪಠ್ಯ ಕ್ರಮದಲ್ಲಿ ‘ಕನ್ನಡ ಭಾಷೆಯ ಅಕ್ಷರ ಜೋಡಣೆಯ ನಿಯಮಗಳು ಸಂಕೀರ್ಣವಾಗಿವೆ. ಮೂಲಾಕ್ಷರಕ್ಕೆ ವಿಭಿನ್ನ ರೀತಿಯಲ್ಲಿ ಸ್ವರಗಳ ಜೋಡಣೆಯಾಗುತ್ತವೆ. ಹೀಗಾಗಿ, ಕನ್ನಡ ಲಿಪಿಯಲ್ಲಿ ಹಿಡಿತ ಸಾಧಿಸಲು ಬಹಳ ವರ್ಷಗಳೇ ಬೇಕಾಗುತ್ತವೆ ಎನ್ನಲಾಗಿದೆ. ಕನ್ನಡದ ಮಕ್ಕಳು ತಿಂಗಳೊಳಗೆ ಕನ್ನಡ ಅಕ್ಷರ ಮಾಲೆಯನ್ನು ಸುಲಲಿತವಾಗಿಕಲಿಯುತ್ತಿರುವುದನ್ನು ನಾವು ಹಿಂದಿನಿಂದಲೂ ನೋಡಿಕೊಂಡು ಬಂದಿದ್ದೇವೆ ಎಂದು ಅವರು ಹೇಳಿದ್ದಾರೆ.

ಕವಿ ಮಹಾಲಿಂಗರಂಗ ಅವರು ಕನ್ನಡ ಭಾಷೆ ಎಂದರೆ ‘ಸುಲಿದ ಬಾಳೆಯ ಹಣ್ಣಿನಷ್ಟು ಸರಳ’ ಎಂದು ಹೇಳಿದ್ದಾರೆ.

 ‘ಕನ್ನಡ ಭಾಷೆ ಜಗತ್ತಿನಲ್ಲಿಯೇಅ ತ್ಯಂತ ವೈಜ್ಞಾನಿಕ ಭಾಷೆ’ ಎಂದು ಸಂಶೋಧಕ ಎಂ.ಗೋವಿಂದ ಪೈ ಹೇಳಿದ್ದಾರೆ. ಪ್ರಪಂಚದ ಬಹುತೇಕ ಭಾಷಾ ತಜ್ಞರು ಕನ್ನಡ ಭಾಷೆಯನ್ನು ಸಂಪೂರ್ಣವಾಗಿ ಪರಿಶೀಲಿಸಿ, ಒಪ್ಪಿಕೊಂಡಿದ್ದಾರೆ. ಜಗತ್ತಿನ ಪರಿಪೂರ್ಣ ಎಂದು ಗುರುತಿಸಿಕೊಂಡ ಮೂರು ಭಾಷೆಗಳಲ್ಲಿ ಕನ್ನಡವೂ ಒಂದು ಎನ್ನುವುದು ಹೆಮ್ಮೆಯ ಸಂಗತಿ. ಈ ಕಾರಣದಿಂದಲೇ ಆಚಾರ್ಯ ವಿನೋಬಾ ಭಾವೆಯವರು ಕನ್ನಡವನ್ನು ‘ಲಿಪಿಗಳ ರಾಣಿ’ ಎಂದು ಕರೆದಿದ್ದಾರೆ ಎಂದು ತಿಳಿಸಿದ್ದಾರೆ.

ಅಕ್ಷರ ಮಾಲೆಯ ಮೇಲೆ ಪರಿಣಿತಿ ಸಾಧಿಸಲು ಬೇಕಾಗುವ ಸಮಯದ ಬಗ್ಗೆ ಪಠ್ಯ ಪುಸ್ತಕ ರೂಪಿಸಿದವರಿಗೆ ಸ್ಪಷ್ಟ ತಿಳಿವಳಿಕೆಯಿಲ್ಲ. ರಾಜ್ಯ ಸರ್ಕಾರ ಇತ್ತೀಚೆಗೆ ಪ್ರಕಟಿಸಿರುವ ಕರ್ನಾಟಕ ಪಠ್ಯಕ್ರಮದ ಚೌಕಟ್ಟು ನೋಡಿದರೆ ಇದು ಸ್ಪಷ್ಟವಾಗುತ್ತದೆ. ಒಂದನೇ ತರಗತಿಯಲ್ಲಿ ಸ್ವರ ಚಿಹ್ನೆಯನ್ನು, ಎರಡನೇ ತರಗತಿಯಲ್ಲಿಗುಣಿತಾಕ್ಷರಗಳನ್ನು ಕಲಿಯಬಹುದು ಎನ್ನುವುದು ವಿನ್ಯಾಸಕಾರರ ಅಭಿಮತ. ಪಠ್ಯದಲ್ಲಿ ತಪ್ಪು ಮಾದರಿ ನೀಡಿದರೆ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಅದು ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.ಆದ್ದರಿಂದ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಕನ್ನಡ ಕಲಿಕಾ ಕ್ರಮದಲ್ಲಿನ ದೋಷವನ್ನು ಈ ಕೂಡಲೇ ಸರಿಪಡಿಸಬೇಕು ಎಂದು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

ಹಿಂದಿನ ಲೇಖನCRPF ನಲ್ಲಿ 1,29,929 ಕಾನ್ಸ್ಟೇಬಲ್ ಹುದ್ದೆಗಳ ನೇಮಕ
ಮುಂದಿನ ಲೇಖನಕನ್ನಡದ ನಂದಿನಿಯನ್ನು ಗುಜರಾತಿನ ಅಮುಲ್‌ ನುಂಗಲು ಹೊರಟಿದೆ: ಹೆಚ್’ಡಿಕೆ ವಾಗ್ದಾಳಿ