ಕ್ಷೇತ್ರ – 23 ಡಿಗ್ರಿ 20 ಕಲೆಯಿಂದ 30 ಡಿಗ್ರಿವರೆಗೆ. ಕಲಾ – ವೃಷಭ , ರಾಶಿ ಸ್ವಾಮಿ – ಶುಕ್ರ, ನಕ್ಷತ್ರಸ್ವಾಮಿ – ಮಂಗಳ, ನಾಡಿ – ಮಧ್ಯ, ಯೋನಿ- ಸರ್ಪ, ಗಣ – ದೇವ, ನಾಮಾಕ್ಷರಗಳು – ವೆ,ವೂ
ಶರೀರಭಾಗ :- ಮುಖ, ಕೆನ್ನೆ, ಕಂಠನಾಳ, ಕಾಲು, ಕುತ್ತಿಗೆ, ಧಮನಿಗಳು ಹೊರಗಿನ ಕಂಠ ಭಾಗ.
ರೋಗಗಳು :- ಮೊಡವೆ, ಹಣೆಯಲ್ಲಿ ಗಾಯ, ಗಳಗಂಡ, ಕಂಠಬಾಧೆ, ಮಲಾವರೋದ, ಮೂತ್ರವರೋಧ, ರತಿ ರೋಗ, ಹೂವಿನಲ್ಲಿ ರಕ್ತಸ್ರಾವ, ಸೊಂಟ ನೋವು.
ಸಂರಚನೆ :- ಈ ನಕ್ಷತ್ರದಲ್ಲಿ ಜನಿಸಿದವರು ಎಲ್ಲಾ ಕಾರ್ಯಗಳನ್ನು ಜಾಗರೂಕನಾಗಿ ಪರಿಶೀಲಿಸಿ ಮಾಡುವನು. ಇನ್ನೊಬ್ಬರ ಮಾತಿನ ಅರ್ಥವನ್ನು ತಿಳಿಯುವರು. ಲೇಖಕನಾಗುವ, ನಾಯಕನಾಗುವ, ಸಂಘ ಸೇವೆಗಳಲ್ಲಿ ಪ್ರಯತ್ನಶೀಲನಾಗುವನು, ಭಾಷಣಕಾರ, ಪ್ರಬಂಧಕಾರ, ವಿನಯ ಶೀಲ ವ್ಯವಹಾರಿಯಾಗುವನು.
ಉದ್ಯೋಗ ವಿಶೇಷತೆಗಳು :- ಆಸ್ತಿಗಳ ಸ್ವಾಮಿ, ಭೂಮಿಭವನ ಕ್ಷೇತ್ರದೊಡೆಯ, ವಾದ್ಯಯಂತ್ರ, ಪ್ರದರ್ಶಿನಿ, ಬೆಳ್ಳಿ, ಪ್ಲಾಟಿನಂ, ದರ್ಜಿ, ಮೊಬೈಲ್, ವಾಸ್ತು ಶಿಲ್ಪ, ಗೊಬ್ಬರ, ಆಟೋಮೊಬೈಲ್, ಇಂಜಿನಿಯರಿಂಗ್, ಆದಾಯ ಅಧಿಕಾರಿಗಳು, ವ್ಯಾಪಾರಿಗಳು, ಚರ್ಮೋಧ್ಯಮ, ತಂಬಾಕು, ನಸ್ಯ, ಮಿಠಾಯಿ, ವಿವಾಹ ಮಂಟಪ, ವಿವಾಹ ಸಾಮಗ್ರಿ, ಮಾರಾಟ, ಟ್ಯಾಕ್ಸಿ ಚಾಲಕ, ಟೆಕ್ಸ್ ಟೈಲ್ಸ್, ಫಿಲಂ ಉದ್ಯೋಗ, ಚಿತ್ರ, ಕಲ, ವಜ್ರ, ಮಣಿರತ್ನ ಆಭರಣಗಳು, ವ್ಯಾಸಲಿನ್, ಪೌಡರ್, ಟೂತ್ಪೇಸ್ಟ್, ಬ್ರಷ್, ದಿನ ಬಳಕೆ ವಸ್ತುಗಳ ಮುಂತಾದವು ಈ ನಕ್ಷತ್ರದೊಂದಿಗೆ ಸಂಬಂಧ ಹೊಂದಿವೆ.
ಮೃಗಶಿರ ನಕ್ಷತ್ರದಲ್ಲಿ ಹುಟ್ಟಿದವರು ಶ್ರೀಮಂತರು ಅನೈತಿಕ ಕಾರ್ಯಗಳಲ್ಲಿ ತೊಡಗಿರುವವರು. ವ್ಯಾಪಾರಿ, ಅಧಿಕಾರಿ, ಉನ್ನತಿಗಾಮಿ ಯಾದ ವಿಚಾರಶೀಲ, ಪ್ರತಿಭಾವಂತ, ಧಾರ್ಮಿಕ, ಕೆಲವೊಮ್ಮೆ ಉತ್ಸವಗಳಲ್ಲಿ ತನ್ನ ಆಡಂಬರವನ್ನು ಪ್ರದರ್ಶಿಸುವನು. ಸೂರ್ಯನು ಈ ನಕ್ಷತ್ರದಲ್ಲಿ ಜೇಷ್ಠ ಮಾಸದಲ್ಲಿ ಸುಮಾರು ಆರು ದಿನಗಳವರೆಗೆ ಇರುತ್ತಾನೆ.