ಮನೆ ರಾಜ್ಯ ಮೈಸೂರು: ಅನಧಿಕೃತ ಬಡಾವಣೆ ತೆರವು

ಮೈಸೂರು: ಅನಧಿಕೃತ ಬಡಾವಣೆ ತೆರವು

0

ಮೈಸೂರು(Mysuru): ಸಾತಗಳ್ಳಿ ಮತ್ತು ದೇವನೂರು ಗ್ರಾಮಗಳಲ್ಲಿನ ಖಾಸಗಿಯವರು ಅಭಿವೃದ್ಧಿಪಡಿಸಿದ್ದ 4 ಅನಧಿಕೃತ ಬಡಾವಣೆಗಳನ್ನು ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ)ದಿಂದ ಶನಿವಾರ ತೆರವುಗೊಳಿಸಲಾಯಿತು.

ಸಾತಗಳ್ಳಿಯ ಸರ್ವೇ ನಂ.65, 27/3, 2/3 ಹಾಗೂ ದೇವನೂರು ಗ್ರಾಮದ ಸರ್ವೇ ನಂ.25ರಲ್ಲಿ ಭೂ ಪರಿವರ್ತನೆಯಾಗದೆ ಮತ್ತು ಪ್ರಾಧಿಕಾರದಿಂದ ಅನುಮೋದಿತ ನಕ್ಷೆ ಪಡೆಯದೆ ರಚಿಸಿದ್ದ ಬಡಾವಣೆಗಳಲ್ಲಿ ಕಾರ್ಯಾಚರಣೆ ನಡೆದಿದೆ.

ಆಯುಕ್ತ ಜಿ.ಟಿ.ದಿನೇಶ್‌ಕುಮಾರ್‌ ನೇತೃತ್ವದಲ್ಲಿ ತೆರವುಕಾರ್ಯ ನಡೆದಿದ್ದು, ಸಾತಗಳ್ಳಿ ಗ್ರಾಮದಲ್ಲಿ ಗ್ರಾಮದಲ್ಲಿ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯಾಗಿದ್ದ ರಸ್ತೆ ಒತ್ತುವರಿಯನ್ನು ಕೂಡ ತೆರವುಗೊಳಸಲಾಯಿತು.

ಪ್ರಾಧಿಕಾರದ ಕಾರ್ಯದರ್ಶಿ ಡಾ.ಎನ್.ಸಿ.ವೆಂಕಟರಾಜು ಹಾಗೂ ಕಾರ್ಯಪಾಲಕ ಎಂಜಿನಿಯರ್‌ಗಳಾದ ಮೋಹನ್, ಸುನೀಲ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಈ ಸಂದರ್ಭ ಮಾತನಾಡಿದ ಆಯುಕ್ತ ಜಿ.ಟಿ.ದಿನೇಶ್‌ಕುಮಾರ್‌, ಸಾರ್ವಜನಿಕರು, ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಯೊಳಗೆ ನಿವೇಶನ ಖರೀದಿಸುವ ಮುನ್ನ ಬಡಾವಣೆಯು ‘ಮುಡಾ’ದಿಂದ ಅನುಮೋದನೆ ಆಗಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ ಹಾಗೂ ಅನಧಿಕೃತ ಬಡಾವಣೆಗಳ ಬಗ್ಗೆ ತಿಳಿದಲ್ಲಿ ಪ್ರಾಧಿಕಾರದ ಗಮನಕ್ಕೆ ತರಬೇಕು. ಅಂತಹ ಅನಧಿಕೃತ ಬಡಾವಣೆಗಳನ್ನು ನಿರ್ದಾಕ್ಷಿಣ್ಯವಾಗಿ ಧ್ವಂಸಗೊಳಿಸಿ ತೆರವುಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

ಹಿಂದಿನ ಲೇಖನಚಿತ್ರರಂಗಕ್ಕೆ ಕಾಲಿಟ್ಟ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್
ಮುಂದಿನ ಲೇಖನಏಷ್ಯಾ ಕಪ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿ ವೇಳಾಪಟ್ಟಿ