ಮನೆ ಅಪರಾಧ 4ನೇ ಮಹಡಿಯಿಂದ ಮಗುವನ್ನೆಸೆದು ಹತ್ಯೆಗೈದ ತಾಯಿ: ಬಂಧನ

4ನೇ ಮಹಡಿಯಿಂದ ಮಗುವನ್ನೆಸೆದು ಹತ್ಯೆಗೈದ ತಾಯಿ: ಬಂಧನ

0

ಬೆಂಗಳೂರು(Begaluru): ಹೆತ್ತತಾಯಿಯೇ ಮಾತು ಬಾರದ ತನ್ನ ಮಗುವನ್ನು 4 ಅಂತಸ್ತಿನ ಕಟ್ಟಡದಿಂದ ಎಸೆದು ಹತ್ಯೆ ಮಾಡಿರುವ ಹೃದಯ ವಿದ್ರಾವಕ ಘಟನೆ ಬೆಂಗಳೂರಿನ ಸಂಪಂಗಿರಾಮನಗರದ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದೆ.

ದ್ವಿತಿ(5) ಸಾವನ್ನಪ್ಪಿದ ಮಗುವಾಗಿದ್ದು,  ಸುಷ್ಮಾ ಹತ್ಯೆಗೈದ ತಾಯಿಯಾಗಿದ್ದಾಳೆ.

ಮಗುವನ್ನು ಆಟವಾಡಿಸಿಕೊಂಡು ಬರುವುದಾಗಿ ಹೇಳಿ ಕರೆದುಕೊಂಡು ಹೋದ ಸುಷ್ಮಾ ಮೊದಲು ದ್ವಿತಿ ಕೈಹಿಡಿದು ವಾಕ್ ಮಾಡಿಸುತ್ತಾಳೆ. ಆ ಬಳಿಕ ಮಗುವನ್ನು 4 ಅಂತಸ್ತಿನ ಕಟ್ಟಡದಿಂದ  ಕೆಳಗೆ ಎಸೆದಿರುವ ತಾಯಿ ಸುಷ್ಮಾ ಆ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಳ್ಳುವಂತೆ ನಟಿಸಿದ್ದಾಳೆ. ಈ ಎಲ್ಲಾ ಘಟನೆಗಳು ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸುಷ್ಮಾಳನ್ನು ಸಂಪಗಿ ರಾಮನಗರ ಪೊಲೀಸರು ಬಂಧಿಸಿದ್ದಾರೆ.

ಸಂಪಗಿರಾಮನಗರದಲ್ಲಿ ಅಪಾರ್ಟ್‌ಮೆಂಟ್‌ನಲ್ಲಿ ಕಿರಣ್ ಮತ್ತು ಸುಷ್ಮಾ ದಂಪತಿ ವಾಸವಾಗಿದ್ದು, ಮಗಳು ದ್ವಿತಿಗೆ ಮಾತು ಬರುತ್ತಿರಲಿಲ್ಲ. ಇದರಿಂದ ಸುಷ್ಮಾ ಬೆಸತ್ತಿದ್ದಳು ಎಂಬ ಮಾಹಿತಿ ಇದೆ.

ಹಿಂದಿನ ಲೇಖನಚುಂಚನಕಟ್ಟೆಯ ಕೋದಂಡರಾಮ ದೇವಾಲಯ
ಮುಂದಿನ ಲೇಖನಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಾಲತಾಣದಿಂದ ಹಿಂದಿ ಕಿತ್ತೊಗೆದು, ಕನ್ನಡಿಗರ ಸ್ವಾಭಿಮಾನ ಉಳಿಸಿ: ಸಿದ್ದರಾಮಯ್ಯ