ಮನೆ ಅಪರಾಧ ಲಾರಿಗೆ ಕಾರು ಡಿಕ್ಕಿ: ಮೂವರು ಸಾವು

ಲಾರಿಗೆ ಕಾರು ಡಿಕ್ಕಿ: ಮೂವರು ಸಾವು

0

ತುಮಕೂರು(Tumkur): ಲಾರಿಗೆ ಕಾರು ಡಿಕ್ಕಿ ಹೊಡೆದು ಕಾರಿನಲ್ಲಿದ್ದ ಇಬ್ಬರು ಮಕ್ಕಳು ಸೇರಿದಂತೆ ಮೂವರು ಸಾವನ್ನಪ್ಪಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ಶಿರಾ ತಾಲ್ಲೂಕಿನ ತರೂರು ಗೇಟ್ ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದ್ದು, ಕಡವಿಗೆರೆ ನಿವಾಸಿಗಳಾದ ಅವಿನಾಶ್ (28) ಮತ್ತು ಅವರ ಮಗಳು ಪ್ರಣಂತಿ (5), ಅವಿನಾಶ್ ಸಂಬಂಧಿಕರ ಮಗಳು ಸೌಖ್ಯ ( 4) ಮೃತಪಟ್ಟ ದುರ್ದೈವಿಗಳು.

ಅವಿನಾಶ್ ಲಾರಿ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಶಿರಾದಿಂದ ನೆಲಹಾಳ್‌ಗೆ ತೆರಳುವಾಗ ಅಪಘಾತ ಸಂಭವಿಸಿದೆ.

ಅವಿನಾಶ್ ಮತ್ತು ಪ್ರಣಂತಿ ಸ್ಥಳದಲ್ಲಿಯೇ ಮೃತಪಟ್ಟರೆ, ಸೌಖ್ಯ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ.

ಹಿಂದಿನ ಲೇಖನಐಬಿಪಿಎಸ್ ಪ್ರೊಬೇಷನರಿ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಮುಂದಿನ ಲೇಖನಮೈಸೂರು: ಕುರಿ, ಮೇಕೆ ಮಾರಾಟಕ್ಕೆ ‘ಆ್ಯಂಡ್ರಾಯ್ಡ್ ಆ್ಯಪ್‌’