ರಾಮನಗರ: ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿ ಬಾವಿಗೆ ಎಸೆದ ಘಟನೆ ಚನ್ನಪಟ್ಟಣ ತಾಲೂಕಿನಲ್ಲಿ ಶುಕ್ರವಾರ (ಜ.03) ಬೆಳಕಿಗೆ ಬಂದಿದೆ.
ಚನ್ನಪಟ್ಟಣ ತಾಲೂಕಿನ ಮಳೂರು ಪಟ್ಟಣ ಗ್ರಾಮದ ವಾಟರ್ ಮನ್ ಮಧುಕುಮಾರ್ (31) ಎಂಬಾತನನ್ನು ಕೊಲೆಮಾಡಿ ಬಾವಿಗೆ ಎಸೆಯಲಾಗಿದೆ.
ಹೊಸವರ್ಷದ ಪಾರ್ಟಿ ಮಾಡಲೆಂದು ಹೆಂಡತಿಯ ದೊಡ್ಡಪ್ಪನ ಮಗ ಸಾಗರ್ ಎಂಬಾತನ ಜೊತೆ ತೆರಳಿದ್ದ ಮಧು, ಎರಡು ದಿನವಾದರೂ ಮನೆಗೆ ಬಾರದ ಹಿನ್ನೆಲೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲು ಮಾಡಲಾಗಿತ್ತು.
ಶುಕ್ರವಾರ ಬೆಳಿಗ್ಗೆ ಕೊಡ್ಲೂರು ತೊರೆ ಬಳಿ ಬಾವಿಯಲ್ಲಿ ಶವ ಪತ್ತೆಯಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಬಾವಿಯಿಂದ ಶವ ಮೇಲಕ್ಕೆತ್ತಿದ್ದಾರೆ.















