ಮನೆ ಕಾನೂನು ವಾಹನ ಕಳವಾದ ಬಗ್ಗೆ ತಡವಾಗಿ ಮಾಹಿತಿ ನೀಡಿದರೆ ವಿಮೆ ನಿರಾಕರಿಸಿಸುವಂತಿಲ್ಲ: ಸುಪ್ರೀಂ

ವಾಹನ ಕಳವಾದ ಬಗ್ಗೆ ತಡವಾಗಿ ಮಾಹಿತಿ ನೀಡಿದರೆ ವಿಮೆ ನಿರಾಕರಿಸಿಸುವಂತಿಲ್ಲ: ಸುಪ್ರೀಂ

0

ನವದೆಹಲಿ: ವಾಹನ ಕಳವಾದ ಬಗ್ಗೆ ತಡವಾಗಿ ಮಾಹಿತಿ ನೀಡಲಾಗಿದೆ ಎಂಬ ಕಾರಣ ಹೇಳಿ ವಿಮಾ ಕಂಪನಿಗಳು ಕ್ಲೇಮು ನಿರಾಕರಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್‌ ಶುಕ್ರವಾರ ತೀರ್ಪು ನೀಡಿದೆ.

ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಹಾಗೂ ಬೇಲಾ ಎಂ.ತ್ರಿವೇದಿ ಅವರಿದ್ದ ನ್ಯಾಯಪೀಠ ಅರ್ಜಿ ವಿಚಾರಣೆ ನಡೆಸಿತು.

ಈ ಸಂಬಂಧ ರಾಷ್ಟ್ರೀಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು (ಎನ್‌ಸಿಡಿಆರ್‌ಸಿ) ನೀಡಿದ್ದ ಆದೇಶವನ್ನು ವಜಾಗೊಳಿಸಿತು.

ಓರಿಯಂಟಲ್ ಇನ್ಸುರೆನ್ಸ್ ಕಂಪನಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿ ಎನ್‌ಸಿಡಿಆರ್‌ಸಿ ನೀಡಿರುವ ಆದೇಶ ದೋಷದಿಂದ ಕೂಡಿದೆ ಎಂದೂ ನ್ಯಾಯಪೀಠ ಅಭಿಪ್ರಾಯಪಟ್ಟಿತು.

ವಾಹನ (ಟಾಟಾ ಐವಾ ಟ್ರಕ್) ಕಳುವಾದ ಹಿನ್ನೆಲೆಯಲ್ಲಿ ಜೈನಾ ಕನ್ಸ್‌ಟ್ರಕ್ಷನ್ ಕಂಪನಿ ಲಿಮಿಟೆಡ್ ಪರಿಹಾರ ಕೋರಿ ಅರ್ಜಿ ಸಲ್ಲಿಸಿತ್ತು.

ಹಿಂದಿನ ಲೇಖನನರೇಗಾ ಯೋಜನೆ ಪ್ರಚಾರವಾಹಿನಿಗೆ ಶಾಸಕ ಸಾ.ರಾ.ಮಹೇಶ್ ಚಾಲನೆ
ಮುಂದಿನ ಲೇಖನಅತಿಥಿ ಉಪನ್ಯಾಸಕರ ಅರ್ಜಿಯಲ್ಲಿನ ತಪ್ಪು ಸರಿಪಡಿಸಲು ಅವಕಾಶ