ಮನೆ ಅಪರಾಧ ಮೈಸೂರು: ಇಬ್ಬರು ಡ್ರಗ್ ಪೆಡ್ಲರ್ ​ಗಳ ಬಂಧಿಸಿದ ಸಿಸಿಬಿ ಪೊಲೀಸರು

ಮೈಸೂರು: ಇಬ್ಬರು ಡ್ರಗ್ ಪೆಡ್ಲರ್ ​ಗಳ ಬಂಧಿಸಿದ ಸಿಸಿಬಿ ಪೊಲೀಸರು

0

ಮೈಸೂರು: ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಡ್ರಗ್ ಪೆಡ್ಲರ್ ​ಗಳನ್ನು ಬಂಧಿಸಿದ್ದಾರೆ.

ಒಡಿಶಾ ಮೂಲದ ರಾಜಿಕ್ ಮಲ್ಲಿಕ್​​, ಆಂಧ್ರ ಮೂಲದ ಜಾಫರ್ ಬಂಧಿತರು.

ಸಿಸಿಬಿ ಪೊಲೀಸರು ಬಂಧಿತರಿಂದ 40 ಲಕ್ಷ ಮೌಲ್ಯದ 85 ಕೆ.ಜಿ ಗಾಂಜಾ ಜಪ್ತಿ ಮಾಡಿದ್ದಾರೆ. ಸಾತಗಳ್ಳಿ ಬಳಿ ಬೊಲೆರೋ ವಾಹನದಲ್ಲಿ ಗಾಂಜಾ ಸಾಗಿಸುವಾಗ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಆರೋಪಿಗಳು ಒಡಿಶಾದಿಂದ ರೈಲಿನಲ್ಲಿ ಗಾಂಜಾ ತಂದು ಮಾರುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಮೈಸೂರು ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದಿನ ಲೇಖನಮೈಸೂರು: ಪೊಲೀಸ್ ಕಾನ್ಸ್ ಟೇಬಲ್ ಗಳ ವರ್ಗಾವಣೆ
ಮುಂದಿನ ಲೇಖನಲೋಕಸಭಾ ಚುನಾವಣೆ: ಪಿಎಸ್‍ ಐ ಮತ್ತು ಆರ್ ಎಸ್ ಐ ವರ್ಗಾವಣೆ