ಮೃಗಶಿರಾ ನಕ್ಷತ್ರದ ಪೂರ್ವಾರ್ಧದ ಕ್ಷೇತ್ರವ್ಯಾಪ್ತಿ 23 ಅಂಶ 20 ಕಾಲದಿಂದ 30 ಅಂಶ ವೃಷದವರೆಗೆ ರಾಶಿ ಸ್ವಾಮಿ ಶುಕ್ರ ನಕ್ಷತ್ರ ಸ್ವಾಮಿ ಮಂಗಳ, ಮದ್ಯ ನಾಡಿ,ಸರ್ಪಯೋನಿ, ದೇವಗಣ,ದೇವತೆ ಚಂದ್ರ ತಾರಾ ಸಮೂಹ ಮೂರು ಆಕಾಶ ಭಾಗ ದಕ್ಷಿಣ.ನಮಾಕ್ಷರ ವೇ, ವೋ, ಮೃಗಶಿರಾ ನಕ್ಷತ್ರದ ಪೂರ್ವಾರ್ಥ ಪ್ರತಿನಿಧಿಸುವ ಜಾತಕನ ಶರೀರದ ಭಾಗ ಮುಖ, ಗದ್ದ,ಕಪಾಳ,ಕಂಠ ನಾಳ,ಅಂಗಳ, ಕತ್ತು ಧಮನಿ ಧಮನಿಗಳು,ಕತ್ತಿನ ನರಗಳು, ಹೊರಚಾಚಿ ಟಾನ್ಸಿಲ್ಸ್.
ಮೃಗಶಿರಾ ನಕ್ಷತ್ರದ ಜಾತಕ ಸ್ವರೂಪ (ಪೂರ್ವಾರ್ಧ ) :
ಸರ್ವ ಕಾರ್ಯಗಳ ತಿಳುವಳಿಕೆಯನ್ನು ಒಂದು ಇಚ್ಛೆ ತೀವ್ರ ಸ್ಮರಣಶಕ್ತಿ,ಅನ್ಯರ ಮಾತುಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ.ತರ್ಕ ಮಂಡಿಸಲು ನಿಪುಣ,ಸ್ವಾರ್ಥಿ, ಜಗಳಗಂಟ ಹಾಗೂ ಕಸಿತ ಹರಣದ ಪ್ರವೃತ್ತಿ.ಲೇಖನವಾಗುವ ಇಚ್ಛೆ,ನೇತೃತ್ವದ ಕಾರ್ಯದಲ್ಲಿ ಕುಶಲ. ಏಕತೆ ಪ್ರೇಮಿ ಸೇನೆ ಅಥವಾ ಸಃಸ್ಥೆಯಲ್ಲಿ ಪ್ರಮುಖನಾಗಲು ನಾಗಲು ಪ್ರಯತ್ನಶೀಲ,ವ್ಯಕ್ತಾ ಪ್ರವಕ್ತಾ ವ್ಯವಾಹಾರ ಕುಶಲ ಮತ್ತು ವಿನಮ್ರ,
ಮೃಗಶಿರ ಜಾತಕ ಉದ್ಯೋಗ : ಆಸ್ತಿಯ ಒಡೆಯ,ಭೂಮಿ ಭವನ, ವಾದ್ಯ ಯಂತ್ರ ಪ್ರದರ್ಶನಿ, ಬೆಳ್ಳಿ ಪ್ಲಾಟಿನಮ್ ಸಂಪಿಗ,ವಾಸ್ತು ಶಿಲ್ಪ,ಆಹಾರ, ಯಂತ್ರಗಳ ಬಿ ಡಿ ಭಾಗಗಳನ್ನು ಇಂಜಿನಿಯರಿಂಗ್.ಆದಾಯಕರ ಅಥವಾ ಮಾರಾಟಗಾರ ವಿಭಾಗ,ಆಹಾರ ಅಥವಾ ಚರ್ಮೋದ್ಯಮ.ತಂಬಾಕು, ನಾಶೀಪೀಡಿ, ಸಿಹಿ ತಿಂಡಿಗಳು, ವಿವಾಹ ಸಾಮಗ್ರಿಗಳ ವಿವಾಹ ಮಂಟಪ ಅಥವಾ ವಿವಾಹ ಸಾಮಗ್ರಿಗಳ ಮಾರಾಟಗಾರ ಪಶು ಚಿಕಿತ್ಸಕ, ಪಶು ಪಾಲನೆ, ಮಾಡುವುಳ್ಳವ,ರಿಕ್ಷಾ ಚಾಲಕ,ಟ್ಯಾಕ್ಸಿ ಚಾಲಕ ಹಣ್ಣು ಗಳ ಮಾರಾಟಗಾರ, ವ್ಯಾಪಾರದಿಂದ ಲಾಭ ಹೊಂದುವ ವಸ್ತ್ರೋದ್ಯಮ ಚಿತ್ರೋದಯಮ ಧ್ವನಿ ಅಭಿಯಂತ, ಚಿತ್ರಕಲೆ, ರತ್ನಾಭರಣ ವ್ಯಾಪಾರಿ ವಜ್ರ ಅಂಗಮರ್ಧಕ,ಹವಳ, ಆಭೂಷಣ, ಸೌಂದರ್ಯ ಪ್ರಸಾದಗಳನ್ನು ಟೂತ್ ಪೇಸ್ಟ್ ಬ್ರಷ್ದೈನಿಕ ಉಪಯುಕ್ತ ವಸ್ತುಗಳು.
