ಮನೆ ಕಾನೂನು ಲಂಚ ಪಡೆಯುವ ವೇಳೆ ನಗರಸಭೆ ಆಯುಕ್ತ, ಎಇಇ ಲೋಕಾಯುಕ್ತ ಬಲೆಗೆ

ಲಂಚ ಪಡೆಯುವ ವೇಳೆ ನಗರಸಭೆ ಆಯುಕ್ತ, ಎಇಇ ಲೋಕಾಯುಕ್ತ ಬಲೆಗೆ

0

ಹಾಸನ: ಲಂಚ ಪಡೆಯುವಾಗ ನಗರಸಭೆ ಆಯುಕ್ತ ಹಾಗೂ ಸಹಾಯಕ ಕಾರ್ಯಪಾಲಕ ಅಭಿಯಂತರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

Join Our Whatsapp Group

ಹಾಸನ ನಗರಸಭೆ ಆಯುಕ್ತ ನರಸಿಂಹಮೂರ್ತಿ, ಸಹಾಯಕ ಕಾರ್ಯಪಾಲಕ ಅಭಿಯಂತರ (ಪರಿಸರ) ಕೆ.ಆರ್ ವೆಂಕಟೇಶ್ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿಗಳು.

ಹಾಸನಾಂಬ ಜಾತ್ರಾ ಮಹೋತ್ಸವದ ಸ್ವಚ್ಛತಾ ಟೆಂಡರ್ ಬಿಲ್ ನೀಡಲು ಒಂದೂವರೆ ಲಕ್ಷಕ್ಕೆ ಅಧಿಕಾರಿಗಳು ಬೇಡಿಕೆ ಇಟ್ಟಿದ್ದರು.

10 ಲಕ್ಷ 50 ಸಾವಿರ ಬಿಲ್ ಹಣ ನೀಡಲು ನಗರಸಭೆ ಆಯುಕ್ತ ಹಾಗೂ ಕೆ.ಆರ್ ವೆಂಕಟೇಶ್ ಒಂದೂವರೆ ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು.

ಇಂದು ಹಾಸನ ನಗರಸಭೆಯ ಕೆ.ಆರ್ ವೆಂಕಟೇಶ್ ಕಚೇರಿಯಲ್ಲಿ ಲಂಚ ಪಡೆಯುವಾಗ ಲೋಕಾಯುಕ್ತ ಇನ್ಸ್ ಪೆಕ್ಟರ್ ಗಳಾದ ಬಾಲು ಹಾಗೂ ಶಿಲ್ಪಾ ನೇತೃತ್ವದಲ್ಲಿ ದಾಳಿ ಮಾಡಿದ್ದ ಲೋಕಾಯುಕ್ತ ಅಧಿಕಾರಿಗಳು ಹಣದ ಸಮೇತ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.