ಮನೆ ಮನರಂಜನೆ ಕಾಂತಾರದ ‘ವರಾಹ ರೂಪಂ’ ವಿರುದ್ಧದ ನಿಷೇಧ ತೆಗೆದುಹಾಕಿದ ಕೋರ್ಟ್

ಕಾಂತಾರದ ‘ವರಾಹ ರೂಪಂ’ ವಿರುದ್ಧದ ನಿಷೇಧ ತೆಗೆದುಹಾಕಿದ ಕೋರ್ಟ್

0

ತೈಕ್ಕುಡಂ ಬ್ರಿಡ್ಜ್ ತಂಡಕ್ಕೆ ದೊಡ್ಡ ಹಿನ್ನೆಡೆ ಎಂಬಂತೆ ಕೋಝಿಕೋಡ್ ಜಿಲ್ಲಾ ನ್ಯಾಯಾಲಯವು ಕಾಂತಾರದ ‘ವರಾಹ ರೂಪಂ’ ಹಾಡಿನ ವಿರುದ್ಧದ ನಿಷೇಧವನ್ನು ತೆಗೆದುಹಾಕಿದೆ.

ಹಾಡಿನ ರಾಗವನ್ನು ತಮ್ಮ ಆಲ್ಬಂ ‘ನವರಸನ್‌’ನಿಂದ ನಕಲು ಮಾಡಲಾಗಿದೆ ಎಂದು ಆಕ್ಷೇಪಿಸಿ ತೈಕುಡಂ ಬ್ರಿಡ್ಜ್‌ ಅರ್ಜಿ ಸಲ್ಲಿಸಿತ್ತು. ಕೋಯಿಕ್ಕೋಡ್‌ ಮತ್ತು ಪಾಲಕ್ಕಾಡ್‌’ನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯಗಳಲ್ಲಿ ಪ್ರಕರಣ ದಾಖಲಾಗಿತ್ತು.

ಜಿಲ್ಲಾ ನ್ಯಾಯಾಲಯಗಳು ವಿಧಿಸಿದ್ದ ಆಕ್ಷೇಪ ಪ್ರಶ್ನಿಸಿ ‘ಕಾಂತಾರ’ ತಂಡ ಕೇರಳ ಹೈಕೋರ್ಟ್‌ ಮೆಟ್ಟಿಲೇರಿತ್ತು. ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್‌ ವಿವಾದವನ್ನು ಕೆಳ ನ್ಯಾಯಾಲಯಗಳಲ್ಲೇ ಬಗೆಹರಿಸಿಕೊಳ್ಳುವಂತೆ ನಿರ್ದೇಶನ ನೀಡಿತ್ತು.

ಅದರಂತೆ ಇಂದು (ನ. 25) ‘ಕಾಂತಾರ’ ಚಿತ್ರತಂಡ ಮತ್ತು ತೈಕುಡಂ ಬ್ರಿಡ್ಜ್‌ನ ವಾದವನ್ನು ಆಲಿಸಿದ ಕೆಳ ನ್ಯಾಯಾಲಯ ಹಾಡಿಗೆ ವಿಧಿಸಿದ್ದ ತಡೆಯಾಜ್ಞೆ ತೆರವುಗೊಳಿಸಿತು.

ಚಿತ್ರತಂಡದ ಪರವಾಗಿ ‘ವರಾಹ ರೂಪಂ’ ಗೀತರಚನೆಕಾರ ಶಶಿರಾಜ್‌ ಕಾವೂರು ವಾದ ಮಂಡಿಸಿದ್ದರು.

‘ಕಾಂತಾರ’ ಚಿತ್ರಕ್ಕೆ ಅಜನೀಶ್‌ ಲೋಕನಾಥ್‌ ಸಂಗೀತ ನೀಡಿದ್ದಾರೆ. ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿರುವ ಹೊತ್ತಿನಲ್ಲೇ ತೈಕುಡಂ ಬ್ರಿಡ್ಜ್‌ ಈ ತಡೆಯಾಜ್ಞೆ ತಂದಿತ್ತು. ಈ ಸನ್ನಿವೇಶಕ್ಕೆ ಚಿತ್ರತಂಡ ಯಾವುದೇ ಪ್ರತಿಕ್ರಿಯೆ ನೀಡದೆ ಕಾನೂನು ಹೋರಾಟ ಮುಂದುವರಿಸಿತ್ತು. ತೈಕುಡಂ ಬ್ರಿಡ್ಜ್‌ ಪರವಾಗಿ ಸುಪ್ರೀಂ ಕೋರ್ಟ್‌ ವಕೀಲ ಸತೀಶ್‌ ಮೂರ್ತಿ ವಾದ ಮಂಡಿಸಿದ್ದರು.

ಹಿಂದಿನ ಲೇಖನಮೈಸೂರು: ಸರಗಳ್ಳತನ, ಮನೆಗಳ್ಳತನ ಮಾಡುತ್ತಿದ್ದ ಆರೋಪಿಗಳ ಬಂಧನ- 20.40 ಲಕ್ಷ ರೂ. ಚಿನ್ನಾಭರಣ ವಶ
ಮುಂದಿನ ಲೇಖನಸಲಿಂಗ ವಿವಾಹ ಪರಿಗಣಿಸಲು ಕೋರಿ ಅರ್ಜಿ: ಕೇಂದ್ರ ಸರ್ಕಾರ, ಅಟಾರ್ನಿ ಜನರಲ್’ಗೆ ಸುಪ್ರೀಂ ನೋಟಿಸ್