ಮನೆ ಸುದ್ದಿ ಜಾಲ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಮೊಬೈಲ್ ಅಂಗಡಿ ಬೆಂಕಿಗಾಹುತಿ

ಶಾರ್ಟ್ ಸರ್ಕ್ಯೂಟ್ ನಿಂದಾಗಿ ಮೊಬೈಲ್ ಅಂಗಡಿ ಬೆಂಕಿಗಾಹುತಿ

0

ಬೆಂಗಳೂರು: ಇಡೀ ರಾತ್ರಿ ಮೊಬೈಲ್​ ಚಾರ್ಜ್​ ಇಟ್ಟಿದ್ದಕ್ಕೆ ಶಾರ್ಟ್​ ಸರ್ಕ್ಯೂಟ್ ​ನಿಂದ ಬೆಂಕಿಯ ಕೆನ್ನಾಲಿಗೆಗೆ ಮೊಬೈಲ್ ಅಂಗಡಿ ಬೆಂಕಿಗಾಹುತಿಯಾಗಿರುವ ಘಟನೆ  ವಿಜಯನಗರದಲ್ಲಿ  ಬೆಳಗ್ಗೆ 7 ಗಂಟೆಗೆ ನಡೆದಿದೆ.

ಅಂಗಡಿ ಮಾಲೀಕ ರಾತ್ರಿ ಮೊಬೈಲ್​ ಚಾರ್ಜ್​​ ಇಟ್ಟು ಮನೆಗೆ ಹೋಗಿದ್ದ. ಅದರಿಂದಾಗಿ ಶಾರ್ಟ್ ಸರ್ಕ್ಯೂಟ್ ನಿಂದ ಮೊಬೈಲ್ ಅಂಗಡಿಗೆ ಬೆಂಕಿ ಬಿದ್ದಿದೆ ಎಂದು ಪ್ರಾಥಮಿಕ ತನಿಖೆ ವೇಳೆ ಗೊತ್ತಾಗಿದೆ.

ಮುಂಜಾನೆ 7 ಗಂಟೆಗೆ ಸುಮಾರಿಗೆ ಸಣ್ಣದಾಗಿ ಹೊತ್ತಿ ಉರಿಯಲು ಆರಂಭಿಸಿದ ಬೆಂಕಿ ಬಳಿಕ ಮುಗಿಲೆತ್ತರಕ್ಕೆ ಕೆನ್ನಾಲಿಗೆಯನ್ನು ಚಾಚಿದೆ.

ಶೀಘ್ರವೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ವಿಜಯನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.