ಮೈಸೂರು(Mysuru): ದಲ್ಲಾಳಿಗಳಿಂದ ವಂಚನೆಯನ್ನು ತಪ್ಪಿಸಲು, ಕುರಿ, ಮೇಕೆ ಸಾಕಣೆದಾರರು ಹಾಗೂ ಖರೀದಿದಾರರ ನಡುವೆ ನೇರ ಸಂಪರ್ಕ, ಸಂವಹನಕ್ಕೆ ಅನುವು ಮಾಡಿಕೊಡಲು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮವು ‘ಆ್ಯಂಡ್ರಾಯ್ಡ್ ಆ್ಯಪ್’ ಪರಿಚಯಿಸಿದೆ.
ಲಾಭವು ನೇರವಾಗಿ ಸಾಕಣೆದಾರರಿಗೆ ಸಿಗಲು ನಿಗಮವು ಕ್ರಮ ಕೈಗೊಂಡಿದ್ದು, ಕೇಂದ್ರ ಸರ್ಕಾರದ ‘ಎನ್‌ಸಿಡಿಇಎಕ್ಸ್’ನ ‘ನ್ಯಾಷನಲ್ ಇ ಮಾರ್ಕೆಟಿಂಗ್ ಲಿಮಿಟೆಡ್’ ಆ್ಯಪ್ ಅನ್ನು ಅಭಿವೃದ್ಧಿಪಡಿಸಿದೆ.
ಸಾಕಣೆದಾರರು ಹಾಗೂ ರೈತ ಉತ್ಪಾದಕ ಸಂಘಗಳ ಪ್ರತಿನಿಧಿಗಳಿಗೆ ಪ್ರಾಯೋಗಿಕ ತರಬೇತಿಯನ್ನು ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ, ಚಿಕ್ಕಮಗಳೂರು, ತುಮಕೂರು, ಚಿತ್ರದುರ್ಗ, ದಾವಣಗೆರೆ, ಕಲಬುರ್ಗಿ, ಬೆಳಗಾವಿ ಜಿಲ್ಲೆಗಳಲ್ಲಿ ನಿಗಮವು ನೀಡುತ್ತಿದೆ.