ಮನೆ ರಾಜಕೀಯ ರಾಜ್ಯದಲ್ಲಿ ದೇವಾಲಯಗಳ ಮೇಲೆ ಮಸೀದಿ ನಿರ್ಮಾಣ:  ಹಿಂದೂ ಸಂಘಟನೆಗಳಿಂದ ಪಟ್ಟಿ ಬಿಡುಗಡೆ

ರಾಜ್ಯದಲ್ಲಿ ದೇವಾಲಯಗಳ ಮೇಲೆ ಮಸೀದಿ ನಿರ್ಮಾಣ:  ಹಿಂದೂ ಸಂಘಟನೆಗಳಿಂದ ಪಟ್ಟಿ ಬಿಡುಗಡೆ

0
ಸಾಂದರ್ಭಿಕ ಚಿತ್ರ

ಕರ್ನಾಟಕದಲ್ಲಿ ದೇವಾಲಯದ ಮೇಲೆ ಮಸೀದಿ ನಿರ್ಮಾಣವಾಗಿದೆ ಎಂದು ಹೇಳಿ ಕೆಲವು ಅಂಕಿ ಸಂಖ್ಯೆಯನ್ನು ಹಿಂದೂ ಸಂಘಟನೆಗಳು ಬಿಡುಗಡೆ ಮಾಡಿವೆ.
ಆದರೆ ಈ ಅಂಕಿ ಸಂಖ್ಯೆಯನ್ನು ಯಾವ ಆಧಾರದ ಮೇಲೆ ನೀಡಲಾಗಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿಯನ್ನು ನೀಡಿಲ್ಲ.
ರಾಜ್ಯದಲ್ಲಿ ಈ ರೀತಿ 191 ಮಸೀದಿಗಳಿವೆ ಎಂದು ಹೇಳಲಾಗುತ್ತಿದೆ. ಈ ಪಟ್ಟಿಯೊಂದನ್ನು ಸಂಘಟನೆಗಳು ಬಿಡುಗಡೆಗೊಳಿಸಿವೆ.
ಬೆಂಗಳೂರು -2, ಬೆಳಗಾವಿ – 12 , ಬಳ್ಳಾರಿ – 9, ಬೀದರ್ – 29 , ವಿಜಯಪುರ- 43, ಚಿಕ್ಕಮಗಳೂರು -1, ದಾವಣಗೆರೆ -1, ಧಾರವಾಡ- 23, ಕಲಬುರ್ಗಿ – 31, ಕೋಲಾರ – 2, ಮಂಡ್ಯ – 2, ಮೈಸೂರು -1, ಉತ್ತರ ಕನ್ನಡ -2, ರಾಯಚೂರು – 26, ಶಿವಮೊಗ್ಗ – 5, ತುಮಕೂರು – 3 ಮಸೀದಿಗಳು ದೇವಾಲಯಗಳ ಮೇಲೆ ನಿರ್ಮಾಣವಾಗಿವೆ ಎಂದು ಪಟ್ಟಿಯಲ್ಲಿ ತಿಳಿಸಲಾಗಿದೆ.