ಮನೆ ಮನರಂಜನೆ ‘ಮ್ಯಾಕ್ಸ್’ ಸಿನಿಮಾದ ಚಿತ್ರೀಕರಣ ಮುಕ್ತಾಯ

‘ಮ್ಯಾಕ್ಸ್’ ಸಿನಿಮಾದ ಚಿತ್ರೀಕರಣ ಮುಕ್ತಾಯ

0

ಕಿಚ್ಚ ಸುದೀಪ್​ರ   ಸಿನಿಮಾ ಒಂದು ಬಿಡುಗಡೆ ಆಗಿ ಎರಡು ವರ್ಷವಾಯ್ತು. ‘ವಿಕ್ರಾಂತ್ ರೋಣ’ ಸಿನಿಮಾದ ಬಳಿಕ ಸುದೀಪ್​ರ ಇನ್ಯಾವುದೇ ಸಿನಿಮಾ ಬಿಡುಗಡೆ ಆಗಿಲ್ಲ .ಕಳೆದ 10 ತಿಂಗಳಿನಿಂದಲೂ ಸುದೀಪ್ ‘ಮ್ಯಾಕ್ಸ್’ ಸಿನಿಮಾಕ್ಕೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದೀಗ ಸ್ವತಃ ಕಿಚ್ಚ ಸುದೀಪ್ ‘ಮ್ಯಾಕ್ಸ್’ ಸಿನಿಮಾ ಬಗ್ಗೆ ದೊಡ್ಡ ಅಪ್​ಡೇಟ್ ನೀಡಿದ್ದಾರೆ.

Join Our Whatsapp Group

ಕಿಚ್ಚ ಸುದೀಪ್, ಟ್ವಿಟ್ಟರ್​ನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ‘ಮ್ಯಾಕ್ಸ್’ ಸಿನಿಮಾದ ಚಿತ್ರೀಕರಣ ಮುಗಿದಿದೆ ಎಂದಿದ್ದಾರೆ. ವಿಡಿಯೋನಲ್ಲಿ ತಾವು ತಂಗಿದ್ದ ಹೋಟೆಲ್​ನ ಪರಿಸರ, ಆ ನಂತರ ತಾವು ಪ್ರತಿದಿನ ಓಡಾಡುವ ದಾರಿಯ ವಿಡಿಯೋ, ಸಿನಿಮಾ ಶೂಟಿಂಗ್ ಸೆಟ್, ಸೆಟ್​ ಒಳಗೆ ತಮ್ಮ ಮೇಕಪ್ ರೂಂ ಇನ್ನಿತರೆಗಳನ್ನೆಲ್ಲ ವಿಡಿಯೋನಲ್ಲಿ ತೋರಿಸಿ ಕೊನೆಗೆ ‘ಮ್ಯಾಕ್ಸ್’ ಚಿತ್ರೀಕರಣ ಮುಗಿದಿದೆ’ ಎಂದು ಹೇಳಿದ್ದಾರೆ. ಆ ಮೂಲಕ ಸುದೀಪ್ ಅಭಿಮಾನಿಗಳು ಮತ್ತೆ ನಿರೀಕ್ಷೆಗಳನ್ನು ಮೂಡಿಸಿಕೊಂಡು ಸಿನಿಮಾಕ್ಕಾಗಿ ತುದಿಗಾಲಲ್ಲಿ ಕಾಯುವಂತೆ ಮಾಡಿದ್ದಾರೆ.

