ಮನೆ ಸುದ್ದಿ ಜಾಲ ಮೈಸೂರು:  67ನೇ ಕನ್ನಡ ರಾಜ್ಯೋತ್ಸವ ಆಚರಣೆ

ಮೈಸೂರು:  67ನೇ ಕನ್ನಡ ರಾಜ್ಯೋತ್ಸವ ಆಚರಣೆ

0

ಮೈಸೂರು(Mysuru): ಅಖಿಲ ಕರ್ನಾಟಕ ಒಕ್ಕಲಿಗರ ಮಹಾಸಭಾ ವತಿಯಿಂದ 67ನೇ ಕನ್ನಡ ರಾಜ್ಯೋತ್ಸವವನ್ನು ಸಂಘದ ಕಚೇರಿಯಲ್ಲಿ ವಿಧಾನ ಪರಿಷತ್ ಸದಸ್ಯ  ಸಿ.ಎನ್. ಮಂಜೇಗೌಡರು ಜೈ ಭುವನೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಂಜೇಗೌಡರು ಮಾತನಾಡಿ, ಕನ್ನಡವನ್ನು ಉಳಿಸಿ ಬೆಳೆಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ಆ ನಿಟ್ಟಿನಲ್ಲಿ ನಾವೆಲ್ಲರೂ ಸೇರಿ ಕನ್ನಡವನ್ನು ಉಳಿಸೋಣ ಬೆಳೆಸೋಣ ಎಂದು ಹೇಳಿದರು.

ಮಹಾಸಭಾದ ಗೌರವಾಧ್ಯಕ್ಷರಾದ ಡಾ. ಸಿ.ಪಿ ಕೃಷ್ಣಕುಮಾರ್ ಅವರಿಗೆ ಕರ್ನಾಟಕದ ಪಂಪ ಪ್ರಶಸ್ತಿಯನ್ನು ಕೊಡಬೇಕೆಂದು ಇದೇ ಸಂದರ್ಭದಲ್ಲಿ ಸರ್ಕಾರವನ್ನು ಆಗ್ರಹಿಸಿದರು.

ಕರ್ನಾಟಕದಲ್ಲಿ ಕುವೆಂಪು ನಂತರ ಸಾಹಿತ್ಯ ವಲಯದಲ್ಲಿ ತನ್ನದೇ ಆದ ಹೆಸರನ್ನು ಮೂಡಿಸಿಕೊಂಡು ಬಂದಿರುವ ಸಿಪಿಕೆ ರವರು ಈ ಪ್ರಶಸ್ತಿಗೆ ಅರ್ಹರು. ಸಿಪಿಕೆ ರವರು ಕನ್ನಡದ ಆಸ್ತಿ ಇಂಥ ಮಹನೀಯರನ್ನು ಸರ್ಕಾರ ಗುರುತಿಸದಿರುವುದು ನಿಜಕ್ಕೂ ನನಗೆ ಬೇಸರ ತರಿಸಿದೆ ಎಂದರು.

ಮೈಸೂರು ಜಿಲ್ಲಾಡಳಿತ ನೀಡುವ 2022 ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದಿರುವ ವಿಕ್ರಂ ಅಯ್ಯಂಗಾರ್ ಹಾಗೂ ಶ್ರೀ ಪಡುವಾರಳ್ಳಿ ರಾಮಕೃಷ್ಣ ಅವರನ್ನು ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಮಹಾಸಭಾದ ಅಧ್ಯಕ್ಷರಾದ ಎನ್. ಬೆಟ್ಟೇಗೌಡ, ಗೌರವ ಸಲಹೆಗಾರರ ಡಾ.ಬಿ.ಎನ್.ರವೀಶ್, ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಕಸಾಪ ನಿಕಟಪೂರ್ವ ಅಧ್ಯಕ್ಷ ಡಾ. ವೈ.ಡಿ. ರಾಜಣ್ಣ, ಮಹಾಸಭಾದ ಕೋಶಾಧ್ಯಕ್ಷ ಎಂ. ಎನ್. ಚಂದ್ರಶೇಖರ್ ಕಾರ್ಯದರ್ಶಿ ರವಿಕುಮಾರ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯೆ  ಲಕ್ಷ್ಮೀದೇವಿ, ಸಿರಿ ಬಾಲು, ಸುರೇಶ್ ಹಾಗೂ  ಮುಂತಾದವರಿದ್ದರು.

ಹಿಂದಿನ ಲೇಖನಸಕಾರಣವಿಲ್ಲದೇ ರಜೆ ಕೇಳಿದರೆ ಶಿಸ್ತುಕ್ರಮ: ಡಿಸಿಪಿ ಆದೇಶಕ್ಕೆ ಪೊಲೀಸ್ ವಲಯದಲ್ಲಿ ಅಸಮಧಾನ
ಮುಂದಿನ ಲೇಖನಅಂಜನಾದ್ರಿಯಲ್ಲಿ ಅಭಿವೃದ್ಧಿ ಕಾಮಗಾರಿ: ಕಾಂಕ್ರೀಟ್ ಮಯವಾಗದಿರಲಿ ಎಂದ ರಾಜವಂಶಸ್ಥ ಶ್ರೀಕೃಷ್ಣದೇವರಾಯ