ಮನೆ Uncategorized ಶಂಕು ಸ್ಥಾಪನೆಗೆ ಮುಹೂರ್ತ

ಶಂಕು ಸ್ಥಾಪನೆಗೆ ಮುಹೂರ್ತ

0

ಅಶ್ವಿನಿ, ರೋಹಿಣಿ,ಮೃಗಶಿರ, ಅನುರಾಧ,ಶ್ರಾವಣ, ಹಸ್ತಾ ಮೂಲಾ, ಉತ್ತರಾಷಾಢ ತರಭಾದ್ರಪದ, ರೇವತಿ ಈ ನಕ್ಷತ್ರಗಳಲ್ಲಿ ಶುಭವಾರ, ಶುಭತಿಥಿಗಳಲ್ಲಿ ಸ್ಥಿರ ಲಗ್ನದಲ್ಲಿ ಗೃಹ ಬಲವಿದ್ದಾಗ್ಗೆ ಪ್ರಶಸ್ತ ಮೂಹೂರ್ತವಿದೆ.ಗುರು ಶುಕ್ರರ ಅಸ್ತಕಾಲವಿರ ಬಾರದು ಮತ್ತು ಸಾಯಂಕಾಲ ಅಥವಾ ರಾತ್ರಿಯ ಕಾಲದಲ್ಲಿ ಸಂಕಷ್ಟಾಪನೆ ಮಾಡಬಾರದು. (ಈ ಮುಹೂರ್ತವನ್ನು ಅಡಿಗಲ್ಲು ಇಡುವ ಉದ್ಘಾಟನಾ ಸಮಾರಂಭಕ್ಕೂ ಸಾಧಿಸಬಹುದು )

Join Our Whatsapp Group

 *ಶುಭವಾರಗಳು : ಸೋಮವಾರ, ಬುಧವಾರ, ಗುರುವಾರ,ಮತ್ತು ಶುಕ್ರವಾರ.

 ಶುಭ ತಿಥಿಗಳು : 2,3,5,6,7,10,11,12 13 15 ಮತ್ತು ಬಹುಳ ಪಾಡ್ಯ.

 ಶುಭ ಯೋಗಗಳು : ಪ್ರೀತಿ ಆಯುಷ್ಮಾನ್,ಸೌಭಾಗ್ಯ,ಭೋಜನ, ಸುಕರ್ಮ, ಧೃತಿ, ವೃದ್ಧಿ ಧ್ರುವ, ಹರ್ಷಣ, ಸಿದ್ದಿ,ವರಿಯನ್, ಶಿವ, ಸಿದ್ದ ಸಾದ್ಯ, ಶುಭ, ಶುಕ್ರ, ಬ್ರಹ್ಮ, ಐಂದ್ರಿವ,

 ಶುಭ ಕರಣಗಳು : ಭವ, ಬಾಲವ, ಕೌಲವ, ತೈತಿಲ, ಗರಜ, ಮತ್ತು ವಣಿಜ,

 ಅಷ್ಟಗೃಹಗಳ ನಿರ್ಮಾಣ ( ಮನೆಕಟ್ಟುವ ಪಾಯವು )

     ಪೂರ್ವ ದಿಕ್ಕಿನಲ್ಲಿ ಭೋಜನದ ಮನೆ ಆಗ್ನೇಯ ದಿಕ್ಕಿನಲ್ಲಿ ಅಡಿಗೆಯ ಮನೆ,ದಕ್ಷಿಣ ದಿಕ್ಕಿನಲ್ಲಿ ಮಲಗುವ ಮನೆ,ನೈರುತ್ಯದಲ್ಲಿ ಆಯುಧ ಇಲ್ಲವೇ ಸಾಮಾಗ್ರಿಗಳನ್ನು ಸಂಗ್ರಹಿಸುವ ಮನೆ ಪಶ್ಚಿಮದಲ್ಲಿ ದನ ಕರುಗಳನ್ನು ಕಟ್ಟುವ ಮನೆ, ವಾಯುವ್ಯ ದಿಕ್ಕಿನಲ್ಲಿ ಧಾನ್ಯ ಸಂಗ್ರಹಿಸುವ ಮನೆ, ವಾಯುವ್ಯ ದಿಕ್ಕಿನಲ್ಲಿ ಧಾನ್ಯ ಸಂಗ್ರಹಿಸುವ ಮನೆ, ಉತ್ತರಕ್ಕೆ ದ್ರವ್ಯ ಸಂಗ್ರಹದ ಮನೆ ಸ್ಥಾನ ಮನೆ ಹಾಗೂ ಪ್ರಸವದ ಮನೆ ಈಶಾನ ದಿಕ್ಕಿಗೆ ದೇವರ ಮನೆ, ಈಶ್ಯಾನ ದಿಕ್ಕಿಗೆ ದೇವರ ಮನೆ  ಮತ್ತು ಸ್ಥಾನದ ಮನೆ ಈ ಪ್ರಕಾರ ಕಟ್ಟಿಸುವುದು ಶಾಸ್ತ್ರಸಮ್ಮತವೆನಿಸುವುದು.

