ಮನೆ ಅಪರಾಧ ಕಂಪನಿ ಮಾಲೀಕನ ಬ್ಯಾಂಕ್​ ಖಾತೆಯಿಂದ ಬಾಯ್ ಫ್ರೆಂಡ್​ ಖಾತೆಗೆ ಹಣ ವರ್ಗಾವಣೆ: ನಾಲ್ವರ ಬಂಧನ

ಕಂಪನಿ ಮಾಲೀಕನ ಬ್ಯಾಂಕ್​ ಖಾತೆಯಿಂದ ಬಾಯ್ ಫ್ರೆಂಡ್​ ಖಾತೆಗೆ ಹಣ ವರ್ಗಾವಣೆ: ನಾಲ್ವರ ಬಂಧನ

0

ಬೆಂಗಳೂರು: ಕಂಪನಿ ಮಾಲೀಕನ ಬ್ಯಾಂಕ್​ ಖಾತೆಯಿಂದ ಬಾಯ್​ಫ್ರೆಂಡ್​ ಖಾತೆಗೆ ಹಣ ವರ್ಗಾವಣೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯಾರಣ್ಯಪುರ ಠಾಣಾ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

Join Our Whatsapp Group

ಬಂಧಿತರನ್ನು ನಕ್ಷು ಕುಶಾಲಪ್ಪ, ಗಯನಾ ಅಲಿಯಾಸ್​ ರಿಯಾ, ಜಾನು ಅಲಿಯಾಸ್ ರೀತ್ ಮತ್ತು ಜ್ಞಾನವಿ ಅಲಿಯಾಸ್​ ರೀತು ಎಂದು ಗುರುತಿಸಲಾಗಿದೆ. ವೆಂಕಟೇಶ್ ರೆಡ್ಡಿ ಎಂಬಾತನ ಕಂಪನಿಯಲ್ಲಿ ರಿಸಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ರೀತುಗೆ ಕಂಪನಿಯ ಕೆಲ ವ್ಯವಹಾರ, ಅಕೌಂಟ್ ಸಂಬಂಧಿತ ಕೆಲಸಗಳನ್ನೂ ಮಾಲೀಕ ನೀಡಿದ್ದರು.

ಕಚೇರಿ ವ್ಯವಹಾರದ ಹಣ ವರ್ಗಾವಣೆ ಸಮಯದಲ್ಲಿ ತನ್ನ ಹಾಗೂ ತನ್ನ ಸಹೋದರಿಯರ ಬಾಯ್​​ ಫ್ರೆಂಡ್​ ಗಳ ಬ್ಯಾಂಕ್​ ಖಾತೆಗೂ ಹಣ ವರ್ಗಾವಣೆ ಮಾಡುತ್ತಿದ್ದಳು. ಈವರೆಗೆ 2 ಲಕ್ಷದ 70ಸಾವಿರ ರೂ. ಹಣ ವರ್ಗಾವಣೆ ಮಾಡಿ, ವಂಚನೆ ಎಸಗಿದ್ದಳು. ಈ ಸಂಬಂಧ ವಿದ್ಯಾರಣ್ಯಪುರ ಠಾಣೆಗೆ ವೆಂಕಟೇಶ್​ ರೆಡ್ಡಿ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ವಿದ್ಯಾರಣ್ಯಪುರ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.