ಮನೆ ಸುದ್ದಿ ಜಾಲ ಎಂ.ಆರ್. ಚಂದ್ರಶೇಖರ್ ಸಾವು: ಡಯಾಟಮ್ ಟೆಸ್ಟ್‌ನ ಮೊರೆ ಹೋದ ಪೊಲೀಸರು

ಎಂ.ಆರ್. ಚಂದ್ರಶೇಖರ್ ಸಾವು: ಡಯಾಟಮ್ ಟೆಸ್ಟ್‌ನ ಮೊರೆ ಹೋದ ಪೊಲೀಸರು

0

ದಾವಣಗೆರೆ(Davanagere): ಶಾಸಕ ಎಂ.ಪಿ. ರೇಣುಕಾಚಾರ್ಯ ಅವರ ಸಹೋದರನ ಪುತ್ರ ಎಂ.ಆರ್. ಚಂದ್ರಶೇಖರ್ ಸಾವಿನ ಕುರಿತು ತನಿಖೆ ನಡೆಯುತ್ತಿದ್ದು, ಪೊಲೀಸರು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿಯನ್ನು ಎದುರು ನೋಡುತ್ತಿದ್ದಾರೆ.

ಇನ್ನೆರಡು ದಿನಗಳಲ್ಲಿ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬರಲಿದ್ದು, ವರದಿ ಬರುವವರೆಗೂ ಅಧಿಕೃತವಾಗಿ ಏನು ಹೇಳಲಾಗದು ಉನ್ನತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಚಂದ್ರಶೇಖರ್ ಸಾವಿನ ಪ್ರಕರಣದಲ್ಲಿ ಸಾಕ್ಷ್ಯ ಸಂಗ್ರಹ ಮಾಡುತ್ತಿರುವ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಡಯಾಟಮ್ ಟೆಸ್ಟ್‌ನ ಮೊರೆ ಹೋಗಿದ್ದಾರೆ.

ಏನಿದು ಡಯಾಟಮ್ ಟೆಸ್ಟ್:

ಡಯಾಟಮ್ ಟೆಸ್ಟ್‌ ಎಂದರೆ ವ್ಯಕ್ತಿ ಸಾಯುವ ಮುನ್ನ ಶ್ವಾಸಕೋಶದ ಒಳಗೆ ನೀರು ಹೋಗಿತ್ತೆ? ಇಲ್ಲವೇ ಎಂಬುದಾಗಿದೆ.

ಈ ಪರೀಕ್ಷೆಯಿಂದ ಶ್ವಾಸಕೋಶದ ಒಳಗೆ ಸೇರಿರುವ ನೀರು ಹಾಗೂ ನಾಲೆಯೊಳಗಿನ ನೀರನ್ನು ಪರೀಕ್ಷೆ ಮಾಡಲಿದ್ದು, ಒಂದೇ ನೀರು ಎಂದು ಸಾಬೀತಾದರೆ ಅದೇ ನಾಲೆಯೊಳಗೆ ಮುಳುಗಿ ಸತ್ತಿರುವುದು ದೃಢಪಡುತ್ತದೆ. ಒಂದು ವೇಳೆ ಎರಡು ಬೇರೆ ಬೇರೆ ನೀರು ಎಂದು ಸಾಬೀತಾದರೆ ಬೇರೆ ಎಲ್ಲೋ ಮುಳುಗಿಸಿ ನಾಲೆಯೊಳಗೆ ತಂದು ಹಾಕಿದ್ದಾರೆ ಎಂಬುದು ತಿಳಿಯುತ್ತದೆ ಎಂದು ಉನ್ನತ ಮೂಲಗಳು ಸ್ಪಷ್ಟಪಡಿಸಿವೆ.

ಹಿಂದಿನ ಲೇಖನಮೈಸೂರಿಗೆ ಆಗಮಿಸಿದ ವಂದೇ ಭಾರತ್ ಎಕ್ಸ್’ಪ್ರೆಸ್ ರೈಲು
ಮುಂದಿನ ಲೇಖನಕೆಆರ್’ಎಸ್ ಬೃಂದಾವನದಲ್ಲಿ ಪ್ರತ್ಯಕ್ಷವಾದ ಚಿರತೆ: ಪ್ರವಾಸಿಗರ ಪ್ರವೇಶ ನಿರ್ಬಂಧ