ಮನೆ ಮನರಂಜನೆ ಕಾಂತಾರ ಚಾಪ್ಟರ್-1 ಅಡ್ವಾನ್ಸ್ ಬುಕ್ಕಿಂಗ್‌ಗೆ ಮುಹೂರ್ತ ಫಿಕ್ಸ್..!

ಕಾಂತಾರ ಚಾಪ್ಟರ್-1 ಅಡ್ವಾನ್ಸ್ ಬುಕ್ಕಿಂಗ್‌ಗೆ ಮುಹೂರ್ತ ಫಿಕ್ಸ್..!

0

ಕಾಂತಾರ ಚಾಪ್ಟರ್-1 ಸಿನಿಮಾ ಇದೇ ಅಕ್ಟೋಬರ್ 2ರಂದು ವಿಶ್ವದಾದ್ಯಂತ ತೆರೆಕಾಣಲು ಸಜ್ಜಾಗಿ ನಿಂತಿದೆ. ಈ ಚಿತ್ರದ ಮೇಲೆ ವಿಶ್ವದಾದ್ಯಂತ ಕುತೂಹಲ ಹೆಚ್ಚಾಗಿದೆ. ಈ ಸಿನಿಮಾದ ಅಡ್ವಾನ್ಸ್ ಬುಕ್ಕಿಂಗ್ ಓಪನ್ ಬಗ್ಗೆ ಹೊಂಬಾಳೆ ಸಂಸ್ಥೆ ಸಿಹಿಸುದ್ದಿ ನೀಡಿದೆ. ಇದೇ ನಾಳೆ (ಸೆ.26) ಮಧ್ಯಾಹ್ನ 12:30 ರಿಂದ ಕರ್ನಾಟಕದ ಟಿಕೆಟ್ ಅಡ್ವಾನ್ಸ್ ಬುಕ್ಕಿಂಗ್ ಓಪನ್ ಆಗಲಿದೆ.

ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ಕಾಂತಾರ ಚಾಪ್ಟರ್-1 ಸಿನಿಮಾ ಟ್ರೈಲರ್‌ ರಿಲೀಸ್ ಮಾಡಿದೆ. ಸಿನಿಮಾದ ಟ್ರೈಲರ್‌ ನೋಡಿ ಈಗಾಗ್ಲೇ ಭಕ್ತಗಣ ಸಂಭ್ರಮಿಸಿದೆ. ಕಾಂತಾರ ದೃಶ್ಯಕಾವ್ಯದ ವೈಭವ ನೋಡಿ ಕುಣಿದು ಕುಪ್ಪಳಿಸೋಕೆ ಕಾದು ಕುಳಿತಿದೆ ಅಭಿಮಾನಿ ಬಳಗ. ಇನ್ನೊಂದು ವಾರವಷ್ಟೇ ಬಾಕಿ ಇರುವ ಬೆನ್ನಲ್ಲೇ ಹೊಂಬಾಳೆ ಸಂಸ್ಥೆ ನೀಡಿರುವ ಖುಷಿ ಸಮಾಚಾರಕ್ಕೆ ಅಭಿಮಾನಿಗಳು ಅಡ್ವಾನ್ಸ್ ಆಗಿ ಬುಕಿಂಗ್ ಮಾಡೋಕೆ ಸಿದ್ಧರಾಗಿದ್ದಾರೆ.

ಕಾಂತಾರ ಚಾಪ್ಟರ್-1 ಸಿನಿಮಾ ಜಗತ್ತನ್ನು ಕಣ್ತುಂಬಿಕೊಳ್ಳಲು ಕ್ಯೂರಿಯಾಸಿಟಿಯಿಂದ ಕಾಯ್ತಿದ್ದ, ಅಭಿಮಾನಿಗಳಿಗೆ ಮುಂಗಡ ಬುಕ್ಕಿಂಗ್ ಮಾಡಿಕೊಳ್ಳಲು ಟೈಂ ಫಿಕ್ಸ್ ಮಾಡಲಾಗಿದೆ. ಕರ್ನಾಟಕದ ಅಡ್ವಾನ್ಸ್ ಬುಕ್ಕಿಂಗ್‌ಗೆ ದಿನ ಮತ್ತು ಟೈಂ ನಿಗದಿಯಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಒಂದೊಂದೆ ರಾಜ್ಯದ ಅಪ್‌ಡೇಟ್‌ಗಳು ಸಿಗಲಿದೆ.