ಮನೆ ಅಂತಾರಾಷ್ಟ್ರೀಯ 10 ಬಾರಿ ಮೌಂಟ್ ಎವರೆಸ್ಟ್ ಏರಿದ್ದ ಪರ್ವತಾರೋಹಿ ನೊಯೇಲ್ ಹನ್ನಾ ನಿಧನ

10 ಬಾರಿ ಮೌಂಟ್ ಎವರೆಸ್ಟ್ ಏರಿದ್ದ ಪರ್ವತಾರೋಹಿ ನೊಯೇಲ್ ಹನ್ನಾ ನಿಧನ

0

ಕಠ್ಮಂಡು: ಅತಿ ಎತ್ತರವಾದ ಶಿಖರವಾದ ಮೌಂಟ್ ಎವರೆಸ್ಟ್ ಅನ್ನು 10 ಬಾರಿ ಯಶಸ್ವಿಯಾಗಿ ಏರಿದ್ದ ಐರ್ಲೆಂಡ್‌’ನ ಹೆಸರಾಂತ ಪರ್ವತಾರೋಹಿ ನೊಯೇಲ್ ಹನ್ನಾ(56 ) ನಿಧನರಾಗಿದ್ದಾರೆ.

Join Our Whatsapp Group

ಅವರು ನೇಪಾಳದ ಅನ್ನಪೂರ್ಣ ಪರ್ವತ ಪ್ರದೇಶದಲ್ಲಿ ಪರ್ವತಾರೋಹಣ ಮಾಡಿ ವಾಪಸ್ ಬರುವಾಗ ಟೆಂಟ್‌’ನಲ್ಲಿ ಆಕ್ಸಿಜನ್ ಕೊರತೆಯಿಂದ ಸೋಮವಾರ ರಾತ್ರಿ ಮೃತಪಟ್ಟಿದ್ದಾರೆ.

ಅವರ ಮೃತದೇಹವನ್ನು ಕೆಳಗೆ ತರಲಾಗುತ್ತಿದ್ದು ಅಲ್ಲಿಂದ ಕಠ್ಮಂಡುವಿಗೆ ತೆಗೆದುಕೊಂಡು ಹೋಗಲಾಗುತ್ತದೆ ಎಂದು ಸೆವೆನ್ ಸಮ್ಮಿಟ್ ಟ್ರೆಕ್ಕಿಂಗ್‌’ನ ಮಿಂಗ್ಮಾ ಶೆರ್ಫಾ ತಿಳಿಸಿದ್ದಾರೆ.

ನೊಯೇಲ್ ಅವರು ಸಾಯುವ ಮುನ್ನ 8,091 ಮೀಟರ್ ಎತ್ತರವಿರುವ ಅನ್ನಪೂರ್ಣ ಪರ್ವತವನ್ನು (ಮೌಂಟ್ ಎವರೆಸ್ಟ್ 8,849) ಯಶಸ್ವಿಯಾಗಿ ಏರಿದ್ದರು.

2006 ರಿಂದ 2020ರವರೆಗೆ ವಿವಿಧ ಸಂದರ್ಭಗಳಲ್ಲಿ ನೊಯೇಲ್ ಒಟ್ಟು 10 ಬಾರಿ ಮೌಂಟ್ ಎವರೆಸ್ಟ್ ಅನ್ನು ಯಶಸ್ವಿಯಾಗಿ ಏರಿದ್ದರು. ಈ ಮೂಲಕ ಅವರು ಪ್ರಪಂಚದ ಟಾಪ್ 10 ಪರ್ವತಾರೋಹಿಗಳ ಸಾಲಿನಲ್ಲಿ ಹೆಸರು ಪಡೆದಿದ್ದರು.

ಇದೇ ವೇಳೆ ನೊಯೇಲ್ ಅವರ ಜೊತೆ ಅನ್ನಪೂರ್ಣ ಪರ್ವತ ಏರಲು ಹೋಗಿದ್ದ ಭಲಜೀತ್ ಕೌರ್ ಹಾಗೂ ಅರ್ಜುನ್ ವಾಜಪೇಯಿ ಅವರನ್ನು ಅಪಾಯದಿಂದ ರಕ್ಷಿಸಲಾಗಿದೆ. ಕಳೆದ ವಾರ ಇಲ್ಲಿಯೇ ಹಿಮಗಾಳಿಯಿಂದ ನೇಪಾಳದ ಮೂವರು ಪರ್ವತಾರೋಹಿಗಳು ಮೃತಪಟ್ಟಿದ್ದರು.

ಅತ್ಯಂತ ಅಪಾಯಕಾರಿಯಾಗಿರುವ ಅನ್ನಪೂರ್ಣ ಪರ್ವತಪ್ರದೇಶದಲ್ಲಿ ಜಗತ್ತಿನಲ್ಲಿಯೇ ಅತಿ ಹೆಚ್ಚು ಪರ್ವತಾರೋಹಿಗಳು ಮೃತಪಟ್ಟಿದ್ದಾರೆ.