ಮನೆ ರಾಜಕೀಯ ವಿಜ್ಞಾನ ಸುಳ್ಳು ಹೇಳಲ್ಲ, ಮೋದಿ ಹೇಳ್ತಾರೆ: ರಾಹುಲ್

ವಿಜ್ಞಾನ ಸುಳ್ಳು ಹೇಳಲ್ಲ, ಮೋದಿ ಹೇಳ್ತಾರೆ: ರಾಹುಲ್

0

ನವದೆಹಲಿ(New Delhi): ಕೋವಿಡ್‌ನಿಂದ 47 ಲಕ್ಷ ಭಾರತೀಯರು ಸಾವನ್ನಪ್ಪಿದ್ದಾರೆ. ಸರ್ಕಾರ ಹೇಳಿಕೊಂಡಿರುವಂತೆ ಕೇವಲ 4.8 ಲಕ್ಷ ಮಂದಿಯಲ್ಲ. ವಿಜ್ಞಾನ ಸುಳ್ಳು ಹೇಳಲ್ಲ, ಮೋದಿ ಹೇಳ್ತಾರೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ  ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕೋವಿಡ್​​ನಿಂದಾಗಿ ಭಾರತದಲ್ಲಿ 47 ಲಕ್ಷ ಜನರು ಸಾವನ್ನಪ್ಪಿದ್ದಾರೆಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಬಿಡುಗಡೆ ಮಾಡಿತ್ತು. ಈ ಕುರಿತಾಗಿ ಟ್ವೀಟ್ ಮಾಡಿರುವ ಅವರು, ಪ್ರೀತಿ ಪಾತ್ರರನ್ನು ಕಳೆದುಕೊಂಡವರನ್ನು ಗೌರವಿಸಿ, ಅವರಿಗೆ 4 ಲಕ್ಷ ರೂಪಾಯಿ ಪರಿಹಾರ ನೀಡಿ ಎಂದು ಒತ್ತಾಯಿಸಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆ ಗುರುವಾರ ಬಿಡುಗಡೆಯಾದ ವರದಿಯಲ್ಲಿ 2020ರ ಜನವರಿ ಮತ್ತು 2021ರ ಡಿಸೆಂಬರ್ ನಡುವೆ ಭಾರತದಲ್ಲಿ ಕೋವಿಡ್ ಸೋಂಕಿನಿಂದ 4.7 ಮಿಲಿಯನ್​ಗೂ ಹೆಚ್ಚು ಮಂದಿ ಪ್ರಾಣ ಬಿಟ್ಟಿದ್ದಾರೆ ಎಂದು ಹೇಳಿತ್ತು. ಆದರೆ, ಈ ವಿಚಾರವನ್ನು ಕೇಂದ್ರ ಸರ್ಕಾರ ಅಲ್ಲಗಳೆದು, ಇದು ಸರ್ಕಾರ ಅಧಿಕೃತವಾಗಿ ಘೋಷಣೆ ಮಾಡಿರುವುದಕ್ಕಿಂತಲೂ ಬಹುತೇಕ 10 ಪಟ್ಟು ಹೆಚ್ಚು ಎಂದಿದೆ.