ಮನೆ ರಾಜಕೀಯ ಜೆಡಿಎಸ್​ನಿಂದ ಉಚ್ಛಾಟಿಸಿರುವುದು ಸಂತಸ ತಂದಿದೆ: ಶಾಸಕ ಎಸ್ ಆರ್ ಶ್ರೀನಿವಾಸ್

ಜೆಡಿಎಸ್​ನಿಂದ ಉಚ್ಛಾಟಿಸಿರುವುದು ಸಂತಸ ತಂದಿದೆ: ಶಾಸಕ ಎಸ್ ಆರ್ ಶ್ರೀನಿವಾಸ್

0

ತುಮಕೂರು(Tumkur): ಜೆ‌ಡಿಎಸ್​ನಿಂದ ಉಚ್ಛಾಟನೆ ಮಾಡಿರುವುದು ಮುಜುಗರ, ಅವಮಾನ ಅನಿಸಲ್ಲ. ಬದಲಿಗೆ ಸಂತಸ ತಂದಿದೆ ಎಂದು ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ಪ್ರತಿಕ್ರಿಯೆ ನೀಡಿದ್ದಾರೆ.

ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಯಾವ ಪಕ್ಷದಲ್ಲಾದರೂ ಇದು ನಡೆಯುವಂತಹದ್ದೇ. ಅವರು ನನ್ನ ವಿರುದ್ದ ಒಂದು ವರ್ಷದ ಹಿಂದೆ ಅಭ್ಯರ್ಥಿಯನ್ನು ತಯಾರು ಮಾಡಿದಾಗಲೇ ನಾನು ಉಚ್ಛಾಟಿತನಾಗಿದ್ದೆ ಎಂದು ಹೇಳಿದರು.

ಡಿಸೆಂಬರ್​ನಲ್ಲಿ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ಡಿಸೆಂಬರ್​ ಕಳೆದ ಮೇಲೆ ರಾಜೀನಾಮೆ ಕೊಟ್ಟು ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ. ಸ್ಪೀಕರ್ ಬಳಿ ಹೋದರೆ ಏನಾಗುತ್ತೆ, ವಿಪ್‌ ಉಲ್ಲಂಘನೆಯಾದರೆ ಸ್ಪೀಕರ್ ಕ್ರಮ ಕೈಗೊಳ್ಳಬಹುದು ಎಂದರು.

ಇದನ್ನೂ ಓದಿ . . .ಬಿಜೆಪಿಯವರಿಗೆ ವಾಟ್ಸ್ಆ್ಯಪ್ ಯೂನಿವರ್ಸಿಟಿಯ ಸುಳ್ಳುಗಳೇ ಜ್ಞಾನಾರ್ಜನೆಯ ಮೂಲ: ಪ್ರಿಯಾಂಕ್ ಖರ್ಗೆ

ಹಿಂದಿನ ಲೇಖನಅನಧಿಕೃತ ಫ್ಲೆಕ್ಸ್, ಬ್ಯಾನರ್ ಅಳವಡಿಸಿದರೆ ನಿರ್ದಾಕ್ಷಿಣ್ಯ  ಕ್ರಮ: ಬಿಬಿಎಂಪಿ ಆಯುಕ್ತ ತುಷಾರ್‌ ಗಿರಿನಾಥ್‌
ಮುಂದಿನ ಲೇಖನಅಪ್ರಾಪ್ತೆ ಮೇಲೆ ಅತ್ಯಾಚಾರ: ಅಪರಾಧಿಗೆ 11 ವರ್ಷ ಜೈಲು ಶಿಕ್ಷೆ ವಿಧಿಸಿದ ಮಂಗಳೂರು ಕೋರ್ಟ್