ಮನೆ Uncategorized ಚೆರ್ನೋಬಿಲ್ ಪರಮಾಣು ವಿದ್ಯುತ್ ಸ್ಥಾವರ ರಷ್ಯಾ ವಶ

ಚೆರ್ನೋಬಿಲ್ ಪರಮಾಣು ವಿದ್ಯುತ್ ಸ್ಥಾವರ ರಷ್ಯಾ ವಶ

0

ಕೀವ್: ಉಕ್ರೇನ್‌ನ ಚೆರ್ನೋಬಿಲ್ ಪರಮಾಣು ವಿದ್ಯುತ್ ಸ್ಥಾವರವನ್ನು ರಷ್ಯಾದ ಪಡೆಗಳು ವಶಪಡಿಸಿಕೊಂಡಿವೆ ಎಂದು ಉಕ್ರೇನ್ ಅಧ್ಯಕ್ಷೀಯ ಕಚೇರಿಯ ಸಲಹೆಗಾರ ಮೈಖೈಲೊ ಪೊಡೊಲ್ಯಾಕ್ ಮಾಹಿತಿ ನೀಡಿದ್ದಾರೆ.

ರಷ್ಯನ್ನರ ಸಂಪೂರ್ಣ ಅರ್ಥಹೀನ ದಾಳಿಯ ನಂತರ ಚೆರ್ನೋಬಿಲ್ ಪರಮಾಣು ವಿದ್ಯುತ್ ಸ್ಥಾವರವು ಸುರಕ್ಷಿತವಾಗಿದೆ ಎಂದು ಹೇಳುವುದು ಅಸಾಧ್ಯ. ‘ಇದು ಯುರೋಪಿಗೆ ಸದ್ಯ ಅತ್ಯಂತ ಗಂಭೀರ ಆತಂಕವಾಗಿದೆ’ಎಂದು ಅವರು ಹೇಳಿದ್ದಾರೆ.

ನೌಕಾ ದಳ, ವಾಯು ಸೇನೆ ಮತ್ತು ಭೂಸೇನೆ ಮೂರು ಮಾರ್ಗಗಳ ಮೂಲಕ ದಾಳಿ ನಡೆಸಿದ ನಂತರ ರಷ್ಯಾದ ಪಡೆಗಳು ವಿದ್ಯುತ್ ಸ್ಥಾವರವನ್ನು ಸ್ವಾಧೀನಪಡಿಸಿಕೊಂಡವು.

ರಷ್ಯಾದ ಕೆಲವು ಮಿಲಿಟರಿ ಪಡೆಗಳು ಗುರುವಾರ ಮುಂಜಾನೆ ಉಕ್ರೇನ್‌ ಗಡಿ ದಾಟುವ ಮೊದಲೇ ಚೆರ್ನೋಬಿಲ್‌ನಲ್ಲಿ ಜಮಾವಣೆ ಆಗಿದ್ದವು ಎಂದು ರಷ್ಯಾದ ಭದ್ರತಾ ಮೂಲವು ತಿಳಿಸಿದೆ.ನ್ಯಾಟೊಗೆ ಮಿಲಿಟರಿ ಹಸ್ತಕ್ಷೇಪ ಮಾಡದಂತೆ ಸೂಚಿಸಲು ಚೆರ್ನೋಬಿಲ್ ಪರಮಾಣು ರಿಯಾಕ್ಟರ್ ಅನ್ನು ನಿಯಂತ್ರಿಸಲು ರಷ್ಯಾ ಬಯಸಿದೆ ಎಂದು ಅದೇ ಮೂಲಗಳು ತಿಳಿಸಿವೆ.

ಹಿಂದಿನ ಲೇಖನಉಕ್ರೇನ್​​ನಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಸಿದ್ಧತೆ: ನೋಡಲ್ ಅಧಿಕಾರಿ ನೇಮಕ; ಸಹಾಯವಾಣಿ ಆರಂಭ
ಮುಂದಿನ ಲೇಖನದೇಶದಲ್ಲಿ ೧೩ ಸಾವಿರ ಕೋವಿಡ್ ಸೋಂಕಿತರು ಪತ್ತೆ