ಮನೆ ರಾಷ್ಟ್ರೀಯ ಮುಂಬೈ: ದೇವಸ್ಥಾನದ ಉತ್ಸವದಲ್ಲಿ ಪ್ರಸಾದ ಸೇವಿಸಿದ 90 ಮಂದಿ ಅಸ್ವಸ್ಥ

ಮುಂಬೈ: ದೇವಸ್ಥಾನದ ಉತ್ಸವದಲ್ಲಿ ಪ್ರಸಾದ ಸೇವಿಸಿದ 90 ಮಂದಿ ಅಸ್ವಸ್ಥ

0

ಮುಂಬೈ: ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯಲ್ಲಿ ದೇವಸ್ಥಾನದ ಉತ್ಸವ ಸಂದರ್ಭದಲ್ಲಿ ಪ್ರಸಾದ ಸೇವಿಸಿದ ಕನಿಷ್ಠ 90 ಮಂದಿ ಅಸ್ವಸ್ಥಗೊಂಡಿದ್ದು, ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

Join Our Whatsapp Group

ನಾಯ್‌ಗಾಂವ್‌ನಲ್ಲಿ ಬುಧವಾರ ಸಂಜೆ ಈ ಘಟನೆ ನಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶಿವ ದೇಗುಲದಲ್ಲಿ ಉತ್ಸವವೊಂದನ್ನು ಆಯೋಜಿಸಲಾಗಿತ್ತು. ಬಳಿಕ ಭಕ್ತರಿಗೆ  ‘ಅಂಬಿಲ್’ (ಗಂಜಿ) ಮತ್ತು ‘ಖೀರ್’ (ಹಾಲಿನಿಂದ ಮಾಡಿದ ಸಿಹಿ ಭಕ್ಷ್ಯ) ನೀಡಲಾಗಿತ್ತು.

ಪ್ರಸಾದ ಸೇವಿಸಿದ ಬಳಿಕ ಕೆಲ ಭಕ್ತರಿಗೆ ತಲೆಸುತ್ತು ಹಾಗೂ ವಾಂತಿ ಸಮಸ್ಯೆ ಕಾಣಿಸಿಕೊಂಡಿತು.  ಆರಂಭದಲ್ಲಿ  ಕೆಲವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಬಳಿಕ ತಡರಾತ್ರಿಯವರೆಗೆ ಒಟ್ಟು 90 ಜನರನ್ನು ಚಿಕಿತ್ಸೆಗಾಗಿ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಸದ್ಯ ಎಲ್ಲರ ಆರೋಗ್ಯ ಸ್ಥಿರವಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹಿಂದಿನ ಲೇಖನ‘ಮ್ಯಾಕ್ಸ್’ ಸಿನಿಮಾದ ಚಿತ್ರೀಕರಣ ಮುಕ್ತಾಯ
ಮುಂದಿನ ಲೇಖನಸಮನ್ಸ್‌ಗೆ ಉತ್ತರಿಸಿದ ಪಿಎಂಎಲ್ಎ ಆರೋಪಿಗಳನ್ನು ಬಂಧಿಸಲು ಇ ಡಿಗೆ ವಿಶೇಷ ನ್ಯಾಯಾಲಯದ ಅನುಮತಿ ಅಗತ್ಯ: ಸುಪ್ರೀಂ