ಮನೆ ಯೋಗಾಸನ ಉತ್ತಮ ಆರೋಗ್ಯದ ಜೊತೆಗೆ ನೆಮ್ಮದಿ ಬದುಕು ನಡೆಸಲು ಯೋಗವೇ ಮದ್ದು: ಸಚಿವ ಕೆ.ಗೋಪಾಲಯ್ಯ

ಉತ್ತಮ ಆರೋಗ್ಯದ ಜೊತೆಗೆ ನೆಮ್ಮದಿ ಬದುಕು ನಡೆಸಲು ಯೋಗವೇ ಮದ್ದು: ಸಚಿವ ಕೆ.ಗೋಪಾಲಯ್ಯ

0

ಬೆಂಗಳೂರು(Bengaluru): ಯೋಗ ಕಾರ್ಯಕ್ರಮಕ್ಕೆ ಶಾಲಾ-ಕಾಲೇಜು ಹಾಗೂ ಸಾರ್ವಜನಿಕವಾಗಿಯೂ ಸಹ ಹೆಚ್ಚಿನ ಹೊತ್ತನ್ನು ನೀಡಬೇಕು. ಉತ್ತಮ ಆರೋಗ್ಯದ ಜೊತೆಗೆ ನೆಮ್ಮದಿ ಬದುಕು ನಡೆಸಲು ಯೋಗವೇ ಒಂದೇ ಮದ್ದು ಬೇರೆ ಯಾವ ಔಷಧಿಯೂ ಇಲ್ಲ. ಎಂದು ಸ್ಥಳೀಯ ಶಾಸಕರು ಹಾಗೂ ಅಬಕಾರಿ ಸಚಿವರಾದ ಕೆ.ಗೋಪಾಲಯ್ಯ ಅವರು ತಿಳಿಸಿದರು.

ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ  ವೃಷಭಾವತಿನಗರದಲ್ಲಿ ಶ್ರೀ ಮಹಾಲಕ್ಷ್ಮಿ ಎಜುಕೇಷನಲ್ ಟ್ರಸ್ಟ್ ವತಿಯಿಂದ ರಥಸಪ್ತಮಿ ಅಂಗವಾಗಿ ನಡೆದ ಯೋಗ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರತಿ ವರ್ಷದಂತೆ ಶ್ರೀ ಮಹಾಲಕ್ಷ್ಮಿ ಎಜುಕೇಷನಲ್ ಟ್ರಸ್ಟ್ , ಪ್ರಣವ ಯೋಗ ಪ್ರತಿಷ್ಠಾನ, ನೆಮ್ಮದಿ ಯೋಗಾಶಾಲೆ ಇವರ ಸಂಯುಕ್ತಾಶ್ರಯದಲ್ಲಿ ಪ್ರತಿ ವರ್ಷ ರಥಸಪ್ತಮಿ ಅಂಗವಾಗಿ ಯೋಗಭ್ಯಾಸ ಕಾರ್ಯಕ್ರಮಗಳು ನಡೆಯುತ್ತಾ ಬಂದಿದೆ. ಇದು ನಿಜಕ್ಕೂ ಬಹಳ ಸಂತೋಷಕರವಾದ ವಿಷಯ. ಇಂತಹ ಯೋಗ ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕನಾಗಿ ತಮ್ಮೊಂದಿಗೆ ಕೈಜೋಡಿಸುತ್ತೇನೆ ಎಂದರು.

ಸೂರ್ಯದೇವನನ್ನು ಪೂಜಿಸುವ ಶುಭ ರಥಸಪ್ತಮಿ ಎಂದು ತಮ್ಮೆಲ್ಲರಿಗೂ ಶುಭವಾಗಲಿ, ಕಷ್ಟಕಾರ್ಪಣ್ಯಗಳು ದೂರಸರಿದು ಉತ್ತಮ ಬದುಕಿಗೆ ಈ ರಥಸಪ್ತಮಿ ದಿನ ನಾಂದಿಯಾಗಲಿ ಎಂದು ಆಶಿಸುತ್ತೇನೆ ಎಂದರು.

ಇಂದು ಇಡೀ ವಿಶ್ವಕ್ಕೆ ಯೋಗದ ಬಗ್ಗೆ ತಿಳಿಸಿಕೊಟ್ಟರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು. ಯೋಗದ ದಿನಾಚರಣೆಯಲ್ಲಿ ವಿಶ್ವದ ನೂರಾರು ದೇಶಗಳು ಯೋಗದಲ್ಲಿ ಪಾಲ್ಗೊಳ್ಳುವಂತೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರು ಭಾರತದ ಪ್ರಧಾನಿಯಾದ ಮೇಲೆ ಭಾರತದ ಗೌರವ ವಿಶ್ವದಲ್ಲಿ ಹೆಚ್ಚಾಗಿದೆ ಎಂದರು.

ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ 10 ಕಡೆ ನಮ್ಮ ಕ್ಲಿನಿಕ್ ಪ್ರಾರಂಭಿಸಲಾಗುತ್ತಿದೆ. ನಮ್ಮ ಕ್ಲಿನಿಕ್ ನಲ್ಲಿ ಥೈರಾಯಿಡ್, ಬಿ.ಪಿ ಶುಗರ್ ಹಾಗೂ ಇನ್ನೂ ಅನೇಕ ಪರೀಕ್ಷೆಗಳು ಉಚಿತವಾಗಿ ಮಾಡಲಾಗುವುದು ಥೈರಾಯಿಡ್ ಸಮಸ್ಯೆ ಇರುವವರಿಗೆ ಮೂರು ತಿಂಗಳಿಗೆ ಆಗುವಷ್ಟು ಉಚಿತ ಮಾತ್ರೆ ಹಾಗೂ ಬಿ.ಪಿ ಶುಗರ್ ಇರುವವರಿಗೆ ಒಂದು ತಿಂಗಳಿಗಾಗುವಷ್ಟು ಉಚಿತ ಮಾತ್ರ ವಿತರಿಸಲಾಗುವುದು ಇದರ ಸದುಪಯೋಗವನ್ನು ಜನರು ಪಡೆದುಕೊಳ್ಳಿ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕರಾದ ನರೇಂದ್ರ ಬಾಬು, ಮಾಜಿ ಉಪಮೇಯರ್ ಎಸ್.ಹರೀಶ್, ಮುಖಂಡರುಗಳಾದ ವೆಂಕಟೇಶ್ ಮೂರ್ತಿ, ಜಗದೀಶ್, ವೆಂಕಟೇಶ್, ಸುನೀತಾ, ನಾಗರಾಜು, ಅಶೋಕ್, ಸ್ವಾಮಿ,  ಖ್ಯಾತ ಯೋಗ ಶಿಕ್ಷಕರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಯೋಗ ಪಟುಗಳು ಉಪಸ್ಥಿತರಿದ್ದರು.

ಹಿಂದಿನ ಲೇಖನರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆಯಲ್ಲಿ ಪ್ರಾಜೆಕ್ಟ್ ಆಫೀಸರ್ ಹುದ್ದೆಗೆ ಅರ್ಜಿ ಆಹ್ವಾನ
ಮುಂದಿನ ಲೇಖನಹುಬ್ಬಳ್ಳಿ: ಅಮಿತ್ ಶಾ ಭೇಟಿ ಮಾಡುತ್ತಿರುವ ಬಿಜೆಪಿ ನಾಯಕರು, ಬಿಗಿ ಭದ್ರತೆ