ಮನೆ ಮನರಂಜನೆ ‘ರಂಗು ರಗಳೆ’ ಮಾಡಲು ಸಜ್ಜಾದ ಮಲ್ಟಿಸ್ಟಾರ್ಸ್‌

‘ರಂಗು ರಗಳೆ’ ಮಾಡಲು ಸಜ್ಜಾದ ಮಲ್ಟಿಸ್ಟಾರ್ಸ್‌

0

ಸ್ಯಾಂಡಲ್‌ ವುಡ್‌ ನಲ್ಲಿ ಹೊಸ ಪ್ರಯೋಗಗಳು ನಡೆಯುತ್ತಲೇ ಇವೆ. ಇಂಥ ಪ್ರಯತ್ನಕ್ಕೆ ಇದೀಗ ಹೊಸಬರ ತಂಡವೊಂದು ಅಡಿ ಇಟ್ಟಿದೆ. ಅದುವೇ ‘ರಂಗು ರಗಳೆ’.

Join Our Whatsapp Group

ಜಾಕ್ ಎಂಬುವವರ ನಿರ್ದೇಶನದ ಚೊಚ್ಚಲ ಚಿತ್ರದ ಮುಹೂರ್ತ ಬೆಂಗಳೂರಿನ ಪಂಚಮುಖಿ ಗಣಪತಿ ದೇವಾಲಯದಲ್ಲಿ ಇತ್ತೀಚೆಗೆ ನಡೆಯಿತು.

ತಮಿಳು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಜಾಕ್ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್ ಹೇಳುವ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ.

ರೊಮ್ಯಾಂಟಿಕ್ ಕಾಮಿಡಿ ಕಥಾಹಂದರದ ಈ ಚಿತ್ರದಲ್ಲಿ ‘ಲವ್ ಮಾಕ್ಟೇಲ್’ ಖ್ಯಾತಿಯ ಅಭಿಲಾಷ್ ದಳಪತಿ, ‘ಗಟ್ಟಿಮೇಳ’ ಧಾರಾವಾಹಿ ಖ್ಯಾತಿಯ ಅಭಿದಾಸ್ ಹಾಗೂ ‘ಮೆಟ್ರೋ ಸಾಗಾ’ ಮೂಲಕ ಗಮನಸೆಳೆದಿರುವ ಸುಘೋಷ್ ನಾಯಕರಾಗಿ ನಟಿಸುತ್ತಿದ್ದಾರೆ.

‘ಇದೊಂದು ಎಂಟರ್‌ ಟೈನ್ಮೆಂಟ್‌ ಪ್ಯಾಕೇಜ್‌. ಜಾಕ್ ಹಾಗೂ ನನಗೆ 12 ವರ್ಷದ ಪರಿಚಯ. ನಿರ್ದೇಶಕರನ್ನು ನಂಬಿ ನಿರ್ಮಾಪಕರು ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ‘ಲವ್ ಮಾಕ್ಟೇಲ್’ ನನಗೆ ದೊಡ್ಡ ಯಶಸ್ಸು ತಂದುಕೊಟ್ಟಿದೆ. ಈ ಹೊಸ ಸಿನಿಮಾ ಮೂಲಕ ನಾಯಕನಾಗಿ ತೆರೆ ಮೇಲೆ ಬರುತ್ತಿದ್ದೇನೆ’ ಎನ್ನುತ್ತಾರೆ ಅಭಿಲಾಷ್‌.

ಮೇ ಮೊದಲ ವಾರದಲ್ಲೇ ಶೂಟಿಂಗ್‌ ಆರಂಭಿಸಲು ತಂಡ ಸಿದ್ಧವಾಗಿದೆ. ಶ್ರೀ ವಿಶ್ವಂ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಶಶಿಕಲಾ ಉಮೇಶ್ ‘ರಂಗು ರಗಳೆ’ ಸಿನಿಮಾಗೆ ಬಂಡವಾಳ ಹೂಡಿದ್ದಾರೆ.

ಹಿಂದಿನ ಲೇಖನಬಿಜೆಪಿ ಸಮಾಜವನ್ನು ಜೋಡಿಸುವ ಕೆಲಸ ಮಾಡುತ್ತದೆ: ಸಿಎಂ ಬೊಮ್ಮಾಯಿ
ಮುಂದಿನ ಲೇಖನಅಧಿಕಾರದ ಆಸೆಗಾಗಿ ಶೆಟ್ಟರ್ ಕಾಂಗ್ರೆಸ್ ಗೆ ಹೋಗಿದ್ದಾರೆ: ಕೆ.ಎಸ್. ಈಶ್ವರಪ್ಪ