ಮನೆ ಅಪರಾಧ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹನಿಟ್ರ್ಯಾಪ್’ಗೆ ಯತ್ನ: ದೂರು ದಾಖಲು

ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹನಿಟ್ರ್ಯಾಪ್’ಗೆ ಯತ್ನ: ದೂರು ದಾಖಲು

0

ಚಿತ್ರದುರ್ಗ(Chitradurga): ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅವರನ್ನು ಹನಿಟ್ರ್ಯಾಪ್ ಮಾಡಲು ಯತ್ನಿಸಿದ್ದು,  ಸೈಬರ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಶಾಸಕರ ಮೊಬೈಲ್ ಫೋನ್ ಗೆ ವಿಡಿಯೊ ಕರೆ ಮಾಡಿದ ಯುವತಿ ವಿವಸ್ತ್ರಗೊಂಡು ಅಶ್ಲೀಲವಾಗಿ ಮಾತನಾಡಿದ್ದಾರೆ. ಇದರಿಂದ ಅನುಮಾನಗೊಂಡ ಶಾಸಕರು ಕರೆ ಸ್ಥಗಿತಗೊಳಿಸಿದ್ದಾರೆ.

ಯುವತಿ ಮೂರು ಬಾರಿ ವಿಡಿಯೊ ಕರೆ ಮಾಡಿದ್ದರು. ಕರೆ ಸ್ಥಗಿತಗೊಳಿಸಿ ಫೋನ್ ನಂಬರ್ ಬ್ಲ್ಯಾಕ್ ಮಾಡಿದ್ದೇನೆ. ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ ಎಂದು ಶಾಸಕ ತಿಪ್ಪಾರೆಡ್ಡಿ ಮಾದ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ್ದಾರೆ.

ಐಟಿ ಕಾಯ್ದೆಯ 66 (ಎ) ಅಡಿಯಲ್ಲಿ‌ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ರಾಜಸ್ಥಾನ ಅಥವಾ ಓಡಿಸಾ ರಾಜ್ಯದಿಂದ ವಿಡಿಯೊ ಬಂದಿರುವ ಅನುಮಾನ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಿಂದಿನ ಲೇಖನಕೆಎಸ್’ಆರ್’ಟಿಸಿ: ಇನ್ನು ಮುಂದೆ ಸಾಕು ಪ್ರಾಣಿಗಳಿಗೆ ಅರ್ಧ ಟಿಕೆಟ್
ಮುಂದಿನ ಲೇಖನಸಾರ್ವಜನಿಕ ಸೇವಕರಿಗೆ ಲಂಚ ನೀಡುವ ಸಲುವಾಗಿ ಹಣ ಹಸ್ತಾಂತರಿಸುವ ವ್ಯಕ್ತಿಯನ್ನು ಪಿಎಂಎಲ್ಎ ಅಡಿ ಬಂಧಿಸಬಹುದು: ಸುಪ್ರೀಂ