ಮನೆ ಅಪರಾಧ ಮುಡಾ ಕೇಸ್​: ರಾಜ್ಯಪಾಲರಿಗೆ ದೂರು ನೀಡಿದ್ದ ಸ್ನೇಹಮಯಿ ಕೃಷ್ಣ ವಿರುದ್ಧ ದೂರು

ಮುಡಾ ಕೇಸ್​: ರಾಜ್ಯಪಾಲರಿಗೆ ದೂರು ನೀಡಿದ್ದ ಸ್ನೇಹಮಯಿ ಕೃಷ್ಣ ವಿರುದ್ಧ ದೂರು

0

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ನಿವೇಶ ಹಂಚಿಕೆಯಲ್ಲಿ ನಡೆದಿದೆ ಎನ್ನಲಾಗಿರುವ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪಾತ್ರವೂ ಇದೆ ಅಂತ​ ರಾಜ್ಯಪಾಲರಿಗೆ ವಿರುದ್ಧ ದೂರು ನೀಡಿದ್ದ ಆರ್​ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರ ವಿರುದ್ಧ ಮೈಸೂರು ಪೊಲೀಸ್ ಆಯುಕ್ತರಿಗೆ ಕಾಂಗ್ರೆಸ್​ ನಾಯಕ ಎಂ.ಲಕ್ಷ್ಮಣ ದೂರು ನೀಡಿದ್ದಾರೆ.

Join Our Whatsapp Group

ಸ್ನೇಹಮಯಿ ಕೃಷ್ಣ ವಿರುದ್ಧ ರಾಜ್ಯದ ಹಲವೆಡೆ 17 ಕ್ರಿಮಿನಲ್ ಕೇಸ್ ​ಗಳು​ ದಾಖಲಾಗಿವೆ. ಆಸ್ತಿ ವಿಚಾರದಲ್ಲಿ ಹಸ್ತಕ್ಷೇಪ ಮಾಡಿ ಭೂಮಿ ವಶಪಡಿಸಿಕೊಳ್ಳುವುದು, ನನ್ನನ್ನು ಸೇರಿ ನಗರದ ಗಣ್ಯರನ್ನು ಹೆದರಿಸುವ ಕೆಲಸ ಮಾಡುತ್ತಿದ್ದಾನೆ.

ಆರ್​​ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ಕ್ರಮ ಕೈಗೊಳ್ಳಿ. ಸ್ನೇಹಮಯಿ ಕೃಷ್ಣರನ್ನು ಗಡಿಪಾರು ಮಾಡಿ ಗೂಂಡಾ ಕಾಯ್ದೆ ಪ್ರಕರಣ ದಾಖಲಿಸುವಂತೆ ಮನವಿ ಮಾಡಿದ್ದಾರೆ.

ಸ್ನೇಹಮಯಿ ಕೃಷ್ಣ ಅವರು 2022-2023ನೇ ಸಾಲಿನಲ್ಲಿ ಒಟ್ಟು 110 ಅರ್ಜಿಗಳನ್ನು RTI ಮೂಲಕ ವಿವಿಧ ಇಲಾಖೆಗಳಿಗೆ ನೀಡಿ ದಾಖಲಾತಿಗಳನ್ನು ಪಡೆದು ಕೊಂಡಿದ್ದಾರೆ ಎಂದು ಪೊಲೀಸ್ ವರದಿ ಹೇಳುತ್ತಿದೆ. ಕೆಲ ಇಲಾಖೆಗಳ ನಕಲಿ ಸೀಲ್​ಗಳನ್ನು ಇಟ್ಟುಕೊಂಡು ಹಾಗೂ RTI ಮಾಹಿತಿ ಸೀಲ್‌ಗಳನ್ನು ನಕಲಿಯಾಗಿ ಮಾಡಿಸಿಕೊಂಡು ದಾಖಲೆಗಳನ್ನು ತಿರುಚಿ ಮತ್ತು ಕೆಲ ಅಕ್ಷರಗಳಿಗೆ whitenerನ್ನು ಹಚ್ಚಿರುವುದು ಕಂಡು ಬಂದಿದೆ.

ಇವರ ವಿರುದ್ಧ ಸುಮಾರು 17 ಕ್ರಿಮಿನಲ್ ಪ್ರಕರಣಗಳು 10 ವರ್ಷದಿಂದ ಇದ್ದರೂ ಪೊಲೀಸ್ ಇಲಾಖೆ ಸೆಕ್ಯೂರಿಟಿ ಕೇಸ್​ನ್ನು 6 ತಿಂಗಳಿಗೊಮ್ಮೆ ಹಾಕಬೇಕಾಗಿರುವ ನಿಯಮವಿದ್ದರೂ ಹಾಕಿರುವುದಿಲ್ಲವೇಕೆ? ಇವರು ಒಬ್ಬ ರೌಡಿ ಶೀಟರ್ ಆಗಿದ್ದು ನಿರಂತರವಾಗಿ ನಗರದ ಗಣ್ಯರನ್ನು ಮತ್ತು ನನ್ನನ್ನು ಬ್ಲಾಕ್‌ಮೇಲ್ ಮಾಡುತ್ತಿರುವ ಚಟುವಟಿಕೆಯಲ್ಲಿ ಸಕ್ರಿಯನಾಗಿದ್ದರೂ ಇವರ ಮೇಲೆ ಸೆಕ್ಯೂರಿಟಿ ಕೇಸ್​ನ್ನು ಪೊಲೀಸರು ಹಾಕದಿರುವುದು ಎಷ್ಟರಮಟ್ಟಿಗೆ ಸರಿ? ಇವನು ಒಬ್ಬ Habitual Black mailer ಆಗಿದ್ದರೂ ಮತ್ತು Extortion ನಲ್ಲಿ ತೊಡಗಿಸಿಕೊಂಡಿದ್ದರೂ ಪೊಲೀಸ್ ಇಲಾಖೆ ಜಾಣ ಕುರುಡನ್ನು ಪ್ರದರ್ಶಿಸುತ್ತಿರುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ್ದಾರೆ.