ಮನೆ ಕೃಷಿ ಮೈಸೂರು: ದ್ವಿದಳ ಧಾನ್ಯಗಳ  ಬೆಳೆಗೆ ಪ್ರೋತ್ಸಾಹ

ಮೈಸೂರು: ದ್ವಿದಳ ಧಾನ್ಯಗಳ  ಬೆಳೆಗೆ ಪ್ರೋತ್ಸಾಹ

0

ಮೈಸೂರು: 2023-24 ರ ನವ ಮುಂಗಾರು ಹಂಗಾಮಿನಲ್ಲಿ ದ್ವಿದಳ ಧಾನ್ಯ, ಎಣ್ಣೆ ಕಾಳು ಹಾಗೂ ಹತ್ತಿ ಬೀಜಗಳ ಅವಶ್ಯಕತೆ ಇದ್ದು, ಸದರಿ ಬಿತ್ತನೆ ಬೀಜಗಳನ್ನು ಜಿಲ್ಲೆಯ ಪರಿಕರ ಮಾರಾಟಗಾರರಿಂದ ರೈತರಿಗೆ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ತಾಲೂಕಿನಲ್ಲಿ ಇರುವ ಚಿಲ್ಲರ ಬಿತ್ತನೆ ಬೀಜ ಮಾರಾಟಗಾರರ ಬಳಿ ಬಿತ್ತನೆ ಬೀಜಗಳು ಲಭ್ಯವಿದ್ದು, ಎಲ್ಲಾ ರೈತರಿಗೂ ನೀಡಲು ಕ್ರಮ ಕೈಗೊಳ್ಳಲಾಗಿರುತ್ತದೆ.

Join Our Whatsapp Group

ರೈತರು ಹತ್ತಿ ಬಿತ್ತನೆ ಬೀಜಗಳ ಬದಲಿಗೆ ಪರ್ಯಾಯ ದ್ವಿದಳಧಾನಗಳಾದ ಹೆಸರು, ಉದ, ಅಲಸಂದ ಹಾಗೂ ಎಣ್ಣೆಕಾಳು ಬೆಳೆಗಳಾದ ಸೂರ್ಯಕಾಂತಿ, ನಲಗಡಲೆ ಮತ್ತು ಎಳ್ಳು ಹಾಗೂ ಸಿರಿಧಾನಗಳಾದ ನವಣಿ, ಸಾಮೆ ಮತ್ತು ಹಾರಕ ಬೆಳೆಗಳನ್ನು ಬೆಳೆಯುವಂತೆ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರಾದ ಡಾ.ಬಿ.ಎಸ್. ಚಂದ್ರಶೇಖರ್ ರವರು ತಿಳಿಸಿದ್ದಾರೆ.

 ಹೆಚ್ಚಿನ ಮಾಹಿತಿಗಾಗಿ ದೂ.ಸಂ:8277933162 ಹಾಗೂ ಸಹಾಯಕ ಕೃಷಿ ನಿರ್ದೇಶಕರ ಕಛೇರಿ ನಿರ್ದೇಶಕರನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದಿನ ಲೇಖನಆರ್ ಸಿಬಿ vs ಕೆಕೆಆರ್: ಎರಡು ತಂಡಗಳ ಸಂಭಾವ್ಯ ಪ್ಲೇಯಿಂಗ್ XI ವಿವರಣೆ ಇಲ್ಲಿದೆ
ಮುಂದಿನ ಲೇಖನಮಲಯಾಳಂ ಸುದ್ದಿ ವಾಹಿನಿ ಮೀಡಿಯಾ ಒನ್ ಪ್ರಸಾರಕ್ಕೆ ಹೇರಲಾಗಿದ್ದ ನಿಷೇಧ ತೆರವುಗೊಳಿಸಿದ ಸುಪ್ರೀಂ ಕೋರ್ಟ್