ಮನೆ ಮನರಂಜನೆ ಮೈಸೂರು: ‘ಬಹುರೂಪಿ ರಾಷ್ಟ್ರೀಯ ರಂಗೋತ್ಸವ’ ಕ್ಕೆ ಚಾಲನೆ

ಮೈಸೂರು: ‘ಬಹುರೂಪಿ ರಾಷ್ಟ್ರೀಯ ರಂಗೋತ್ಸವ’ ಕ್ಕೆ ಚಾಲನೆ

0

ಮೈಸೂರು(Mysuru): ಇಲ್ಲಿನ ರಂಗಾಯಣದ ಆವರಣದಲ್ಲಿ‌ ಗುರುವಾರ ಸಂಜೆ ‘ಬಹುರೂಪಿ ರಾಷ್ಟ್ರೀಯ ರಂಗೋತ್ಸವ’ ಕ್ಕೆ ಚಾಲನೆ ದೊರೆಯಿತು.


ವನರಂಗದ ಆವರಣದಲ್ಲಿ ಜಾನಪದ ತಜ್ಞ ಡಾ‌.ಪಿ.ಕೆ.ರಾಜಶೇಖರ್ ಅವರು, ನವಿಲಿನ ವೇಷ ಧರಿಸಿ ಬಂದ ಕಲಾವಿದನ ಗರಿಗಳಲ್ಲಿದ್ದ ‘ಭಾರತೀಯತೆ’ಯ ವಿವಿಧ ಕಲೆಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಾನಪದೋತ್ಸವಕ್ಕೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ದೇಶದ ಎಲ್ಲ ಸಂಸ್ಕೃತಿಯ ಮೂಲ ಜಾನಪದ. ಈ ಮಾತೃ ಸಂಸ್ಕೃತಿಯು ಸಾವಿರಾರು ವರ್ಷಗಳಿಂದ ನಮಗೆ ಕೊಡುಗೆಯಾಗಿ ಬಂದಿದ್ದು, ಅದನ್ನು ಉಳಿಸಿಕೊಳ್ಳಬೇಕಾಗಿರುವುದು ಎಲ್ಲರ ಜವಾಬ್ದಾರಿ ಎಂದರು.

ಪರಂಪರೆಯ ಅದ್ಭುತ ಸಾಹಿತ್ಯವನ್ನು ಜನಪದರು ಹೃದಯದಲ್ಲಿ ಇಟ್ಟುಕೊಂಡಿದ್ದಾರೆ. ಮಹಾ ಕಾವ್ಯಗಳನ್ನು ಅನಕ್ಷರಸ್ಥರು ನೆನಪಿನಲ್ಲಿರಿಸಿಕೊಂಡಿದ್ದಾರೆ. ಆಧುನಿಕ ಕಾಲಘಟ್ಟದಲ್ಲಿರುವ ನಾವು ಮೂಲದಾಟಿಯಲ್ಲೇ ಜಾನಪದ ಕಾವ್ಯಗಳನ್ನು ಹಾಡಬೇಕು. ಕಾಪಿಡಬೇಕು ಎಂದು ಹೇಳಿದರು.

ಜನಪದ‌ ನಾಡಪದ. ಹಳ್ಳಿಯಲ್ಲಿ ಮಾತ್ರ ಜಾನಪದವಿದೆ ಎಂದುಕೊಳ್ಳುವುದು ತಪ್ಪು. ನಗರದಲ್ಲೂ ಇದೆ‌. ಹಳ್ಳಿಗಳಲ್ಲಿ ಮಾತ್ರ ಕಜ್ಜಾಯ ಮಾಡುತ್ತಾರೆಯೇ ಎಂದು ಪ್ರಶ್ನಿಸಿದರು.

ಯಕ್ಷಗಾನ ಕಲಾವಿದ ಕೆರೆಮನೆ ಶಿವಾನಂದ ಹೆಗಡೆ, ರಂಗಾಯಣ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ, ಉಪ ನಿರ್ದೇಶಕರಾದ ನಿರ್ಮಲಾ ಮಠಪತಿ, ಜಾನಪದೋತ್ಸವ ಸಂಚಾಲಕರಾದ ಗೀತಾ ಮೋಂಟಡ್ಕ, ರಂಗೋತ್ಸವದ ಸಂಚಾಲಕ ಜಗದೀಶ್ ಮನೆವಾರ್ತೆ ಇದ್ದರು.