ಮನೆ ಕ್ರೀಡೆ ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿ: ಜೂ.5ಕ್ಕೆ ಭಾರತ ತಂಡ ದೆಹಲಿಗೆ

ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿ: ಜೂ.5ಕ್ಕೆ ಭಾರತ ತಂಡ ದೆಹಲಿಗೆ

0

ನವದೆಹಲಿ (New Delhi): ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿ ಜೂನ್‌ 9 ರಿಂದ ಪ್ರಾರಂಭವಾಗಲಿದ್ದು, ಭಾರತ ತಂಡ ಜೂ.5ರಂದೇ ದೆಹಲಿ ತಲುಪಲಿದೆ.

ದಕ್ಷಿಣ ಆಫ್ರಿಕಾ ತಂಡ ಜೂ.2 ರಂದು ದೆಹಲಿಗೆ ಆಗಮಿಸಲಿದೆ. ಟೀಂ ಇಂಡಿಯಾ ಜೂನ್ 5ರಂದು ಇಲ್ಲಿ ಸಮಾವೇಶಗೊಳ್ಳಲಿದ್ದು, ದಕ್ಷಿಣ ಆಫ್ರಿಕಾದವರು ಜೂನ್ 2ರಂದು ದೆಹಲಿಗೆ ಬಂದಿಳಿಯಲಿದ್ದಾರೆ ಎಂದು ಡಿಡಿಸಿಎ ಜಂಟಿ ಕಾರ್ಯದರ್ಶಿ ರಾಜನ್ ಮಂಚಂದ ತಿಳಿಸಿದ್ದಾರೆ. 

ವಿರಾಟ್ ಕೊಹ್ಲಿ ಮತ್ತು ಜಸ್ಪ್ರೀತ್ ಬುಮ್ರಾ ಸೇರಿದಂತೆ ಕೆಲ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಇನ್ನು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಕೆ.ಎಲ್.ರಾಹುಲ್ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.

ಈ ಬಾರಿ ಸರಣಿಗೆ ಕೋವಿಡ್ -19 ಬಯೋ-ಬಬಲ್ ಇರುವುದಿಲ್ಲ ಹಾಗೂ ಜನಸಂದಣಿ ಯಾವುದೇ ನಿರ್ಬಂಧ ವಿಧಿಸಿಲ್ಲ. ಸರಣಿಯೂ ಜೂನ್ 12ರಂದು ಕಟಕ್, ಜೂನ್ 14ರಂದು ವಿಶಾಖಪಟ್ಟಣಂ, ಜೂನ್ 17ರಂದು ರಾಜ್ ಕೋಟ್ ಮತ್ತು ಜೂನ್ 19ರಂದು ಬೆಂಗಳೂರಿನಲ್ಲಿ ಪಂದ್ಯಗಳು ನಡೆಯಲಿವೆ.

ಹಿಂದಿನ ಲೇಖನಅರಸೀಕೆರೆಯ ಮ್ಯೂಸಿಯಂನಲ್ಲಿನ ದೇವರ ವಿಗ್ರಹ ವಿರೂಪಗೊಳಿಸಿದ ಪ್ರಕರಣ: ಆರೋಪಿಗಳ ಪತ್ತೆಗೆ  ಪೊಲೀಸರ ತಂಡ ರಚನೆ
ಮುಂದಿನ ಲೇಖನಇಂದಿನ ರಾಶಿ ಭವಿಷ್ಯ ಹೀಗಿದೆ: ಕರ್ಕ ರಾಶಿಯವರಿಗೆ ಉತ್ತಮ ದಿನ