 ಗೃಹದ್ವಾರ ನಿರ್ಣಯ ಹಾಗೂ ಪಲವಿಚಾರ :

 ಶ್ಲೋಕ :

 ಅತ್ಯುಭ್ರಯಂ ಚೋರಭಯಂ ಅತಿಹೃಸ್ವಂ ಕ್ಷುಧಾಭಯಂ|

 ಚತುಷಷ್ರ್ಯಂ ಗುಲೋತ್ಸೇದಂ ಚತುಸ್ತ್ರಿಂಶಸ್ತು ವಿಸ್ತರಂ ||

 ಅರ್ಥ : ಹೊಸ ಮನೆಗೆ ಬಾಗಿಲುಗಳ ಪ್ರಮಾಣ ಹೇಳುವಲ್ಲಿ ಅನೇಕ ಭಿನ್ನಾಭಿಪ್ರಾಯಗಳಿವೆ. ಆದರೂ, ನಾವು ಸಿದ್ಧಾಂತವಾಗಿ ನಿರ್ಣಯಿಸಿ ಇಲ್ಲಿ ನಿರ್ಣವನ್ನು ಬರೆದಿರುತ್ತೇವೆ.ಹೊಸ ಮನೆಗೆ ಇಡತಕ್ಕ ಮುಖ್ಯ ದ್ವಾರವು ಬಹಳ ಎತ್ತರವಿದ್ದರೆ ಚೋರ ಭಯ, ಬಹಳ ಕಿರಿಯದಾಗಿದ್ದರೆ ಅನ್ನದ ಅಭಾವವು. ಕಾರಣ ಹೆಬ್ಬಾಗಿಲನ್ನು ಸಮ ಪ್ರಮಾಣವಾಗಿ ಇರಬೇಕೆಂಬುದು ಮುಖ್ಯವು. ಒಟ್ಟಿನಲ್ಲಿ ಬಾಗಿಲದ ಅಗಲವು ಎಷ್ಟಿರುವದೋ ಅದರ ದುಪ್ಪಟ್ಟು ಒಂದು ಇಂಚು ಹೆಚ್ಚಿದರೆ ಸಾಕು. ಈ ಪ್ರಮಾಣವು ಸರ್ವರಿಗೂ ಸುಖದಾಯಕವೆಂದು  ಗರ್ಗ್ಯಾದಿ ಮಹರ್ಷಿಗಳ ಸಿದ್ದಾಂತವಿದೆ ಮತ್ತು ಮನೆಗೆ ಯಾವ ಆಯವನ್ನು ಇಟ್ಟಿರುತ್ತದೆಯೋ ಅದೇ ಆಯದ ಬಾಗಿಲವನ್ನಿಟ್ಟರೆ ಮಹಾಶ್ರೇಷ್ಠವೆಂದು  ವಿಶ್ವಕರ್ಮ ಶಾಸ್ತ್ರದಲ್ಲಿ ಹೇಳಲ್ಪಟ್ಟಿದೆ ಇನ್ನು ಒಳಗಿನ ಬಾಗಿಲುಗಳು ತಲೆಬಾಗಿಲಕ್ಕಿಂತ ಉದ್ದ, ಅಗಲಗಳ  ಅಳತೆಯಲ್ಲಿ ಕಡಿಮೆ ಇರಬೇಕು. ಐದು ಭಾಗ ಆಗಲ,11 ಭಾಗ ಎತ್ತರವಿರುವ ಹೆಬ್ಬಾಗಿಲು ಇದ್ದರೆ ಐದು ಭಾಗ ಆಗಲ ಒಂಬತ್ತು ಭಾಗ ಎತ್ತರ ಹೀಗೆ ಉಳಿದ ಬಾಗಿಲುಗಳನ್ನಿಡಬಹುದು.ಈ ಪ್ರಕಾರವಾಗಿ ಬಾಗಿಲವನ್ನಿಡುವುದರಿಂದ ಸರ್ವರಿಗೂ ಸರ್ವರೀತಿಯಿಂದಲೂ ಸುಖವು. ಯಾವ ಆಯದ ಮನೆ ಯಿದ್ದರೂ ಪೂರ್ವ ಮತ್ತು ಉತ್ತರ ದಿಕ್ಕಿನ ಬಾಗಿಲವೇ ಶ್ರೇಷ್ಠವು. ಪಶ್ಚಿಮ ದಿಕ್ಕಿನ ಬಾಗಿಲವು ಮಾಧ್ಯಮವು. ದಕ್ಷಿಣ ದಿಕ್ಕಿನ ಬಾಗಿಲವು ಕನಿಷ್ಠವು.ಹೆಬ್ಬಾಗಿಲದ ಎದುರಾಗಿ ನೇರವಾಗಿ ಹಿಂದೆ ಹಿತ್ತಲು ಬಾಗಿಲು ಇದ್ದರೆ ಒಳ್ಳೆಯದು. ಅಂದರೆ ಪೂರ್ವಕ್ಕೆ ಹೆಬ್ಬಾಗಿಲು ಇದ್ದರೆ ಪಶ್ಚಿಮಕ್ಕೆ ಇತ್ತಲು  ಬಾಗಿಲು ನೇರವಾಗಿ ಎದುರಾಗಿರಬೇಕು ಮನೆಗೆ ದಕ್ಷಿಣ ದಿಕ್ಕಿಗೆ ತಲೆ ಬಾಗಿಲು ಇದ್ದರೆ ಉತ್ತರ ದಿಕ್ಕಿಗೆ ಒಂದು ಬಾಗಿಲನ್ನು ಹಚ್ಚಿದರೆ ದೋಷವೆನಿಸುವುದಿಲ್ಲ ಇದು ಶುಭವೆನ್ನಿಸುವದು.