ಮನೆ ಅಪರಾಧ 4ನೇ ಮಹಡಿಯಿಂದ ಮಗುವನ್ನೆಸೆದು ಹತ್ಯೆಗೈದ ತಾಯಿ: ಬಂಧನ

4ನೇ ಮಹಡಿಯಿಂದ ಮಗುವನ್ನೆಸೆದು ಹತ್ಯೆಗೈದ ತಾಯಿ: ಬಂಧನ

0

ಬೆಂಗಳೂರು(Begaluru): ಹೆತ್ತತಾಯಿಯೇ ಮಾತು ಬಾರದ ತನ್ನ ಮಗುವನ್ನು 4 ಅಂತಸ್ತಿನ ಕಟ್ಟಡದಿಂದ ಎಸೆದು ಹತ್ಯೆ ಮಾಡಿರುವ ಹೃದಯ ವಿದ್ರಾವಕ ಘಟನೆ ಬೆಂಗಳೂರಿನ ಸಂಪಂಗಿರಾಮನಗರದ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ.

ದ್ವಿತಿ(5) ಸಾವನ್ನಪ್ಪಿದ ಮಗುವಾಗಿದ್ದು,  ಸುಷ್ಮಾ ಹತ್ಯೆಗೈದ ತಾಯಿಯಾಗಿದ್ದಾಳೆ.

ಮಗುವನ್ನು ಆಟವಾಡಿಸಿಕೊಂಡು ಬರುವುದಾಗಿ ಹೇಳಿ ಕರೆದುಕೊಂಡು ಹೋದ ಸುಷ್ಮಾ ಮೊದಲು ದ್ವಿತಿ ಕೈಹಿಡಿದು ವಾಕ್ ಮಾಡಿಸುತ್ತಾಳೆ. ಆ ಬಳಿಕ ಮಗುವನ್ನು 4 ಅಂತಸ್ತಿನ ಕಟ್ಟಡದಿಂದ  ಕೆಳಗೆ ಎಸೆದಿರುವ ತಾಯಿ ಸುಷ್ಮಾ ಆ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಳ್ಳುವಂತೆ ನಟಿಸಿದ್ದಾಳೆ. ಈ ಎಲ್ಲಾ ಘಟನೆಗಳು ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸುಷ್ಮಾಳನ್ನು ಸಂಪಗಿ ರಾಮನಗರ ಪೊಲೀಸರು ಬಂಧಿಸಿದ್ದಾರೆ.

ಸಂಪಗಿರಾಮನಗರದಲ್ಲಿ ಅಪಾರ್ಟ್‌ಮೆಂಟ್‌ನಲ್ಲಿ ಕಿರಣ್ ಮತ್ತು ಸುಷ್ಮಾ ದಂಪತಿ ವಾಸವಾಗಿದ್ದು, ಮಗಳು ದ್ವಿತಿಗೆ ಮಾತು ಬರುತ್ತಿರಲಿಲ್ಲ. ಇದರಿಂದ ಸುಷ್ಮಾ ಬೆಸತ್ತಿದ್ದಳು ಎಂಬ ಮಾಹಿತಿ ಇದೆ.