ಮನೆ ರಾಜಕೀಯ ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ

ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ

0

ಉಡುಪಿ: ಗ್ರಾಮ ಪಂಚಾಯತ್‌ಗಳು ಈ ಹಿಂದೆ ನೀಡುತ್ತಿರುವ ಏಕ ನಿವೇಶನ ನಕ್ಷೆಯ ಅನುಮೋದನೆ ಮತ್ತು ಇ- ಸ್ವತ್ತಿನ 9/11 ವಿತರಣೆಗೆ ರಾಜ್ಯ ಸರಕಾರ ನಗರಾಭಿವೃದ್ಧಿ ಇಲಾಖೆ ಆದೇಶದಂತೆ, ಸ್ಥಳೀಯ ನಗರಾಭಿವೃದ್ಧಿ ಪ್ರಾಧಿಕಾರದ ಅನುಮೋದನೆ ಪಡೆಯಬೇಕಾಗಿದ್ದು, ಈ ಹೊಸ ಸುತ್ತೋಲೆಯಿಂದ ಜನಸಾಮಾನ್ಯರಿಗೆ ತುಂಬಾ ಸಮಸ್ಯೆಯಾಗುತ್ತಿದೆ. ಆದ್ದರಿಂದ ಹಳೆ ವ್ಯವಸ್ಥೆಯನ್ನೇ ಮುಂದುವರಿಸಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಮುಖ್ಯಮಂತ್ರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

Join Our Whatsapp Group

ಉಡುಪಿ, ದಕ್ಷಿಣಕನ್ನಡ, ಉತ್ತರ ಕನ್ನಡ ಜಿಲ್ಲೆಗಳಲ್ಲಿರುವ ತುಂಡು ಭೂಮಿ ಗೊಂದಲದಿಂದ ಜನಸಾಮಾನ್ಯರು ಕಷ್ಟಪಡುತ್ತಿದ್ದಾರೆ. ಈ ಹಿಂದೆ ವಿನ್ಯಾಸ ಅನುಮೋದನೆಗೆ ಜಿ.ಪಂ. ಎಂಜಿನಿಯರ್‌ ವಿಭಾಗದಿಂದ ತಾಂತ್ರಿಕ ಶಿಫಾರಸುಗಳಿಗೆ ಅವಕಾಶಗಳಿದ್ದು, ಈಗ ಮಾಡಿರುವ ಬದಲಾವಣೆಯಿಂದ ಸಿಬಂದಿ ಮತ್ತು ಮೂಲ ಸೌಕರ್ಯಗಳ ಕೊರತೆಯಿರುವ ಪ್ರಾಧಿಕಾರವನ್ನೇ ಜನರು ಆಶ್ರಯಿಸಬೇಕಾಗಿದೆ. ಇದರಿಂದ ಗ್ರಾಮ ಪಂಚಾಯತ್‌ಗಳ ಹಕ್ಕನ್ನು ಕಸಿದುಕೊಂಡಂತಾಗಿದೆ ಎಂದು ಸ್ಥಳೀಯಾಡಳಿತ ಪ್ರತಿನಿಧಿಗಳು ಪ್ರತಿಕ್ರಿಯಿಸಿದ್ದಾರೆ.

ಒಟ್ಟಾರೆ ಏಕ ನಿವೇಶನ ನಕ್ಷೆಯ ಅನುಮೋದನೆ ಮತ್ತು 9/11ರ ವಿತರಣೆ ವ್ಯವಸ್ಥೆಯನ್ನು ಪಂಚಾಯತ್‌ ರಾಜ್‌ ಇಲಾಖೆಯಿಂದ ನಗರ ಪ್ರಾಧಿಕಾರಕ್ಕೆ ನೀಡಿರುವುದರಿಂದ ಜನಸಾಮಾನ್ಯರಿಗೆ ತೊಂದರೆಯಾಗಿದೆ.

ಆದ್ದರಿಂದ ಹಿಂದಿನಂತೆ ಗ್ರಾಮ ಪಂಚಾಯತ್‌ ಮತ್ತು ಪಂಚಾಯತ್‌ ರಾಜ್‌ ವ್ಯವಸ್ಥೆ ಮೂಲಕ 9/11ರ ವಿತರಣೆ ಮತ್ತು ಏಕ ನಿವೇಶನ ನಕ್ಷೆಯ ಅನುಮೋದನೆ ನೀಡುವಂತೆ ಆದೇಶ ಮಾಡಬೇಕೆಂದು ಸಂಸದರು ಪತ್ರದಲ್ಲಿ ಕೋರಿದ್ದಾರೆ.