ಮೈಸೂರು : ಗೋ ಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆಯುವಂತೆ ಮೈಸೂರಿನಲ್ಲಿ ಪ್ರೊ.ರವಿ ವರ್ಮ ಕುಮಾರ್ ಸಿಎಂಗೆ ಮನವಿ ಮಾಡಿದ್ದಾರೆ. ಗೋಹತ್ಯೆ ನಿಷೇಧ ಕಾಯ್ದೆಯಿಂದ ಮುಸ್ಲಿಮರಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಕಾಯ್ದೆ ವಾಪಸ್ ಪಡೆಯಿರಿ. ಗೋ ಹತ್ಯೆ ಬ್ಯಾನ್ ಹಿಂಪಡೆಯಿರಿ ಎಂದು ಸಿಎಂ ಇದ್ದ ವೇದಿಕೆಯಲ್ಲೇ ಮನವಿ ಮಾಡಿದ್ದಾರೆ.
2021ರಲ್ಲಿ ಕರ್ನಾಟಕದಲ್ಲಿ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ ಜಾರಿಯಾಗಿತ್ತು. ಈ ಕಾಯ್ದೆಯ ಅಡಿಯಲ್ಲಿ ಗೋಹತ್ಯೆ ನಿಷೇಧಿಸಲಾಗಿದೆ. ಆದರೆ ಕೃಷಿ ಮತ್ತು ಪಶುಸಂಗೋಪನೆ ಉದ್ದೇಶಗಳಿಗಾಗಿ ವಯಸ್ಸಾದ ಜಾನುವಾರುಗಳ ಸಾಗಾಟಕ್ಕೆ ಮಾತ್ರ ಅವಕಾಶವಿದೆ.
ಕಾಯ್ದೆ ಜಾರಿಯಾದ ನಂತರ, ಅಕ್ರಮ ಗೋಸಾಗಾಟ ಮತ್ತು ಹತ್ಯೆ ತಡೆಯಲು ಸರ್ಕಾರ ಕ್ರಮ ಕೈಗೊಂಡಿದ್ದು, ಈವರೆಗೆ ಹಲವಾರು ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಮಧ್ಯೆ, ಮುಸ್ಲಿಂ ಸಮುದಾಯ ಭವನಗಳಿಗೆ 67 ಕೋಟಿ ರೂ. ಮಂಜೂರು ಮಾಡಿರೋದನ್ನು ಖಂಡಿಸಿ ವಿಪಕ್ಷ ನಾಯಕ ಅಶೋಕ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಮುಸ್ಲಿಮರಿಗೆ ತುಷ್ಟೀಕರಣದ ಭಾಗ್ಯ, ಓಲೈಕೆ ಗ್ಯಾರಂಟಿ. ಹಿಂದೂಗಳಿಗೆ ತೆರಿಗೆ, ತೊಂದರೆ, ಚೊಂಬು ಗ್ಯಾರೆಂಟಿ ಅಂದಿದ್ದಾರೆ.















