ಮನೆ ರಾಜಕೀಯ ಸಿದ್ದರಾಮಯ್ಯ ಅರ್ಜಿ ಹಾಕಿ ಗೆದ್ದು ಬರವಂಥ ಕ್ಷೇತ್ರ ಹುಡುಕುತ್ತಿದ್ದಾರೆ: ಜಿ.ಟಿ.ದೇವೇಗೌಡ

ಸಿದ್ದರಾಮಯ್ಯ ಅರ್ಜಿ ಹಾಕಿ ಗೆದ್ದು ಬರವಂಥ ಕ್ಷೇತ್ರ ಹುಡುಕುತ್ತಿದ್ದಾರೆ: ಜಿ.ಟಿ.ದೇವೇಗೌಡ

0

ಮೈಸೂರು(Mysuru): ಸಿದ್ದರಾಮಯ್ಯ ಅರ್ಜಿ ಹಾಕಿ ಗೆದ್ದು ಬರವಂಥ ಕ್ಷೇತ್ರ ಹುಡುಕುತ್ತಿದ್ದಾರೆ ಎಂದು ಶಾಸಕ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ.

ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ಸಿಎಂ ಆಗಬೇಕೆಂಬ ಆಸೆ ಇರುವುದರಿಂದ ಸೇಫ್ ಪ್ಲೇಸ್ ನೋಡುತ್ತಿದ್ದಾರೆ. ಕಳೆದ ಬಾರಿ ಚಾಮುಂಡೇಶ್ವರಿಯಲ್ಲಿ ಸೋತಿರುವ ಕಾರಣಕ್ಕೆ ಕ್ಷೇತ್ರಕ್ಕೆ ಬರುವ ವಿಚಾರದಲ್ಲಿ ಅವರಿಗೆ ಆತಂಕವಿದೆ. ಅವರು ಚುನಾವಣೆಯಲ್ಲಿ ರಾಜ್ಯ ಪ್ರವಾಸ ಮಾಡಬೇಕಿದೆ. ಇದಕ್ಕಾಗಿ ಅಳೆದು ತೂಗಿ ಲೆಕ್ಕ ಹಾಕುತ್ತಾರೆ ಎಂದರು.

ಸಿದ್ದರಾಮಯ್ಯ ಕಾಂಗ್ರೆಸ್ ಗೆ ಬಾ ಎಂದು ಕರೆದಿಲ್ಲ, ಜೆಡಿಎಸ್‍ ನಲ್ಲಿ ಇರು ಎಂದು ಕೂಡ ಹೇಳಿಲ್ಲ. ಬಿಜೆಪಿಗೆ ಮಾತ್ರ ಹೋಗಬೇಡ ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಹೇಳಿರುವುದನ್ನೇ ಇಂದು ನಾನು ಬಹಿರಂಗವಾಗಿ ಹೇಳುತ್ತಿದ್ದೇನೆ. ನನ್ನ ನಿರ್ಧಾರ ಏನು ಎಂಬುದನ್ನು ಎರೆಡು ಮೂರು ತಿಂಗಳಲ್ಲಿ ತೀರ್ಮಾನ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.

ಈಗಿನ ಚಾಮುಂಡೇಶ್ವರಿ ಶಾಸಕ ಏನು ಕಡೆದು ಕಟ್ಟೆ ಹಾಕಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಶಾಸಕ, ಸಚಿವ ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿ ಎಲ್ಲಾ ಆದವರು. ನಾನು ಕೇವಲ‌ ಶಾಸಕ ಕೆಲವು ತಿಂಗಳ ಮಾತ್ರ ಮಂತ್ರಿಯಾಗಿದೆ. ನಾನು ಸಿದ್ದರಾಮಯ್ಯ ನವರಷ್ಟು ಕೆಲಸ ಮಾಡಲು ಸಾಧ್ಯನಾ. ನಾನು ಯಾವತ್ತು ನಾನೇ ಅಭಿವೃದ್ಧಿ ಮಾಡಿದ್ದೇನೆಂದು ಎಲ್ಲೂ ಹೇಳಿಲ್ಲ. ಸಿದ್ದರಾಮಯ್ಯ ಅಭಿವೃದ್ಧಿ ಮಾಡಿದ್ಧಾರೆ ಎಂದು ಕ್ರೆಡಿಟ್ ಕೊಟ್ಟಿದ್ದೇನೆ. ನಾನು ಏನು ಅಭಿವೃದ್ಧಿ ಕಾರ್ಯ ಮಾಡಿದ್ದೇನೆಂಬುದು ಕ್ಷೇತ್ರದ ಜನರಿಗೆ ಗೊತ್ತಿದೆ ಎಂದು ತಿಳಿಸಿದರು.

ಒಕ್ಕಲಿಗರು ತಮ್ಮನ ಬೆಂಬಲಿಸಬೇಕು ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಶಾಸಕ ಜಿ.ಟಿ ದೇವೇಗೌಡರು, ಜನರ ಮನಸ್ಥಿತಿ ಈಗ ತೀರ್ಮಾನವಾಗುವುದಿಲ್ಲ.ಅದಕ್ಕೆ ಇ‌ನ್ನೂ ಸಮಯಬೇಕು ಎಂದರು.