ವಿಡಿಯೋ ಜೊತೆಗೆ ‘ಮ್ಯಾಕ್ಸ್’ ಸಿನಿಮಾದ ಚಿತ್ರೀಕರಣದ ಅನುಭವದ ಬಗ್ಗೆಯೂ ಬರೆದುಕೊಂಡಿರುವ ಸುದೀಪ್, ‘ಮಹಾಬಲಿಪುರಂನಲ್ಲಿ ‘ಮ್ಯಾಕ್ಸ್’ ಸಿನಿಮಾದ ಚಿತ್ರೀಕರಣ ಮುಗಿಸಿದೆವು. 10 ತಿಂಗಳ ಸುದೀರ್ಘ ಪಯಣ ಇದಾಗಿತ್ತು. ಈ ಹತ್ತು ತಿಂಗಳ ಪಯಣದ ಪ್ರತಿ ನಿಮಿಷವನ್ನೂ ನಾನು ಎಂಜಾಯ್ ಮಾಡಿದ್ದೇನೆ. ಅದ್ಭುತವಾದ ತಂಡ ಹಾಗೂ ಕಲಾವಿದರೊಟ್ಟಿಗೆ ಈ ಹತ್ತು ತಿಂಗಳು ಕೆಲಸ ಮಾಡಿದೆ. ಚಿತ್ರೀಕರಣ ಸುಗಮವಾಗಿ ಸಾಗಲು ನೆರವಾದ ಧನು ಅವರಿಗೆ ಧನ್ಯವಾದ ಎಂದಿರುವ ಸುದೀಪ್, ಸಿನಿಮಾದ ನಿರ್ದೇಶಕ ವಿಜಯ್ ಹಾಗೂ ಅವರ ತಂಡಕ್ಕೆ ವಿಶೇಷ ಧನ್ಯವಾದಗಳನ್ನು ಸಹ ಹೇಳಿದ್ದಾರೆ.

 ‘ಮ್ಯಾಕ್ಸ್’ ಸಿನಿಮಾ ಆಕ್ಷನ್ ಥ್ರಿಲ್ಲರ್ ಸಿನಿಮಾ ಆಗಿದ್ದು, ವಿಜಯ್ ಕಾರ್ತಿಕೇಯನ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾಕ್ಕೆ ಕೆಆರ್ ​ಜಿ ಸ್ಟುಡಿಯೋಸ್ ಬಂಡವಾಳ ಹೂಡಿದ್ದಾರೆ. ಈ ಸಿನಿಮಾದ ಶೂಟಿಂಗ್ ಗಾಗಿ ಮಹಾಬಲಿಪುರಂನಲ್ಲಿ ದೊಡ್ಡ ಸೆಟ್ ನಿರ್ಮಾಣ ಮಾಡಲಾಗಿದೆ. ಈ ಸಿನಿಮಾದ ಬಗ್ಗೆ ಸುದೀಪ್​ ಬಹಳ ನಿರೀಕ್ಷೆಗಳನ್ನು ಇರಿಸಿಕೊಂಡಿದ್ದಾರೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಎರಡು-ಮೂರು ತಿಂಗಳಲ್ಲಿ ಪೋಸ್ಟ್ ಪ್ರೊಡಕ್ಷನ್ ಮುಗಿಸಿ ಪ್ರೇಕ್ಷಕರ ಮುಂದೆ ಬರುವ ಸಾಧ್ಯತೆ ಇದೆ.

ಈ ಸಿನಿಮಾದ ಬಳಿಕ ಅನುಪ್ ಬಂಡಾರಿ ನಿರ್ದೇಶನದ ಹೊಸ ಸಿನಿಮಾದಲ್ಲಿ ಸುದೀಪ್ ನಟಿಸಲಿದ್ದಾರೆ. ಅದಾದ ಬಳಿಕ ತಮಿಳಿನ ಜನಪ್ರಿಯ ನಿರ್ದೇಶಕ ಚೇರನ್ ನಿರ್ದೇಶನದ ಸಿನಿಮಾದಲ್ಲಿ ಸುದೀಪ್ ನಟಿಸಲಿದ್ದಾರೆ.

ಹಿಂದಿನ ಲೇಖನನಾನು ಜನ್ಮದಿನವನ್ನು ಆಚರಿಸಿಕೊಳ್ಳುತ್ತಿಲ್ಲ: ಜೆಡಿಎಸ್‌ ಕಾರ್ಯಕರ್ತರಿಗೆ ಪತ್ರ ಬರೆದ ಹೆಚ್ ಡಿ ದೇವೇಗೌಡ
ಮುಂದಿನ ಲೇಖನಮುಂಬೈ: ದೇವಸ್ಥಾನದ ಉತ್ಸವದಲ್ಲಿ ಪ್ರಸಾದ ಸೇವಿಸಿದ 90 ಮಂದಿ ಅಸ್ವಸ್ಥ