ಮನೆ ಅಪರಾಧ ಮೈಸೂರು: ಸರಗಳ್ಳತನ, ಮನೆಗಳ್ಳತನ ಮಾಡುತ್ತಿದ್ದ ಆರೋಪಿಗಳ ಬಂಧನ- 20.40 ಲಕ್ಷ ರೂ. ಚಿನ್ನಾಭರಣ ವಶ

ಮೈಸೂರು: ಸರಗಳ್ಳತನ, ಮನೆಗಳ್ಳತನ ಮಾಡುತ್ತಿದ್ದ ಆರೋಪಿಗಳ ಬಂಧನ- 20.40 ಲಕ್ಷ ರೂ. ಚಿನ್ನಾಭರಣ ವಶ

0

ಮೈಸೂರು: ಸರಗಳ್ಳತನ, ಮನೆಗಳ್ಳತನ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು 15.50 ಲಕ್ಷ ರೂ ಮೌಲ್ಯದ 312 ಗ್ರಾಂ ಚಿನ್ನಾಭರಣ, 868 ಗ್ರಾಂ ಬೆಳ್ಳಿಯ ಆಭರಣ, 3 ವಾಚ್​​ ಹಾಗೂ ಒಂದು ಕ್ಯಾಮರಾ ವಶಪಡಿಸಿಕೊಂಡಿದ್ದಾರೆ.

ಈ ಪತ್ತೆ ಕಾರ್ಯದಿಂದ ಮೈಸೂರು ನಗರ, ವಿದ್ಯಾರಣ್ಯಪುರಂ ಠಾಣೆಯ 2 ಸರಗಳ್ಳತನ, ಕುವೆಂಪು ನಗರ, ಉದಯಗಿರಿ ಪೊಲೀಸ್ ಠಾಣೆಗಳ ತಲಾ ಒಂದೊಂದು ಸರಗಳ್ಳತನ ಪ್ರಕರಣಗಳು, ಸರಸ್ವತಿಪುರಂ, ನಜರ್ ಬಾದ್, ಆಲನಹಳ್ಳಿ, ದಕ್ಷಿಣ ಕನ್ನಡ ಜಿಲ್ಲೆಯ ವೇಣೂರು ಠಾಣೆಯಲ್ಲಿ ತಲಾ ಒಂದೊಂದು ಕಳವು ಪ್ರಕರಣ, ನಜರ್‌ಬಾದ್ ಠಾಣೆಯಲ್ಲಿ ಒಂದು ಮನೆಗಳ್ಳತನ ಪ್ರಕರಣ, ನಜರ್‌’ಬಾದ್ ಮತ್ತು ವಿಜಯನಗರ ಠಾಣೆಯಲ್ಲಿ ತಲಾ ಒಂದೊಂದು ಸಾಮಾನ್ಯ ಕಳವು ಪ್ರಕರಣಗಳು ಪತ್ತೆಯಾಗಿದೆ.

ವಿಶೇಷ ಪೊಲೀಸ್ ತಂಡವು ಮತ್ತೊಬ್ಬ ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಮಂಡಿ ಠಾಣೆಯ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ 1.50 ಲಕ್ಷ ರೂ. ಬೆಲೆ ಬಾಳುವ 30 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.

ಈ ಸಂಬಂಧ 4ನೇ ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದ್ದು, ಜಯಲಕ್ಷ್ಮೀಪುರಂ ಠಾಣೆಯ ವ್ಯಾಪ್ತಿಯ ಕಳವು ಪ್ರಕರಣ ಹಾಗೂ ಹಾಸನ ಟೌನ್ ಪೊಲೀಸ್ ಠಾಣೆಯ ವ್ಯಾಪ್ತಿಯ ಕಳವು ಪ್ರಕರಣಗಳಗೆ ಸಂಬಂಧಿಸಿದಂತೆ 2.40 ಲಕ್ಷ ರೂ. ಮೌಲ್ಯದ 38 ಗ್ರಾಂ ಚಿನ್ನಾಭರಣ ಮತ್ತು ಒಂದು ಕಾರನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತರಿಂದ ಒಟ್ಟು 20.40 ಲಕ್ಷ ರೂ. ಮೌಲ್ಯದ 380 ಗ್ರಾಂ ತೂಕದ ಚಿನ್ನದ ಆಭರಣ, 868 ಗ್ರಾಂ ತೂಕದ ಬೆಳ್ಳಿಯ ಆಭರಣ ಹಾಗೂ ಒಂದು ಕಾರು ಮತ್ತು ಕ್ಯಾಮರಾವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಹಿಂದಿನ ಲೇಖನಚಳಿಗಾಲದಲ್ಲಿ ಬಾಳೆಹಣ್ಣು ರಸಾಯನ ಸೇವಿಸುವುದರಿಂದ ಸಾಕಷ್ಟು ಪ್ರಯೋಜನ
ಮುಂದಿನ ಲೇಖನಕಾಂತಾರದ ‘ವರಾಹ ರೂಪಂ’ ವಿರುದ್ಧದ ನಿಷೇಧ ತೆಗೆದುಹಾಕಿದ ಕೋರ್ಟ್