ಬೆಂಗಳೂರು: ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಅತ್ತೆ ಕಸ್ತೂರಿ ಶೆಟ್ಟಿ ಅವರ ಮನೆಯಲ್ಲಿದ್ದ 2.5 ಲಕ್ಷ ಕಳ್ಳತನವಾಗಿದೆ.
ಕಸ್ತೂರಿ ಶೆಟ್ಟಿ ಅವರು 2023ರ ಡಿಸೆಂಬರ್ 31ರ ಮಧ್ಯಾಹ್ನ, ರೂಮ್ ಬೀರುವಿನಲ್ಲಿ 2.05 ಲಕ್ಷ ಹಣ ಇಟ್ಟಿದ್ದರು. ಆದರೆ ಈಗ ಆ ಹಣ ಕಾಣೆಯಾಗಿದೆ. ಮನೆ ಕೆಲಸದಾಕೆ ಮೇಲೆ ಅನುಮಾನಗೊಂಡು ಕಸ್ತೂರಿ ಶೆಟ್ಟಿ ಅವರು ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮನೆ ಕೆಲಸದಾಕೆ ರತ್ನಮ್ಮ ಅವರನ್ನು ಕರೆದು ವಿಚಾರಣೆ ನಡೆಸಿದ್ದಾರೆ. ರತ್ನಮ್ಮ ಕಳೆದ ಆರು ತಿಂಗಳಿನಿಂದ ಕಸ್ತೂರಿ ಶೆಟ್ಟಿ ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದಾರೆ.