ಮೃಗಶಿರಾ ಜಾತಕ ರೋಗ :
ಮೊಡವೆ ಹಣೆಯ ಮೇಲೆ ಪೆಟ್ಟು ಅಥವಾ ಗಾಯ ಗಳಗಂಡ, ಕಂಠ ಶೂಲೆ,ರೋಹಿಣಿ ದುರ್ಬಲ ಸೊಂಟ, ಮಲಬದ್ಧತೆ,ಮಲಅವರೋಧ, ಮುತ್ರಾವರೋಧ ಕೋಷ್ಟಬದ್ಧತೆ,ರತಿರೋಗ, ಮೂಗಿನಿಂದ ರಕ್ತಸ್ರಾವ.
ವಿಶೇಷ:
ಶುಕ್ರನ ರಾಶಿ ಮತ್ತು ಮಂಗಳ ನಕ್ಷತ್ರದಲ್ಲಿ ಜನಿಸುವ ಇಂಥ ಜಾತಕನ ಹೆಚ್ಚಾಗಿ ಧನವಂತ,ಅನೈತಿಕ ಕಾರ್ಯಗಳಿಂದ ಧನಪ್ರಾಪ್ತಿ ಹೊಂದುವವ, ಅವಿಶ್ವಾಸಿ, ಪ್ರಗತಿಗಾಮಿ,ಸಟ್ಟಾ ಜೂಜುಗಳಲ್ಲಿ ಅಭಿರುಚಿ ಇರುವವ, ವ್ಯಾಪಾರಿ, ಅಧಿಕಾರಿ, ಕಾರ್ಯಗಳಲ್ಲಿ ನಿಪುಣ,ವಿಚಾರಶೀಲ, ಪ್ರತಿಭಾ ಶಾಲಿ,ಧಾರ್ಮಿಕ,ಮತ್ತು ಕೆಲವೊಮ್ಮೆ ಉತ್ಸವಗಳಲ್ಲಿ ಮಿಥ್ಯ ಆಡಂಬರ ಮತ್ತು ವೈಭವವನ್ನು ಪ್ರದರ್ಶಿಸುವನಾಗುತ್ತಾನೆ.
ಒಂದು ವೇಳೆ ಜಾತಕನಿಗೆ ಶುಕ್ರ.ಅಥವಾ ಮಂಗಳ ಗೋಚರ ಪ್ರಭಾವ ಅನುಭವವಾದರೆ, ಆ ಸಮಯ ಇದೇ ಗ್ರಹ ಈ ನಕ್ಷತರದ ಭಾಗದಿಂದ ಭ್ರಮಣ ಶೀಲವಾಗಿರುತ್ತವೆ, ಸೂರ್ಯನು ಈ ನಕ್ಷತ್ರ ಮೇಲೆ ಜೇಷ್ಠ ಮಾಸದ ಅತ್ಯಂತ ಸುಮಾರು ಆರು ದಿನಗಳ ವರೆಗೆ ಇರುತ್ತಾನೆ.