ಮನೆ ಅಪರಾಧ ಶಾಸಕ ಎಂ.ಪಿ. ಕುಮಾರಸ್ವಾಮಿ ತಪ್ಪಿತಸ್ಥ: 1.36 ಕೋಟಿ ಹಣ ಪಾವತಿಸಿ, ಇಲ್ಲವೇ ಜೈಲು ಶಿಕ್ಷೆ ಅನುಭವಿಸಿ

ಶಾಸಕ ಎಂ.ಪಿ. ಕುಮಾರಸ್ವಾಮಿ ತಪ್ಪಿತಸ್ಥ: 1.36 ಕೋಟಿ ಹಣ ಪಾವತಿಸಿ, ಇಲ್ಲವೇ ಜೈಲು ಶಿಕ್ಷೆ ಅನುಭವಿಸಿ

0

ಬೆಂಗಳೂರು(Bengaluru): ಚೆಕ್‌ ಬೌನ್ಸ್‌’ಗೆ ಸಂಬಂಧಿಸಿದ ಎಂಟು ಪ್ರತ್ಯೇಕ ಕ್ರಿಮಿನಲ್‌ ಪ್ರಕರಣಗಳಲ್ಲಿ ಆರೋಪಿಯಾಗಿದ್ದ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಒಟ್ಟು  1.36 ಕೋಟಿಗೂ ಹೆಚ್ಚಿನ ಮೊತ್ತವನ್ನು ಫಿರ್ಯಾದುದಾರರಿಗೆ ಪಾವತಿಸುವಂತೆ ಆದೇಶ ನೀಡಿದೆ.

ತಪ್ಪಿದಲ್ಲಿ ಪ್ರತಿ ಪ್ರಕರಣದಲ್ಲಿ ತಲಾ ಆರು ತಿಂಗಳ ಸಾದಾ ಜೈಲು ಶಿಕ್ಷೆ ಅನುಭವಿಸುವಂತೆ ಆದೇಶಿಸಿದೆ.

ಈ ಕುರಿತ ಎಂಟು ಪ್ರತ್ಯೇಕ ಪ್ರಕರಣಗಳ ಮೇಲಿನ ಆದೇಶವನ್ನು ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಜೆ.ಪ್ರೀತ್‌ ಅವರು ಸೋಮವಾರ ಪ್ರಕಟಿಸಿದರು.

ಕುಮಾರಸ್ವಾಮಿ ಅವರು ವಿವಿಧ ಪ್ರಕರಣಗಳಲ್ಲಿ ಒಟ್ಟು  1,38,65,000 ಮೊತ್ತಕ್ಕೆ ಮರುಪಾವತಿಯ ಚೆಕ್‌ ನೀಡಿದ್ದರು. ಇದರಲ್ಲಿ  1,36,50,000 ಬಾಕಿ ಉಳಿಸಿಕೊಂಡಿದ್ದರು.

ಈ ಕುರಿತಂತೆ ಫಿರ್ಯಾದುಗಳು ಸಲ್ಲಿಕೆಯಾಗಿದ್ದವು. ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಧೀಶರು ಈ ಆದೇಶ ಹೊರಡಿಸಿದ್ದಾರೆ.

ಹಿಂದಿನ ಲೇಖನಕೇಂದ್ರ ಜಲ ಆಯೋಗದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಮುಂದಿನ ಲೇಖನಪತಿಯ ಮನೆಯಲ್ಲಿ ಕಿರುಕುಳ ಆರೋಪ: ನವ ವಿವಾಹಿತೆ ನೇಣಿಗೆ ಶರಣು