ಮನೆ ಸುದ್ದಿ ಜಾಲ ಮೈಸೂರು: ರಸ್ತೆ ದುರಸ್ತಿ ಕಾಮಗಾರಿಗೆ ಭೂಮಿ ಪೂಜೆ

ಮೈಸೂರು: ರಸ್ತೆ ದುರಸ್ತಿ ಕಾಮಗಾರಿಗೆ ಭೂಮಿ ಪೂಜೆ

0

ಮೈಸೂರು(Mysuru): ನಗರದ ನಜರ್‌’ಬಾದ್ ಪೊಲೀಸ್ ಠಾಣೆಯಿಂದ ಮೈಮುಲ್‌ ಡೈರಿವರೆಗೆ 1.50 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ರಸ್ತೆ ದುರಸ್ತಿ ಕಾಮಗಾರಿಗೆ ಬಸವೇಶ್ವರ ಹಾಗೂ ಮಹದೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಮೇಯರ್‌ ಶಿವಕುಮಾರ್‌ ಗುರುವಾರ ಭೂಮಿ ಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಮೇಯರ್, ಈ ರಸ್ತೆಯು ಬಹಳ ಹಾಳಾಗಿದ್ದು ದುರಸ್ತಿಪಡಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದರು. ಮೂರು ತಿಂಗಳ ಹಿಂದೆಯೇ ಕಾಮಗಾರಿ ಆರಂಭಿಸಲು ಕರೆದಿದ್ದ ಟೆಂಡರ್‌ನಲ್ಲಿ ಒಬ್ಬರು ಮಾತ್ರ ಪಾಲ್ಗೊಂಡಿದ್ದರು. ಮತ್ತೆ ಟೆಂಡರ್‌ ಪ್ರಕ್ರಿಯೆ ನಡೆಸಿದ್ದರಿಂದ ವಿಳಂಬವಾಯಿತು ಎಂದರು.

ಇಲ್ಲಿ ಡಾಂಬರೀಕರಣ ಕಾಮಗಾರಿ ನಡೆಯಲಿದೆ. ಪ್ರಮುಖ ರಸ್ತೆಗಳಲ್ಲಿ ಇದೂ ಒಂದಾಗಿರುವ ಕಾರಣದಿಂದಾಗಿ ಆದ್ಯತೆ ನೀಡಲಾಗಿದೆ. 2–3 ವರ್ಷಗಳು ಬಾಳಿಕೆ ಬರುವಂತಹ ಗುಣಮಟ್ಟ ಕಾಪಾಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ನಗರಪಾಲಿಕೆ ಸದಸ್ಯರಾದ ಸತ್ಯರಾಜ್, ಛಾಯಾದೇವಿ ಇದ್ದರು.

ಪರಿಶೀಲನೆ: ಸಿದ್ದಾರ್ಥನಗರ, ಡಾ.ರಾಜ್‌ಕುಮಾರ್ ರಸ್ತೆಯಲ್ಲಿ ನಡೆಯುತ್ತಿರುವ ಟ್ಯಾಂಕ್, ರಸ್ತೆ, ಚರಂಡಿ, ಯುಜಿಡಿ ಪೈಪ್‌’ಲೈನ್ ಅಳವಡಿಕೆ ಕಾಮಗಾರಿಗಳನ್ನು ಮೇಯರ್ ಪರಿಶೀಲಿಸಿದರು.

ಉಪ ಮೇಯರ್ ಡಾ.ಜಿ.ರೂಪಾ, ನಗರಪಾಲಿಕೆ ಆಯುಕ್ತ ಜಿ.ಲಕ್ಷ್ಮೀಕಾಂತ್ ರೆಡ್ಡಿ, ಎಸ್‌’ಇ ಮಹೇಶ್, ಎಇ ರಂಜಿತ್‌ ಕುಮಾರ್, ವಾಣಿವಿಲಾಸ ನೀರು ಸರಬರಾಜು ಮಂಡಳಿ ಎಇ ಸುವರ್ಣಾ ಇದ್ದರು.