ವಿಶ್ವದಲ್ಲಿ ಇದುವರೆಗೆ ಒಟ್ಟು 35,000 ಕ್ಕೂ ಹೆಚ್ಚು ಮಂಕಿಪಾಕ್ಸ್‌ನ ಪ್ರಕರಣಗಳು ವರದಿಯಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
92 ದೇಶಗಳಲ್ಲಿ ಈ ವರದಿಯು ದಾಖಲಾಗಿದ್ದು, ಮಂಕಿ ಪಾಕ್ಸಿನಿಂದಾಗಿ 12 ಸಾವುಗಳು ಸಂಭವಿಸಿವೆ ಎಂದು ಮಾಹಿತಿ ನೀಡಿದೆ.
ಕಳೆದ ವಾರ ಸುಮಾರು 7,500 ಪ್ರಕರಣಗಳು ವರದಿಯಾಗಿದ್ದು, ಕಳೆದ ವಾರಕ್ಕಿಂತ 20% ರಷ್ಟು ಪ್ರಕರಣಗಳು ಹೆಚ್ಚಳವಾಗಿದೆ ಎಂದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಡಾ. ಟೆಡ್ರೊಸ್ ಅಧಾನಮ್ ಮಾಹಿತಿ ನೀಡಿದ್ದಾರೆ.